x

Subscribe to our mailing list

* indicates required
Email Format
x











More about yourself *



How do you plan to use these resources?






ENGLISH | KANNADA
ಸ್ವಲ್ಪ ಇಂಗ್ಲೀಷ್ ತುಂಬಾ ಫನ್ – ಇದು ಇಂಗ್ಲೀಷ್ ಅನ್ನು ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಅಕ್ಷರ ಫೌಂಡೇಶನ್ ಸಂಸ್ಥೆಯು ನಡೆಸುತ್ತಿರುವ ಆರಂಭಿಕ ಇಂಗ್ಲೀಷ್ ಭಾಷಾ ಕಾರ್ಯಕ್ರಮವಾಗಿದೆ (ESL). ಇದು ಮಕ್ಕಳ ಸ್ನೇಹಿ, ಶಿಕ್ಷಕ ಸಹಕಾರಿ ಕಾರ್ಯಕ್ರಮವಾಗಿದ್ದು, ಪ್ರಾಥಮಿಕವಾಗಿ ಆಲಿಸುವ-ಅರ್ಥಗ್ರಹಿಸುವಿಕೆ ಕೌಶಲ್ಯ (L), ಮಾತನಾಡುವ ಕೌಶಲ್ಯ (S), ಓದುವ ಮೂಲ ಕೌಶಲ್ಯ (R) ಹಾಗೂ ಬರೆಯುವ ಕೌಶಲ್ಯ (W) ಗಳನ್ನು ಪರಿಣಾಮಕಾರಿಯಾಗಿ ಒಳಗೊಂಡಂತೆ ವಿನ್ಯಾಸಗೊಳಿಸಲಾಗಿದೆ.

ಈ ಸಾಮಗ್ರಿಯು ಕೌಶಲ್ಯಗಳ ಬೋಧನೆಗೆ ಪರಿಚಿತವಾದ ಸಾಂಧರ್ಬಿಕ ಕಥೆಗಳು ಮತ್ತು ವಿನ್ಯಾಸಗಳನ್ನು ಒಳಗೊಂಡಿದ್ದು, ಪ್ರಥಮ ಭಾಷೆಯಾಗಿ ಇಂಗ್ಲೀಷ್ ಅನ್ನು ಕಲಿಯದ ಶಿಕ್ಷಕರಲ್ಲಿಯೂ ಆತ್ಮವಿಶ್ವಾಸವನ್ನು ವೃದ್ಧಿಸುವ ರೀತಿಯಲ್ಲಿ ರಚಿಸಲ್ಪಟ್ಟಿದೆ. ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಆಧರಿಸಿ ಕಾರ್ಯಕ್ರಮದ ಪಠ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಈ ಬೋಧನಾ-ಕಲಿಕಾ ಸಾಮಗ್ರಿಗಳು ಉಚಿತವಾಗಿ ದೊರೆಯುವಂತೆ ರೂಪಿಸಲಾಗಿದ್ದು, ಅವುಗಳನ್ನು ಸುಲಭವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು ಮತ್ತು ಯಾವುದೇ ಭೌಗೋಳಿಕ ಪ್ರದೇಶದಲ್ಲಿ ಬಳಸಬಹುದು.

ಈ ಸಾಮಗ್ರಿಯು ಒಳಗೊಂಡ ಅಂಶಗಳು:
• ಸಂಭಾಷಣೆಗೆ ಚಿತ್ರಸಹಿತ ಚಾರ್ಟ್‍ನ ಪುಟಗಳು.
• ಪಾಠಯೋಜನೆಗಾಗಿ ಸಾಧನ ರೂಪದಲ್ಲಿ ಶಿಕ್ಷಕರ ಕೈಪಿಡಿ.
• ಧ್ವನಿ ಪರಿಚಯಿಸಲು ವರ್ಣಮಾಲಾ ಮಿಂಚುಪಟ್ಟಿಗಳು.
• ಓದುವಿಕೆಯನ್ನು ಸರಳವಾಗಿಸಲು ಓದುವ ಕಾರ್ಡ್‍ಗಳು.
• ಓದುವ ಹಾಗೂ ಬರೆಯುವ ಅಭ್ಯಾಸ ವೃದ್ಧಿಸಲು ಅಭ್ಯಾಸ ಪುಸ್ತಕಗಳು.





ಹಂತ 1
ಹಂತ 1 - ಇದರ ಪಠ್ಯವು ಆರಂಭಿಕ ಹಂತದಲ್ಲಿರುವವರಿಗೆ, ಪರಿಚಿತವಾದ ವಿಷಯಗಳ ಮೂಲಕ ಬಳಸಲು ಸರಳ ಭಾಷೆಯಲ್ಲಿ ರಚಿಸಲಾಗಿದೆ. ಅರ್ಥಗ್ರಹಣದೊಡನೆ ಆಲಿಸುವಿಕೆಗೆ ಒತ್ತು ನೀಡಿರುವುದರಿಂದ, ಇದು ಆರಂಭಿಕ ಮಾತುಗಾರಿಕೆಯನ್ನು ಪ್ರೋತ್ಸಾಹಿಸುತ್ತದೆ.
ಚಿತ್ರಸಹಿತ ಚಾರ್ಟ್
ಚಾರ್ಟ್‍ನಲ್ಲಿ ಪರಿಚಿತವಾದ ಏಳು ವಿಷಯಗಳು ಮತ್ತು ಕಥೆಗಳಿದ್ದು, ಸರಳ ಭಾಷೆಯಲ್ಲಿ ರಚಿಸಲ್ಪಟ್ಟಿದೆ.
ಶಿಕ್ಷಕರ ಕೈಪಿಡಿ
ಈ ಕೈಪಿಡಿಯು ಸುಲಭ ಸಂಭಾಷಣೆಗಾಗಿ ಸಂಖ್ಯೆಗಳಾಗಿ ಹಾಗೂ ಭಾಗಗಳಾಗಿ ವಿಂಗಡಿಸಿದ ಚಿತ್ರಗಳನ್ನು ಹೊಂದಿದೆ. ಕೈಪಿಡಿಯು ಅಭ್ಯಾಸ ಪುಸ್ತಕದ ಬಳಕೆ, ಪ್ರಾಸಪದಗಳು ಮತ್ತು ಧ್ವನಿಗಳ ಬೋಧನೆಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.
ವರ್ಣಮಾಲಾ ಮಿಂಚುಪಟ್ಟಿಗಳು
ಈ ಮಿಂಚುಪಟ್ಟಿಗಳನ್ನು ಬಳಸಿ ಚಿಕ್ಕ-ಚಿಕ್ಕ ಪದಗಳು ಹಾಗೂ ಪರಿಚಿತ ಚಿತ್ರಗಳ ಮೂಲಕ ಧ್ವನಿಗಳನ್ನು (Phonics) ಪರಿಚಯಿಸಬಹುದು.
ಅಭ್ಯಾಸ ಪುಸ್ತಕ
ಅಭ್ಯಾಸ ಪುಸ್ತಕವು ಆರಂಭಿಕರಿಗೆ ಅಕ್ಷರಗಳ ಧ್ವನಿಯ ಜೊತೆಗೆ ಇಂಗ್ಲೀಷ್ ಬರೆವಣಿಗೆಯನ್ನು ಪರಿಚಯಿಸುತ್ತದೆ.



ಹಂತ 2
ಹಂತ 2 - ಈ ಹಂತವು ಆರಂಭಿಕ ಹಂತದಲ್ಲಿ ಆಲಿಸುವ ಕೌಶಲ್ಯಗಳನ್ನು ಬೆಳೆಸುತ್ತದೆ. ನಂತರದ ಸಂದರ್ಭದಲ್ಲಿ ಹೆಚ್ಚೆಚ್ಚು ವಿಷಯಗಳು ಮತ್ತು ಪರಿಚಿತ ಕಥೆಗಳ ಮೂಲಕ ಶಬ್ಧ ಭಂಡಾರದ ಸಂವರ್ಧನೆಗೆ ಒತ್ತು ನೀಡಿ, ಓದುವ ಕೌಶಲ್ಯಗಳನ್ನು ಪರಿಚಯಿಸುತ್ತದೆ.
ವರ್ಣಮಾಲಾ ಮಿಂಚುಪಟ್ಟಿಗಳು
ಈ ಮಿಂಚುಪಟ್ಟಿಗಳನ್ನು ಬಳಸಿ, ಚಿತ್ರಗಳು, ಚಿಕ್ಕ ಚಿಕ್ಕ ಪದಗಳು ಹಾಗೂ ಹಿಂಬದಿಯಲ್ಲಿ ನೀಡಲಾಗಿರುವ ಪದಗಳ ಮೂಲಕ ಧ್ವನಿಯನ್ನು ಪರಿಚಯಿಸಬಹುದು.
ಅಭ್ಯಾಸ ಪುಸ್ತಕ
ಅಭ್ಯಾಸ ಪುಸ್ತಕವು ಅಕ್ಷರಗಳ ಉಚ್ಚಾರಣೆ, ಮೂರು ಅಕ್ಷರದ ಪದಗಳನ್ನು ರಚನೆ, ಹಾಗೂ ಚಿಕ್ಕ ವಾಕ್ಯಗಳನ್ನು ಓದಲು ಮತ್ತು ಬರೆಯಲು ಮಗುವಿಗೆ ಸಹಕರಿಸಲು ಚಟುವಟಿಕೆಗಳನ್ನು ಒಳಗೊಂಡಿದೆ.
ಚಿತ್ರಸಹಿತವಾದ ಚಾರ್ಟ್
ಈ ಚಾರ್ಟ್ 8 ವಿಷಯಗಳು ಮತ್ತು ಕಥೆಗಳನ್ನು ಹೊಂದಿದೆ. ಇವುಗಳ ಮೇಲೆ ಸಂಭಾಷಣೆಯನ್ನು ವಿನ್ಯಾಸಗೊಳಿಸಲಾಗಿದೆ.
ಶಿಕ್ಷಕರ ಕೈಪಿಡಿ
ಈ ಕೈಪಿಡಿಯು ಶಿಕ್ಷಕರಿಗೆ ಪ್ರಶ್ನೆ-ಉತ್ತರ, ಧ್ವನಿಗಳು, ಕಥೆಗಳು. ಪ್ರಾಸಪದಗಳ ಮೂಲಕ ಸಂಭಾಷಣೆ ನಡೆಸುವ ಜೊತೆಗೆ ಅಭ್ಯಾಸ ಪುಸ್ತಕವನ್ನು ಬಳಸುವ ಕುರಿತಾಗಿಯೂ ಸಹ ಮಾರ್ಗಸೂಚಿಯನ್ನು ಒಳಗೊಂಡಿದೆ.
ಓದುವ ಕಾರ್ಡುಗಳು
ಇದು 7 ಕಾರ್ಡುಗಳನ್ನು ಒಳಗೊಂಡ ಸೆಟ್ ಆಗಿದ್ದು (1 ರಿಂದ 7), ಸುಲಭವಾಗಿ ಓದುವುದನ್ನು ಕಲಿಸುತ್ತದೆ ಮತ್ತು ಆಕರ್ಷಕವಾಗಿ ಸರಳ ಪದಗಳನ್ನು ಬಳಸಿಕೊಳ್ಳುತ್ತದೆ. ಗಟ್ಟಿಯಾಗಿ ಹೇಳುವ ಪದಗಳು ಹೆಚ್ಚುವರಿ ಶಬ್ದಭಂಡಾರ ನೀಡುತ್ತದೆ.



ಹಂತ 3
ಹಂತ 3 - ಇದು ಹೊಸ ಶಬ್ದಭಂಡಾರದ ಪದಗಳನ್ನು, ವಾಕ್ಯಗಳ ಸಂರಚನೆಯನ್ನು ಪರಿಚಯಿಸುತ್ತದೆ ಹಾಗೂ ಸಂಭಾಷಣೆ ಮತ್ತು ಓದುವಿಕೆಯನ್ನು ಉತ್ತೇಜಿಸುತ್ತದೆ.
ವರ್ಣಮಾಲಾ ಮಿಂಚುಪಟ್ಟಿಗಳು
ಈ ಮಿಂಚುಪಟ್ಟಿಗಳನ್ನು ಚಿಕ್ಕ ಪದಗಳು ಮತ್ತು ಗುರುತಿಸಬಹುದಾದ ಚಿತ್ರಗಳ ಮೂಲಕ ಧ್ವನಿಗಳನ್ನು (Phonics) ಪರಿಚಯಿಸಲು ಬಳಸಬಹುದು. ಈ ಪರಿಚಿತವಾದ ಪದಗಳು ಚಿಕ್ಕ ವಾಕ್ಯಗಳ ರಚನೆಗೆ ಸಹಾಯಕವಾಗುತ್ತವೆ.
ಅಭ್ಯಾಸ ಪುಸ್ತಕ
ಅಭ್ಯಾಸ ಪುಸ್ತಕವು ಮಕ್ಕಳಿಗೆ ಚಿಕ್ಕ ಪದಗಳ ಅಭ್ಯಾಸಕ್ಕಾಗಿ ಚಟುವಟಿಕೆಗಳನ್ನು ಒಳಗೊಂಡಿದೆ, ವಾಕ್ಯಗಳನ್ನು ಓದಲು ಮತ್ತು ಬರೆಯಲು ಸಹಕರಿಸುತ್ತದೆ. ಮೂಲ ಭಾಷಿಕ ಸಂರಚನೆಗಳನ್ನು ಪರಿಚಯಿಸುತ್ತದೆ.
ಚಿತ್ರಸಹಿತವಾದ ಚಾರ್ಟ್
ಈ ಚಾರ್ಟ್ 9 ವಿಷಯಗಳು ಮತ್ತು ಕಥೆಗಳನ್ನು ಹೊಂದಿದೆ. ಇವುಗಳ ಮೇಲೆ ಸಂಭಾಷಣೆಯನ್ನು ವಿನ್ಯಾಸಗೊಳಿಸಲಾಗಿದೆ.
ಶಿಕ್ಷಕರ ಕೈಪಿಡಿ
ಈ ಕೈಪಿಡಿಯು, ಶಿಕ್ಷಕರಿಗೆ ಮಾರ್ಗಸೂಚಿಯನ್ನು ಒಳಗೊಂಡಿದೆ ಹಾಗೂ ಸಂಭಾಷಣೆಗಳು ಮತ್ತು ಪೂರ್ಣ ಭೌತಿಕ ಪ್ರತಿಕ್ರಿಯೆಯ (TPR) ಚಟುವಟಿಕೆಗಳು ಹಾಗೂ ಆಭ್ಯಾಸ ಪುಸ್ತಕದ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುತ್ತದೆ.
ಓದುವ ಕಾರ್ಡುಗಳು
ಇದು ಎಂಟು ಕಾರ್ಡುಗಳ ಸೆಟ್ ಆಗಿದ್ದು (8 ರಿಂದ 15) ಶಬ್ದಭಂಡಾರದ ವಿಸ್ತರಣೆಗೆ ಸಹಾಯಕವಾಗಿದೆ. ವಿದ್ಯಾರ್ಥಿಗಳು ಚಿಕ್ಕ ಪ್ಯಾರಗಳನ್ನು ಓದಲು ಕಲಿಯುತ್ತಾರೆ. ಗಟ್ಟಿಯಾಗಿ ಓದುವ ಪದಗಳು ಶಬ್ದ ಭಂಡಾರಕ್ಕೆ ಸೇರ್ಪಡೆಯಾಗುತ್ತದೆ.



All Akshara Foundation Resources are licensed under a Creative Commons Attribution 4.0 International License). Under this license you are free to:

Share — copy and redistribute the material in any medium or format,
Adapt — remix, transform, and build upon the material for any purpose.

You must give appropriate credit to Akshara Foundation, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use. You may not apply legal terms or technological measures that legally restrict others from doing anything the license permits.

See: https://creativecommons.org/licenses/by/4.0