x

Subscribe to our mailing list

* indicates required
Email Format
x











More about yourself *



How do you plan to use these resources?






ENGLISH | KANNADA
ಪ್ರಿಪೇರ್, ನಾಟ್ ರಿಪೇರ್ ಎಂಬ ಧ್ಯೇಯದೊಂದಿಗೆ ಮಕ್ಕಳ ಬಾಲ್ಯಪೂರ್ವ ಹಂತದೆಡೆಗೆ ಕಾಳಜಿ ವಹಿಸುವುದು ಮತ್ತು ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮವನ್ನು ಅಕ್ಷರ ಫೌಂಡೇಶನ್ ಆರಂಭಿಸಿದ ಅತ್ಯಂತ ಪ್ರಾರಂಭಿಕ ಹಂತದ ಕಾರ್ಯಕ್ರಮವಾಗಿದೆ. ಅದರ ಬೃಹತ್ ಘಟಕಾಂಶವು ಕರ್ನಾಟಕದಲ್ಲಿ ಜಾರಿಗೊಂಡ ಮಕ್ಕಳ ಸಮಗ್ರ ವಿಕಾಸ ಸೇವಾ ಯೋಜನೆಯ ಅಧಿಕಾರಿ ವರ್ಗದವರ ಬಳಕೆಗೆ ಉಪಯುಕ್ತವಾದ ಸಂಪನ್ಮೂಲಗಳ ಸಿದ್ಧತೆ ಮತ್ತು ಸಂವಹನ ಸಂಬಂಧಿತ ವಿಚಾರಗಳನ್ನು ಒಳಗೊಂಡಿದೆ.
ಇವುಗಳು ಅಂಗನವಾಡಿ ಮಕ್ಕಳಿಗೆ ಚಟುವಟಿಕೆಯ ಪುಸ್ತಕಗಳ ರೂಪದಲ್ಲಿದ್ದು, ಶಾಲಾಪೂರ್ವ ಶಿಕ್ಷಕ ತರಬೇತುದಾರರ ಕೈಪಿಡಿಗಾಗಿ ವಿಷಯಾಧಾರಿತ ಪಠ್ಯಕ್ರಮ ಯೋಜನೆಯಿಂದ ಪಡೆದುಕೊಂಡ ವ್ಯಾಪಕ ಮಟ್ಟದ ಸಾಮಗ್ರಿಗಳಾಗಿವೆ. ಎಲ್ಲಾ ದಾಖಲೆಗಳು ಸಂಪನ್ಮೂಲ ವಿಭಾಗದಲ್ಲಿ ಮಂಡಿಸಲ್ಪಟ್ಟಿದ್ದು ಅವುಗಳು ಭಾರತ ಸರ್ಕಾರದ ರಾಷ್ಟ್ರೀಯ ಇ.ಸಿ.ಸಿ.ಇ ನೀತಿ(E.C.C.E) ಹಾಗೂ ಪಠ್ಯಕ್ರಮ ಚೌಕಟ್ಟಿನ ಅಂಶಕ್ಕೆ ಅನುಗುಣವಾಗಿವೆ.
ಈ ಕೆಳಗಿನ ಬೋಧನಾ ಕಲಿಕಾ ಸಮಾಗ್ರಿಗಳನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು ಮತ್ತು ಯಾವುದೇ ಕ್ಷೇತ್ರದಲ್ಲಿ ಬಳಸಬಹುದು.





ಶಾಲಾ ಪೂರ್ವ ಶಿಕ್ಷಣದ ತರಬೇತಿದಾರರ ಕೈಪಿಡಿ
ಇದೊಂದು ಸಂಪನ್ಮೂಲ ಪುಸ್ತಕವಾಗಿದ್ದು ಇದರ ಸಹಾಯದಿಂದ ಅಂಗನವಾಡಿ ಕಾರ್ಯಕರ್ತೆಯ ಸಾಮರ್ಥ್ಯವನ್ನು ಬೆಳೆಸಲು ಯಾರಾದರೂ ಪ್ರಯತ್ನಿಸಬಹುದಾಗಿದೆ. ಈ ಕೈಪಿಡಿಯು ಮೇಲ್ವಿಚಾರಕರಿಗೂ / ಸಿ.ಡಿ.ಪಿ.ಒ ಗಳಿಗೂ ಉಪಯುಕ್ತವಾಗಬಲ್ಲದು. ಇದರ ಮೂಲಕ ಅವರು ತಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶಿಸಬಹುದು.
ಶಿಶುವಿನ ಆರಂಭಿಕ ಶಿಕ್ಷಣದ ಕ್ಯಾಲೆಂಡರ್
ಇದೊಂದು ವಾಲ್ ಫ್ಲಿಪ್ ಮಾದರಿಯ ಪುಸ್ತಕ (flip-book) ಮತ್ತು ಇದು ದಿನದರ್ಶಿಕೆಯಾಗಿದೆ. ಇದು ಮಗುವಿನ ವಿಕಾಸದ ಮೂಲಭೂತ ಅಂಶಗಳು, ಆರಂಭಿಕ ವರ್ಷಗಳಲ್ಲಿ ಮಗುವಿನ ವಿಶೇಷ ಅಗತ್ಯಗಳು, ಸೂಚಿತ ವಿಷಯಗಳು, ಅಂಗನವಾಡಿಯ ವೇಳಾ ಪಟ್ಟಿ ಮತ್ತು ರಾಜ್ಯ ಇಸಿಸಿಇ ನಿಯಮಾವಳಿಗಳನ್ನು ಇದು ಒಳಗೊಂಡಿದೆ.
ಬಾಲ ವಿಕಾಸ ಸಮಿತಿ ಸದಸ್ಯರ ತರಬೇತಿ ಕೈಪಿಡಿ
ಇದೊಂದು ಸರಳವಾದ ಕೈಪಿಡಿಯಾಗಿದ್ದು, ಬಾಲ ವಿಕಾಸ ಸಮಿತಿಯ ಸದಸ್ಯರು ತಾವು ಪ್ರತಿನಿಧಿಸುವ ಅಂಗನವಾಡಿಗಳನ್ನು ಸಂವರ್ಧಿಸುವ ನಿಟ್ಟಿನಲ್ಲಿ ವಹಿಸಬೇಕಾಗಿರುವ ಪಾತ್ರಗಳು ಮತ್ತು ಹೊಣೆಗಾರಿಕೆಗಳನ್ನು ತಿಳಿಸುತ್ತದೆ.
ಮಕ್ಕಳ ಅಭ್ಯಾಸ ಪುಸ್ತಕಗಳು
4-6 ರ ವಯೋಮಾನದ ಮಕ್ಕಳಿಗಾಗಿ ಮೂರು ಸಂಪುಟಗಳಲ್ಲಿ ರೂಪಿತವಾದ ಚಟುವಟಿಕೆಗಳ ಹಾಳೆಗಳನ್ನು ಇವು ಒಳಗೊಂಡಿವೆ. ಜೊತೆಗೆ ಪೂರ್ವ ಶೈಕ್ಷಣಿಕ ಕೌಶಲಗಳನ್ನು ಮತ್ತು ಶಾಲೆಯ ಸಿದ್ಧತೆ ಸಜ್ಜುಗೊಳಿಸುವ ಕೌಶಲಗಳನ್ನು ಇವು ಒಳಗೊಂಡಿವೆ. ಇವುಗಳು ದಿನದರ್ಶಿಕೆಗಳೊಂದಿಗೆ ಬಳಸಲು ಸೂಕ್ತವಾದ ಮಾರ್ಗದರ್ಶಿಯಾಗಿದೆ ಮತ್ತು ದಿನದರ್ಶಿಕೆಯಲ್ಲಿನ ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಕ್ರಮದಲ್ಲಿ ಪಟ್ಟಿ ಮಾಡಲು ಅನುಕೂಲ ಕಲ್ಪಿಸುತ್ತವೆ.
ಶಾಲಾ ಪೂರ್ವ ಶಿಕ್ಷಣದ ಮೌಲ್ಯಾಮಾಪನ ಮಾರ್ಗದರ್ಶಿ
ಈ ಮಾರ್ಗದರ್ಶಿಯು ಅಂಗನವಾಡಿಯಲ್ಲಿ 2 ರಿಂದ 6 ರ ವಯೋಮಾನದ ಮಕ್ಕಳ ಮೌಲ್ಯಾಮಾಪನವನ್ನು ಕುರಿತಂತೆ ಹಂತ ಹಂತವಾಗಿ ನಿರ್ದೇಶನಗಳನ್ನು ಸವಿವರವಾಗಿ ತಿಳಿಸುತ್ತದೆ. ಮೌಲ್ಯಾಮಾಪನವು ವಿಕಾಸದ ಎಲ್ಲಾ ವಲಯಗಳನ್ನು ಒಳಗೊಂಡಿರುತ್ತದೆ ಮತ್ತು ಮಕ್ಕಳ ಕಲಿಕೆಯ ಫಲಿತಗಳನ್ನು ಮಾಪನದ ರೂಪದಲ್ಲಿ ಒದಗಿಸುತ್ತದೆ.



All Akshara Foundation Resources are licensed under a Creative Commons Attribution 4.0 International License). Under this license you are free to:

Share — copy and redistribute the material in any medium or format,
Adapt — remix, transform, and build upon the material for any purpose.

You must give appropriate credit to Akshara Foundation, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use. You may not apply legal terms or technological measures that legally restrict others from doing anything the license permits.

See: https://creativecommons.org/licenses/by/4.0