x

Subscribe to our mailing list

* indicates required
Email Format
xMore about yourself *How do you plan to use these resources?


ENGLISH | KANNADA
ಶೈಕ್ಷಣಿಕ ಸಾಧನೆಯ ಪ್ರಮುಖ ಫಲಿತಗಳು ಸಾಮಾನ್ಯವಾಗಿ ಸಾಕ್ಷರತೆ ಮತ್ತು ಗಣಿತ ಸಾಕ್ಷರತೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. ಸಾಧಿಸಲಾದ ಕಲಿಕಾ ಫಲಿತಗಳ ಆಧಾರದಲ್ಲಿ ಶಿಕ್ಷಣದ ಗುಣಮಟ್ಟವನ್ನು ಅಳೆಯಲಾಗುತ್ತದೆ. ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಿಕೆಯ ಮಟ್ಟವು ಕಲಿಕಾ ಫಲಿತಗಳನ್ನು ಪ್ರಭಾವಿಸುವ ಅಂಶಗಳಲ್ಲಿ ಒಂದಾಗಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ( KSQAAC ) ಮತ್ತು ಅಸರ್( ASER ) 2013ರ ವರದಿಗಳು ಕರ್ನಾಟಕದ ಮಕ್ಕಳ ಕಲಿಕಾ ಫಲಿತಗಳು ಅಪೇಕ್ಷಿತ ಮಟ್ಟದಲ್ಲಿರುವುದಿಲ್ಲವೆಂದು ತೋರಿಸುತ್ತದೆ. ಅಸರ್ ವರದಿ 2013 ಪ್ರಕಾರ ಐದನೇ ತರಗತಿಯ ಕೇವಲ ಶೇ. 18.2 ವಿದ್ಯಾರ್ಥಿಗಳು ಭಾಗಾಕಾರದ ಸಮಸ್ಯೆಗಳನ್ನು ಮಾಡಲು ಶಕ್ತರಾಗಿರುವರೆಂದು ತೋರಿಸುತ್ತದೆ. ಈ ಕಾರಣದಿಂದಾಗಿಯೇ ಅವರನ್ನು ಖಾಸಗಿ ಶಾಲೆಯ ಅದೇ ಮಟ್ಟದ ಮಕ್ಕಳಿಗಿಂತಲೂ ಹಿಂದಕ್ಕೆ ತಳ್ಳುತ್ತದೆ.
The Akshara Idea
ದೇಶದಲ್ಲಿ ಪ್ರಾಥಮಿಕ ಗಣಿತದ ಬೋಧನೆಯ ಸಾಧನಗಳನ್ನು ಮತ್ತು ಅಭ್ಯಾಸಗಳನ್ನು ಸುಧಾರಿಸುವ ಅಗತ್ಯಗಳಿಗೆ ಅಕ್ಷರ ಗಣಿತವು ಸ್ಪಂದಿಸಿದೆ. ಇದು ಪ್ರಾಥಮಿಕ ತರಗತಿಗಳಲ್ಲಿ ಸಂತಸದ ಕಲಿಕೆಗೆ ಮತ್ತು ದೈನಂದಿನ ಬದುಕಿಗೆ ಔಚಿತ್ಯಪೂರ್ಣವಾಗಿರುವಂತೆ ಗಣಿತ ಕೌಶಲ್ಯಗಳನ್ನು ಬೆಳೆಸಲು ‘ಚಟುವಟಿಕೆ ಆಧಾರಿತ ಕಲಿಕೆ’ಯ ತತ್ವವನ್ನಾಧರಿಸಿದೆ. ಗಣಿತ ಬೋಧನಾ/ಕಲಿಕಾ ಸಾಮಗ್ರಿಗಳನ್ನು ಹಾಗು ತರಬೇತಿಯನ್ನು ನೀಡುವುದರೊಂದಿಗೆ ಸರಕಾರಿ ಶಾಲೆಗಳಿಗೆ ಬೆಂಬಲವನ್ನು ಒದಗಿಸುವ ಮೂಲಕ ಅಕ್ಷರ ಗಣಿತವು ಅನುಷ್ಟಾನಗೊಳ್ಳಲ್ಪಡುತ್ತದೆ. ಅಕ್ಷರ ಫೌಂಡೇಶನ್ 1 ರಿಂದ 5 ನೇ ತರಗತಿಯ ಮಕ್ಕಳಿಗೆ ಗಣಿತವನ್ನು ಬೋಧಿಸಲು ಪರಿಣಾಮಕಾರಿ ಬೋಧನಾ/ಕಲಿಕಾ ಸಾಮಗ್ರಿಗಳನ್ನು ಸಿದ್ದಪಡಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಧೀರ್ಘಕಾಲದಲ್ಲಿ ಸುಸ್ಥಿರಗೊಳಿಸಬೇಕೆಂದು ಸಕ್ರಿಯವಾಗಿ ಪ್ರತಿಪಾದಿಸುತ್ತಿದೆ. ಅಕ್ಷರ ಗಣಿತವನ್ನು ವಿಷಯ ತಜ್ಞರು ಮತ್ತು ಕ್ಷೇತ್ರ ವೃತ್ತಿಪರರ ಅಗಾಧ ಸಂಶೋಧನೆ ಮತ್ತು ಅನುಭವಗೊಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಗಣಿತ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸರಕಾರದ ಕಾರ್ಯಕ್ರಮಕ್ಕೆ ಪೂರಕವಾಗಿ ಕೆಲಸ ಮಾಡುವ ಪ್ರಮುಖ ಗುರಿಯನ್ನು ಇದು ಹೊಂದಿರುತ್ತದೆ.
ಗಣಿತವು, “ ಭೀತಿಯನ್ನು ಹುಟ್ಟಿಸುವ ವಿಷಯ”ವೆಂದು ಪರಿಗಣಿಸಲ್ಪಟ್ಟಿದೆ ಅಲ್ಲದೇ ಯಾವುದೇ ಅನುಭವಜನ್ಯ ಕಲಿಕೆಯಿಲ್ಲದೇ ಬೋಧಿಸಲ್ಪಡುತ್ತದೆ. ಅಕ್ಷರ ಗಣಿತವು ಆಕರ್ಷಣೀಯ ಮತ್ತು ದೀರ್ಘ ಬಾಳಿಕೆಯ ಮೂರ್ತ ಕಲಿಕಾ ಸಾಮಗ್ರಿಗಳನ್ನು ಹೊಂದಿದ್ದು, ಮಗುವಿನ ಸಕ್ರಿಯ ಬಾಗವಹಿಸುವಿಕೆಗೆ ಒತ್ತು ನೀಡುವುದರ ಮೂಲಕ ಸರಕಾರದ ಪಠ್ಯಕ್ರಮದಲ್ಲಿ ಒಳಗೊಂಡಿರುವ ಗಣಿತದ ಪರಿಕಲ್ಪನೆಗಳ ಕಲಿಕೆಯನ್ನು ಸುಗಮಗೊಳಿಸಿದೆ.

ಅಕ್ಷರ ಗಣಿತ ಮಾದರಿಯು ಮೂರ್ತ, ಪ್ರಾತಿನಿಧ್ಯಾತ್ಮಕ, ಮತ್ತು ಅಮೂರ್ತ ಹಂತಗಳ ಕಾರ್ಯತಂತ್ರಗಳ ಮೇಲೆ ಆಧರಿಸಿದೆ. ಕಿಟ್ನಲ್ಲಿರುವ ವಿವಿದ ಬೋಧನಾ/ಕಲಿಕಾ ಸಾಮಗ್ರಿಗಳು ಬಹುಉಪಯೋಗಿಯಾಗಿದ್ದು ಪ್ರಾರಂಭಿಕ ಹಂತದಲ್ಲಿ ಮೂರ್ತ ಲೆಕ್ಕಾಚಾರಗಳನ್ನು ಮಾಡಲು ಸಹಾಯಕಾರಿಯಾಗಿದ್ದು, ಪ್ರಾತಿನಿಧ್ಯಾತ್ಮಕ ಹಂತದಲ್ಲಿ ಲೆಕ್ಕವನ್ನು ಚೌಕ ಗೆರೆಗಳಿರುವ ಪುಸ್ತಕಗಳಲ್ಲಿ ಕಾರ್ಯವಿಧಾನದ ಮೂಲಕ ಪ್ರತಿನಿಧಿಸಲಾಗುವುದು. ನಂತರ ಗಣಿತದ ಅಮೂರ್ತ ಪರಿಕಲ್ಪನೆಗಳನ್ನು ತಿಳಿದುಕೊಳ್ಳಲು ಗಣಿತ ಸಂಬಂಧಿತ ಆಟ ಮತ್ತು ದೈನಂದಿನ ಜೀವನಕ್ಕೆ ಅನ್ವಯಿಸುವಂಥ ವಾಕ್ಯ ರೂಪದ ಸಮಸ್ಯೆಗಳನ್ನು ಕೊಟ್ಟು ಆ ಮೂಲಕ ಕಲಿಕೆಯನ್ನು ಧೃಢಪಡಿಸಿಕೊಳ್ಳಲಾಗುವುದು.

ಶಿಕ್ಷಕರಿಗೆ ಅಕ್ಷರ ಗಣಿತದ ಬೋಧನಾ ತತ್ವ, ಕಲಿಕಾ ವಿಧಾನ, ಕಲಿಕಾ ಸಾಮಗ್ರಿಗಳನ್ನು ಬಳಸುವ ವಿಧಾನಗಳ ಕುರಿತು ತರಬೇತಿ ನೀಡಲಾಗುವುದು. ಶಿಕ್ಷಕರಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನವನ್ನು ನಡೆಸಲು ಮಾರ್ಗದರ್ಶಿಗಳನ್ನು ಸಹ ಒದಗಿಸಲಾಗುವುದು.

ಈ ಕಾರ್ಯಕ್ರಮದ ಮೌಲ್ಯಮಾಪನವನ್ನು ಸಂಶೋಧನಾ ತಂಡವು ನಡೆಸುತ್ತದೆ ಮತ್ತು ಕಾರ್ಯಕ್ರಮದ ಪರಿಣಾಮವನ್ನು ತಿಳಿಯಲು ಇಲ್ಲಿ randomized controlled trial -RCT ಯನ್ನು ನಡೆಸಲಾಗುತ್ತದೆ.

2014ರ ಆರಂಭದಲ್ಲಿ ಅಕ್ಷರವು, ರಾಜ್ಯ ಸರಕಾರದ ಮುಂದಿಟ್ಟ ಗಣಿತ ಕಲಿಕಾ ಆಂದೋಲನದ ಪ್ರಸ್ತಾವನೆಯನ್ನು ಸರಕಾರವು ಸ್ವೀಕರಿಸಿತ್ತು. ಪ್ರತಿಯೊಂದು ಶಾಲೆಯು ಅಕ್ಷರ ಗಣಿತ ಬೋಧನಾ ಕಲಿಕಾ ಸಾಮಗ್ರಿಗಳ ಒಂದು ಕಿಟ್ ಅನ್ನು ಮತ್ತು ಕನಿಷ್ಟ ಒಬ್ಬ ತರಬೇತಿ ಪಡೆದ ಶಿಕ್ಷಕ/ಶಿಕ್ಷಕಿಯನ್ನು ಹೊಂದಿರುವುದು ಖಾತರಿಪಡಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ, ರಾಜ್ಯ ಸರಕಾರವು ಕರ್ನಾಟಕದ ಎಲ್ಲಾ 46,000 ಸರಕಾರಿ ಪ್ರಾಥಮಿಕ ಶಾಲೆಗಳು ಈ ಕಾರ್ಯಕ್ರಮದಡಿಯಲ್ಲಿ ಬರುವಂತೆ ಬೆಂಬಲಿಸುವಂತೆ ಮಾಡುವುದು ಇಲ್ಲಿಯ ಗುರಿಯಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷವಾದ 2014-15 ರಲ್ಲಿ ಈ ಕಾರ್ಯಕ್ರಮವು ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬೆಳ್ಳಾರಿ ಮತ್ತು ಯಾದಗರಿಯ 7800 ಶಾಲೆಗಳ 4 ಮತ್ತು 5 ನೇ ತರಗತಿಗಳಲ್ಲಿ ಕಲಿಯುತ್ತಿರುವ 3,00,000 ಕ್ಕಿಂತಲೂ ಹೆಚ್ಚಿನ ಮಕ್ಕಳಿಗೆ ಅನುಕೂಲ ಮಾಡಿಕೊಡುವುದು. 8200 ಶಿಕ್ಷಕ/ಶಿಕ್ಷಕಿಯರು ಈ ಕಾರ್ಯಕ್ರಮವನ್ನು ನಡೆಸಲು ತರಬೇತಿ ನೀಡಲಾಗುವುದು. ಸರಕಾರವು ಕಾರ್ಯಕ್ರಮಕ್ಕೆ 80% ಹಣಕಾಸು ನಿಧಿ ಒದಗಿಸಿದರೆ ಅಕ್ಷರವು ಉಳಿದ 20% ನ್ನು ಕ್ರೋಢೀಕರಿಸಬೇಕಾಗಿದೆ.

ಅಕ್ಷರ ಗಣಿತ - ವ್ಯಾಪ್ತಿ

Programme Coverage

ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿರಿ.
Story Of Change - ಕವಿತ ಮರಳಿ ಶಾಲೆಯಲ್ಲಿ

ಕವಿತ ಮರಳಿ ಶಾಲೆಯಲ್ಲಿ

ಕವಿತಳ ಆಸಕ್ತಿಯು ಹಿಂತಿರುಗಿ ಬಂದಿದೆ, ಆಕೆಯ 
   ಶಾಲಾ ಜೀವನವು ಪುನಶ್ಚೇತನಗೊಂಡಿದೆ 
    ಮತ್ತು ಮತ್ತೊಮ್ಮೆ ಆಕೆ ತನ್ನ 
      ವಿದ್ಯಾಭ್ಯಾಸವನ್ನು ಮುಂದುವರೆಸಲು 
       6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. 
        ಶಿಕ್ಷಕಿಯಾಗುವುದು ಅವಳ ಆಕಾಂಕ್ಷೆ .
ಕವಿತಳ ಆಸಕ್ತಿಯು ಹಿಂತಿರುಗಿ ಬಂದಿದೆ, ಆಕೆಯ ಶಾಲಾ ಜೀವನವು ಪುನಶ್ಚೇತನಗೊಂಡಿದೆ ಮತ್ತು ಮತ್ತೊಮ್ಮೆ ಆಕೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ಶಿಕ್ಷಕಿಯಾಗುವುದು ಅವಳ ಆಕಾಂಕ್ಷೆ .
ಇನ್ನಷ್ಟು ಓದಿರಿ
ಇನ್ನಷ್ಟು ಓದಿರಿ

ಕರ್ನಾಟಕದ ಮುಖ್ಯ ಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ಸರಕಾರವು ಅಕ್ಷರ ಗಣಿತ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷ 2014-15 ರಿಂದ ಹೈದರಾಬಾದ್ ಕರ್ನಾಟಕದ ಸರಕಾರಿ ಶಾಲೆಗಳಿಂದ ಪ್ರಾರಂಭಿಸಿ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವುದೆಂಬ ಘೋಷಣೆಯನ್ನು ಮಾಡಿದರು.

ಅಕ್ಷರ ಗಣಿತ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಮಟ್ಟವನ್ನು ಗಣನೀಯವಾಗಿ ಸುಧಾರಿಸಿದೆ ಇದರಿಂದ ಶಿಕ್ಷಕ/ಶಿಕ್ಷಕಿಯರಿಗೆ ಜೀವನ ಸುಲಭಗೊಳಿಸಿದೆಯೆಂದು ಕಂಡು ಬಂದಿದೆ.ಸಂಶೊಧನೆ ಮತ್ತು ಕಾರ್ಯಕ್ರಮದ ವರದಿಗಳಿಗೆ ದಯವಿಟ್ಟು ನಮ್ಮ ಸಂಶೊಧನೆ ವರದಿಗಳು ಮತ್ತು ಸಂಶೋಧನಾ ಲೇಖನಗಳ ಪುಟಗಳನ್ನು ಸಂದರ್ಶಿಸಿ.

ಮೌಲ್ಯಮಾಪನ ಮತ್ತು ಶಾಲಾ ಮಾಹಿತಿ/ದತ್ತಾಂಶಗಳ ಮೇಲೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟುhttp://www.klp.org.in/ ನ್ನು ಸಂದರ್ಶಿಸಿ.