x

Subscribe to our mailing list

* indicates required
Email Format
xMore about yourself *How do you plan to use these resources?


ENGLISH | KANNADA
ಒಂದು ತಾಂಡಾದ ಕಥೆ - ಮಾರುತಿ ಮಲ್ಲಪುರ ಅವರಿಂದ

ಇದೊಂದು ಶಿಕ್ಷಣ ಆಧಾರಿತ ಸಮುದಾಯದ ಕತೆ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಲಂಬಾಣಿಗಳೆಂಬ ಎಂಬ ಬುಡಕಟ್ಟು ಜನಾಂಗದ ಸಮುದಾಯವನ್ನು ಕಾಣಬಹುದು. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಅವರು ವಾಸಿಸುವ ಸ್ಥಳಗಳನ್ನು ತಂಡಾ-ಗಳು ಎಂದು ಕರೆಯುವರು. ಗದಗ ಜಿಲ್ಲೆಯ, ಗ್ರಾಮೀಣ ತಾಲ್ಲೂಕಿನ ಅಡವಿ ಸೋಂಪುರ (ಜಲಶಂಕರ್ ನಗರ) ಎನ್ನುವ ಓಂದು ತಂಡಾ-ದ ಕಥೆ. ಇಲ್ಲಿ 100 ಮನೆಗಳಿದ್ದು, ಸುಮಾರು 350 ಜನಸಂಖ್ಯೆ ಇದೆ. ಇಲ್ಲಿ 4 ಶಿಕ್ಷಕರೊಡನೆ 93 ಮಕ್ಕಳಿರುವ ಸರ್ಕಾರಿ ಪ್ರಾಥಮಿಕ ಶಾಲೆ ಇದೆ.

ನಾನು ಶಾಲೆಗೆ ಭೇಟಿ ಕೊಟ್ಟಾಗ, ವಿದ್ಯಾರ್ಥಿಗಳಿಗೆ ಮೂಲಭೂತ ಅಂಕಗಣಿತದ ಪ್ರಶ್ನೆಗಳನ್ನು ಪರಿಹರಿಸಲು ನೀಡಿಡೆ. ಶೇಕಡ 95ರಷ್ಟು ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸಿದರು. ಇದೊಂದು ಅಪರೂಪದ ತರಗತಿಯಾಗಿತ್ತು.

ಇದರಿಂದ ಕುತೂಹಲವಾದ ನಾನು ಇದರ ರಹಸ್ಯ ಏನೆಂದು ತಿಳಿಯಲು ಅವರ ಪೋಶಕರ ಹಿನ್ನೆಯನ್ನು ಆಳವಾಗಿ ಪರಿಶೀಲಿಸಿದೆ. ಅವರಲ್ಲಿ ಸರಿ ಸುಮಾರು 85 ಶೇಕಡ ಪೋಶಕರು ಗೋವಾಗೆ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಹೋಗುತ್ತಾರೆ ಹಾಗು ಅವರ ಮಕ್ಕಳು ಅವರವರ ಅಜ್ಜಂದಿರ ಜೊತೆ ಇರುತ್ತಾರೆ. ಲಂಬಾಣಿಗಳಿಗೆ ಅವರದ್ದೇ ಆದ ಭಾಶೆ ಇದೆ ಎಂದು ತಿಳಿದು ಆಶ್ಚರ್ಯವಾಯಿತು. ಹಾಗಾಗಿ ಅವರಿಗೆ ಕನ್ನಡ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜವಾಗಿತ್ತು. ಇಂತಹ ಅಡಚಣೆಗಳಿಗೂ ಹೊರತಾಗಿ ಅಲ್ಲಿಯ ಮಕ್ಕಳು ಕನ್ನಡ ಭಾಶೆಯಲ್ಲಿ ಹಾಗು ಅವರಿಗೆ ಅಮೂರ್ತ ಭಾಶಯಾದ ಗಣಿತದಲ್ಲೂ ನಿಪುಣತೆ ಹೊಂದಿದ್ದಾರೆ.

ಅಂತಹ ನಂಬಲಾಗದ ಕಾರ್ಯಕ್ಷಮತೆಗೆ ಸಾಕ್ಷಿ ಖಂಡಿತವಾಗಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಅಭಿವೃಧಿ ಮತ್ತು ಉಸ್ತುವಾರಿ ಸಮಿತಿ (ಎಸ್ಡಿಎಂಸಿ) ಸದಸ್ಯರಿಗೆ ಶಾಲೆಯ ಪ್ರಗತಿ ಮತ್ತು ಫಲಿತಾಂಶಗಳಲ್ಲಿ ಆಸಕ್ತಿ ವಹಿಸುತ್ತದೆ. ಅವರು ಗಣಿತ ಕಲಿಕಾ ಆಂದೋಲನದ (GKA) ಗಣಿತ ಕಿಟ್ನಲ್ಲಿರುವ ¨ಬೋಧನಾ-ಕಲಿಕೆಯ ಸಾಮಗ್ರಿಗಳನ್ನು (TLM's) ಹೇಗೆ ಬಳಸುತ್ತಾರೆಂದು ಕೇಳಿದಾಗ, ಶಿಕ್ಷಕರು ಅದನ್ನು ಗಣಿತದಲ್ಲಿ ಹಿಂದುಳಿದವರು ಉತ್ತಮವಾಗಿ ಉಪಯೋಗ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಈ ಎಲ್ಲದರ ಅಂತಿಮ ಫಲಿತಾಂಶವು ಏನೆಂದರೆ, ವಿದ್ಯಾರ್ಥಿಗಳು 6ನೇ ತರಗತಿಗೆ ಉತ್ತೀರ್ಣರಾದಾಗ, ಪ್ರತಿಷ್ಠಿತ ಸಂಸ್ಥೆಗಳ ಸರಪಳಿಗಳಾದ ನವೋದಯ ವಿದ್ಯಾಲಯ ಅಥವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ಇದು ಸರ್ಕಾರಿ ಮಕ್ಕಳ ಅರ್ಹತೆಯ ಓಂದು ಸಂಕೇತವಲ್ಲದೆ ಬೇರೇನು ಆಗಲು ಸಾಧ್ಯವಿಲ್ಲ ಏಕೆಂದರೆ, ಅಂತಹ ವಸತಿ ಶಾಲೆಳಲ್ಲಿ ದಾಖಲಾತಿ ಪಡೆಯುವುದು ಕಷ್ಟ ಸಾಧ್ಯ. ಇಲ್ಲಿಯ ಮಕ್ಕಳು ಆ ಕ್ಲಿಷ್ಟಕರವಾದ ವಿಶಯವನ್ನು ತಮ್ಮ ಓದಿನ ಬಗೆಗಿನ ಬದ್ಧತೆ ಹಾಗು ಶಿಕ್ಷಕರ ಪರಿಶ್ರಮದಿಂದ ಸಾಧ್ಯವಾಗುವಂತೆ ಮಾಡುತ್ತಾರೆ.

ಓಬ್ಬ ತೀಕ್ಷ್ಣ ದೃಷ್ಟಿಯ ಹುಡುಗ ಮೊದಲ ಬಹುಮಾನ ಗೆಲ್ಲುತ್ತಾನೆ! ಎಂಜಲೀನ ಅವರಿಂದ

ನಾವು ನಿಮಗೆ ಆನಂದ್ ಎಂಬ ಓಬ್ಬ ಹುಡುಗನ ಕಥೆಯನ್ನು ಹೇಳುತ್ತೇವೆ. ಅವನ ಒಂಭತ್ತು ವರ್ಷಗಳ ವರಗೆ ಆತ ಶಾಲೆಯ ಬಾಗಿಲುಗಳನ್ನು ಸಹ ಕಂಡಿರಲಿಲ್ಲ. ಪ್ರಸ್ತುತ ಆತ 4ನೇ ತರಗತಿಯಲ್ಲಿ ಓದುತ್ತಿದ್ದಾನೆ ಹಾಗು ಆತ ಓರ್ವ ಸಾಧಕನೂ ಕೂಡ.

ಧಾರವಾಡ ಜಿಲ್ಲೆಯ, ನವಲಗುಂದ ತಾಲ್ಲೂಕಿನ ಜವೂರ್ ಎಂಬ ಹಳ್ಳಯಿಂದ ಬಂದವನೆ ಆನಂದ್ ಕಿರೇಹೊಸೂರ್. ಈತ ಅವರ ಕುಟುಂಬದ ಕಿರಿಯ ಮಗ ಹಾಗು ಅವನಿಗೆ ವಿವಾಹವಾದ ಓರ್ವ ಅಣ್ಣ ಹಾಗು ನಾಲ್ಕು ಜನ ಅಕ್ಕಂದಿರಿದ್ದಾರೆ. ಈವರೆಗು ಯಾರು ಶಾಲೆಗೆ ಹೋದವರಲ್ಲ. ಆನಂದನ ತಂದೆ ಒಬ್ಬ ಕುರಿ ಕಾಯುವವನು ಮತ್ತು ಅವನ ಹಿರಿಯ ಮಗ ಅವನಿಗೆ ಕುರಿ ಕಾಯುವಲ್ಲಿ ಸಹಾಯ ಮಾಡುತ್ತಾನೆ.

ಜೀವನೋಪಾಯವು ಹೆಚ್ಚು ಅನಿವಾರ್ಯವೆಂದು ಅಭಿಪ್ರಾಯ ಪಟ್ಟ ಅವನ ಪೋಶಕರು, 9ರ ಪ್ರಾಯದ ಹುಡುಗ ಆನಂದನನ್ನು ಶಾಲೆಗೆ ಕಳುಹಿಸದೆ, ಕುರಿಕಾಯುವಲ್ಲಿ ಸಹಾಯಕ್ಕೆ ಬಳಸುತ್ತಿದ್ದರು. ಆನಂದನ ಸಹೋದರಿಯಾದ ದೇವಕ್ಕ ಗದಗ ಜಿಲ್ಲೆಯ ಬಿನದ್ಕಟ್ಟಿ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವನನ್ನು ಆಕೆಯ ಪಾಲನೆಗಾಗಿ ಅಲ್ಲಿಗೆ ಕಳುಹಲಾಗಿತ್ತು.

ಅಲ್ಲಿ, ಶಿಕ್ಷಣ ಇಲಾಖೆಯ ದಾಖಲಾತಿ ಚಾಲನೆ ನಡೆಯುತ್ತಿತ್ತು. ಬಿನದ್ಕಟ್ಟಿ ಗೆ ಗೊತ್ತುಪಡಿಸಿದ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಯು ಆನಂದನನ್ನು ಮನೆಯಲ್ಲಿ ಇದ್ದುದನ್ನು ಕಂಡು ಅವನನ್ನು ಶಾಲೆಗೆ ದಾಖಲು ಮಾಡಿಸಲು ಹೇಳದರು. ಆನಂದನು ಅಲ್ಲಿಗೆ ಬಹಳ ದಿನ ಇರಲು ಬಂದಿರಲಿಲ್ಲ. ಆತನ ಅಕ್ಕ ಅವನನ್ನು ಅಲ್ಲಿಯ ಸರ್ಕಾರಿ ಶಾಲೆಯಲ್ಲಿ 1 ತರಗತಿಗೆ ದಾಖಲು ಮಾಡಿಸಿದರು.

ಒಂಭತ್ತು ವರ್ಷಗಳಲ್ಲಿ ಎಂದೂ ಶಾಲೆಗೆ ಹೋಗದ ಆನಂದ್ಗೆ ಚಡಪಡಿಕೆ ಶುರುವಾಯಿತು. ಆತನಿಗಿಂತ ಕಿರಿಯ ಮಕ್ಕಳೊಡನೆ ತರಗತಿಯಲ್ಲಿ ಕೂರಲು, ಲೇಖನಿ ಹಿಡಿಯಲು ಆಗಲಿಲ್ಲ. ಆತನ ಮನಸ್ಸೆಲ್ಲಾ ಜವೂರಿನಲ್ಲಿದ್ದ ಅವನ ಕುರಿಗಳ ಮೇಲಿತ್ತು. ಅವನನ್ನು ಮತ್ತೆ ಅವನ ಊರಿಗೆ ಕಳುಹಿಸಲು ಅವನು ಅಕ್ಕನಲ್ಲಿ ಕೇಳಿಕೊಂಡನು.

ಅವನ ಶಿಕ್ಷಕಿ ಶ್ಯಾಮಾ, ಆನಂದ್ ಮತ್ತೆ ಶಾಲೆಗೆ ಬರಲು ಒಂದು ದೊಡ್ಡ ಪಾತ್ರವನ್ನು ವಹಿಸಿದರು ಮತ್ತು ಅವರ ಪ್ರೋತ್ಸಾಹ, ಬೆಂಬಲ ಹಾಗು ಪ್ರೇರಣೆಗಳಿಂದ ಅವನು ಶಾಲೆಗೆ ಬರಲು ಮುಂದುವರೆಸಿದನು. ಅವನಿಗೆ ಶಾಲೆಗೆ ಬರಲು ಯಾರಾದರು ಅವನನ್ನು ನೋಡಿಕೊಳ್ಳುವುದು ಹಾಗು ಮುಂದುವರೆಸಲು ಬೇಕಿದ್ದುದು ಬೆಂಬಲವೆಂಬುದು ಅವರಿಗೆ ತಿಳಿದಿತ್ತು. ಶ್ಶಾಮಾರವರು ಅವನಿಗೆ ಓದಿನ, ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥೈಸಿ ಹೇಳಿದರು. ಆಕೆ ಕರುಣಾಳುವಾಗಿದ್ದಳು ಮತ್ತು ಅವನಿಗೆ ಒಂದು ವರ್ಷ ಪುರ್ತಿ ಓದಲು ಮನವೊಲಿಸಿದರು.

ಆನಂದ್ ಆಕೆಯನ್ನು ನಂಬಿದ, ಆಕೆ ಹೇಳಿದೆಲ್ಲವನ್ನು ಕೇಳಿದ, ಕ್ರಮೇಣವಾಗಿ ಕಲಿಯಲು ಆರಂಭಿಸಿದ. ಅವನಲ್ಲಿದ್ದ ಕೀಳರಿಮೆ ಬಹಳ ಶೀಘ್ರವಾಗಿ ಕಡಿಮೆಯಾಯಿತು ಮತ್ತು ಅವನು ತನ್ನ ಹಳ್ಳಿಗೆ ಹೋಗಲು ಇಚ್ಚೆ ಪಡಲಿಲ್ಲ. ಶ್ಯಾಮ ಅವನಿಗೆ 3ನೇ ತರಗತಿಯ ವರೆಗೆ ಶಿಕ್ಷಕರಾಗಿದ್ದರು. ಪ್ರಸ್ತುತ ಅವನು 4ನೇ ತರಗತಿಯಲ್ಲಿ ಸಂತೋಷವಾಗಿ ಪಾಠ ಕಲಿಯುತ್ತಿದ್ದಾನೆ.

ಇತರೆ ಸಾಧನೆಗಳೂ ಸಹ ಬಹಳ ಸಂತೋಷ ನೀಡುತ್ತವೆ. ಬಿನದ್ಕಟ್ಟಿಯಲ್ಲಿ ನಡೆದ ಅಕ್ಷರ ಗ್ರಾಮ ಪಂಚಾಯತ್ ಗಣಿತ ಸ್ಪರ್ಧೆಯಲ್ಲಿ, ಆನಂದ್ 48 ಸ್ಪರ್ಧಿಗಳ ಪೈಕಿ 20/20 ಗಳಿಸಿ ಮೊದಲನೇ ಸ್ಥಾನ ಗಳಿಸಿದ. ಅವನು ತನ್ನ ಬಹುಮಾನದೊಂದಿಗೆ, ಕಣ್ಣಲ್ಲಿ ಸಂತೋಷದ ಕಂಬನಿಯೋಡನೆ ಅವನ ಸ್ಥಾನಕ್ಕೆ ಹಿಂದಿರುಗಿ ಕೂಡುವ ವರೆಗೂ ಅಲ್ಲಿ ಸಭಿಕರು ಚಪ್ಪಾಳೆ ನಿಲ್ಲಿಸಲಿಲ್ಲ. ದೇವಕ್ಕನಿಗೆ ಆಕೆ ನೋಡುತ್ತಿರುವುದನ್ನು ನಂಬಲಾಗಲಿಲ್ಲ. ಕೆಲವರಿಗೆ ಆನಂದ್ ಮೊದಲೇ ಪರಿಚಿತನಾಗಿದ್ದನು. ಈಗ ಈ ಸಾಧನೆಯೊಂದಿಗೆ ಅವನ ವಿಶ್ವಾಸವು ಹೆಚ್ಚುತ್ತಿದೆ ಹಾಗು ಅವನು ಪಂಚಾಯತ್ ನಲ್ಲಿ ಗುರುತಿಸಲ್ಪಡುತ್ತದ್ದಾನೆ.

ನಮ್ಮ ಸುತ್ತ ಮುತ್ತಲಿನಲ್ಲಿ ಇಂತಹ ಅನೇಕ ಅದ್ಭತ ಕಥೆಗಳಿವೆ. ಸ್ಪರ್ಧೆಯಂತಹ ವೇದಿಕೆ ಅವುಗಳನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತದೆ.
ಓರ್ವ ಶಿಕ್ಷಕನ ಸಮರ್ಪಣೆ – ಶಂಬುಲಿಂಗ ಅವರಿಂದ

1 ರಿಂದ 3 ನೇ ತರಗತಿಗಳಿಗೆ ಬೋಧಿಸುವ, ಸ್ವಚ್ಚತೆಗೆ ಆದ್ಯತೆ ನೀಡುವ ನಲಿ-ಕಲಿ ಶಿಕ್ಷಕಿ ಅಲ್ಮಾಸ್ ಕೌಸರ್-ನ ಕಥೆ ಇದು. ಇವರು ಬಾಗೇಪಲ್ಲಿ ತಾಲ್ಲೂಕಿನ ರಾಶ್ಚರೆವು ಕ್ಲಸ್ಟರ್ನ ಅಡಿ ಬರುವ ಡೋರೇನಪಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1-5 ನೇ ತರಗತಿಗಳಿಗೆ ಆಂಗ್ಲ ಬಾಷೆ ಕಲಿಸುತ್ತಾರೆ.

ಪ್ರತಿದಿನ ಬೆಳಗ್ಗೆ ಸ್ನಾನವಿಲ್ಲದೆ, ತಲೆಕೆದರಿದ ಹಾಗು ಕೊಳಕಾದ ಮಕ್ಕಳನ್ನು ಅಲ್ಮಾಸ್ ಎದುರಿಸಬೇಕಾಯಿತು. ಅವರು ಮಕ್ಕಳಿಗೆ ಉತ್ತಮ ಶೃಂಗಾರದ ಅಭ್ಯಾಸದ ಅಗತ್ಯವನ್ನು ಮನವರಿಕೆಮಾಡಿಸಲು ಪ್ರಯತ್ನಪಟ್ಟರು. ಆದರೆ ಅವರ ಎಲ್ಲಾಪ್ರಯತ್ನಗಳು ನಿರರ್ಥಕವಾಗಿದ್ದವು. ಅವರ ವಿದ್ಯಾರ್ಥಿಗಳು ಮನೆಯಲ್ಲಿ ನೀರಿಲ್ಲ, ಸಾಬೂನು ಇಲ್ಲ ಎಂಬ ಕಾರಣಗಳನ್ನು ನೀಡಲಾಂಭಿಸಿದರು.

ಅಲ್ಮಾಸ್ ತಾವು ಬಯಸಿದ ಬದಲಾವಣೆ ತಾವೆ ತರಬೇಕೆಂದು ನಿರ್ಧರಿಸಿ ಸಾಬೂನು ಮತ್ತು ಶಾಂಪುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ತಂದು ಮಕ್ಕಳಿಗೆ ಸ್ನಾನ ಮಾಡಿಸಲು ಪ್ರಾರಂಭಿಸಿದರು. ಮಕ್ಕಳ ಪೋಶಕರು ಅವರಿಗೆ ಸ್ನಾನ ಮಾಡಿಸುವಲ್ಲಿ, ಸ್ವಚ್ಛಗೊಳಿಸುವ ಆಚರಣೆಗಳಲ್ಲಿ ತೊಟಗಿಸಬಾರದೆಂದೂ ಅದರ ಬದಲು ಅವರು ಕಲಿಕೆಯ ಮೇಲೆ ಬೋಧನೆಯ ಮೇಲೆ ಒತ್ತು ನೀಡಬೇಕೆಂದು ಹೇಳದರು. ಅಲ್ಮಾಸ್ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಅವರು ಪೋಶಕರನ್ನು ಶಾಲೆಗೆ ಬಂದು ಮಕ್ಕಳೊಂದಿಗೆ ನೈರ್ಮಲ್ಯದ ವಿಶಯಗಳನ್ನು ಚರ್ಚಿಸಲು ಕೇಳಿದರು. "ನಾವು ಬದಲಾಗುವುದಿಲ್ಲ, ಮಕ್ಕಳು ಶಾಲೆಗೆ ಬರುವ ಮುನ್ನ ಅವರಿಗೆ ಸ್ನಾನ ಮಾಡಿಸುವ ತೊಂದರೆ ತೆಗೆದುಕೊಳ್ಳುವುದಿಲ್ಲ" ಎಂದರು.

ವಿಶಯವು ಅವರ ಕೈಮೀರಿ ಹೋದಾಗ, ಅಲ್ಮಾಸ್ ಅವರು ಶಾಲಾ ಅಭವೃಧಿ ಮತ್ತು ಉಸ್ತವಾರಿ ಸಮಿತಿ (ಎಸ್ಡಿಎಂಸಿ) ಸದಸ್ಯರನ್ನು ಮತ್ತು ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿ, ಅವರಿಂದ ಪೋಷಕರಲ್ಲಿ ನೈರ್ಮಲ್ಯದ ಅರಿವನ್ನು ಮನವರಿಕೆ ಮಾಡಿಕೊಟ್ಟರು. ಸಮುದಾಯವನ್ನು ಅವರ ಕಾರ್ಯದಲ್ಲಿ ತೊಡಗಿಸಿಕೊಂಡಾಗ, ಪೋಶಕರಿಗೆ ತಮ್ಮ ಮಕ್ಕಳ ನೈರ್ಮಲ್ಯದ ಬಗ್ಗೆ, ದಿನ ನಿತ್ಯದ ಸ್ವಚ್ಛತೆಯ ಬಗ್ಗೆ ಹಾಗು ಸ್ವಚ್ಛ ಸಮವಸ್ತ್ರ ಧರಿಸಿ ಶಾಲೆಗೆ ಬರುವ ಬಗ್ಗೆ ಅರಿವು ಮೂಡಿತು.

ಇದೆಲ್ಲದರ ಮಧ್ಯೆ, ಅಲ್ಮಾಸ ಶಕ್ಷಣವನ್ನು ಮರೆತಿರಲಿಲ್ಲ. ವಿದ್ಯಾರ್ಥಿಗಳ ಬಹುಮುಖ ಬೆಳವಣಿಗೆಗೆ ಅಲ್ಮಾಸ್ ಅವರ ಅರ್ಪಣೆ ಮಾದರಿಯಾಗಿದೆ. ಅವರು ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಿದರು ಮತ್ತು ಈಗ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಕಸ್ಲಟರ್ ಮಟ್ಟದ ಯಾವುದೇ ಸ್ಪರ್ಧೆಯಲ್ಲಿ ಅವರ ಶಾಲೆಯ ಮಕ್ಕಳು ಬಹುಮಾನಗಳನ್ನು ಗೆಲ್ಲುತ್ತಾರೆ. ಅಲ್ಲಿನ ಸಮುದಾಯವು ಶಾಲೆಯ ಕಾರ್ಯಾಚರಣೆಯಲ್ಲಿ ಅವರನ್ನು ತೀವ್ರವಾಗಿ ತೊಡಗಿಸಿಕೊಂಡಿದೆ.
ಆದರ್ಶ ಪುರೋಹಿತ / ಎ.ಸ್ಡಿ.ಎಂ.ಸಿ ಅಧ್ಯಕ್ಷ – ರಂಗನಾಥ್ ಅವರಿಂದ

ಇಲ್ಲಿ ನಾವು ಒಬ್ಬ ದೇವಾಲಯದ ಪುರೋಹಿತ ಹಾಗು ಎಸ್ಡಿಎಂಸಿ ಅಧ್ಯಕ್ಷರನ್ನು ಗ್ರಾಮದ ಜನರಿಗೆ ಆದರ್ಶವಾಗಿ ಮಾದರಿಯಾಗಿ ಕಾಣಬಹುದು.

ಕೇವಲ 12ನೇ ತರಗತಿಯವರೆಗೆ ಓದಿದ ಮತ್ತು ಈಗ ಅವರ ಹಳ್ಳಿಯ ಮಕ್ಕಳಿಗೆ ಓದು ಕಲ್ಪಿಸಿ ಕಲಿಸುವ ನೆಮ್ಮದಿಯ ಹಾಗು ಸಂತೋಷದ ಜಗತ್ತನ್ನು ಅನುಭವಿಸುತ್ತಿವುರ ದಯಾನಂದ ಸ್ವಮಿಯವರ ಕಥೆ ಇದು. ತಮ್ಮ ಇಳಿಯ 43ನೇ ವಯಸ್ಸಿನಲ್ಲು ಸಕ್ರಿಯರಾಗಿ ಹಳ್ಳಿಯ ದೇವಾಲಯದ ಪುರೋಹಿತರಾಗಿ, ಸಾಂಕೃತಿಕ ಕಾರ್ಯಕ್ರಮಗಳ ಮುಖ್ಯ ಸಂಘಟಕರಾಗಿ ಮತ್ತು ಶಾಲಾ ಅಭಿವೃಧಿ ಮತ್ತು ಉಸ್ತುವಾರಿ (ಎಸ್ಡಿಎಂಸಿ) ಅಧ್ಯಕ್ಷರಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ದಯಾನಂದ ಸ್ವಾಮಿಯವರು ಬಹುದಿನಗಳಿಂದ ಮತ್ತೊಂದು ನಿರ್ಣಾಯಕ ಕೆಲಸವನ್ನು ಸ್ವಯಂ ನಿಯೋಜಿಸಿಕೊಂಡು ಬಹಳ ಶ್ರದ್ಧೆಯಿಂದ ಕಾರ್ಯಗತಗೊಳಿಸುತ್ತಿದ್ದಾರೆ. ಪ್ರತಿ ದಿನ ಅವರು ಅಕ್ಷರದ ಗಣಿತ ಕಲಿಕಾ ಆಂದೋಲನ (GKA) ಕಿಟ್ನೊಂದಿಗೆ ಗಣಿತವನ್ನು ಕಲಿಸಲು ಅಲ್ಲಿಯ ಸರ್ಕಾರಿ ಶಾಲೆಗೆ ಬರುತ್ತಾರೆ.

ಅವರು ಅಧ್ಯಕ್ಷರಾರಿ ನಿರ್ವಹಿಸಿದ ಒಂದು ಎಸ್ಡಿಎಂಸಿ ಸಭೆಗಳಲ್ಲಿ, ಗಣಿತ ಕಲಿಕಾ ಆಂದೋಲನದ ಕಿಟ್ನಲ್ಲಿ ಬರುವ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕಂಡು ಅದಕ್ಕೆ ಆಕರ್ಶಿತರಾಗಿ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಶಾಲೆಯ ಶಿಕ್ಷಕರು ಮತ್ತು ಅಕ್ಷರದ ಕ್ಷೇತ್ರ ನಿರ್ವಾಹಕರೊಡನೆ ಸಂಹನ ಆರಂಭಿಸಿದರು. ಎಲ್ಲರನ್ನು ಒಟ್ಟು ಗೂಡಿಸುವ ಸಾಮಥ್ಯ೵ ಇರುವ ಸ್ವಾಮಿಯವರು, ಹಳ್ಳಿಯ ಯುವಕರಿಗೆ ಶಾಲೆಗೆ ಬಂದು ಮಕ್ಕಳಿಗೆ ಗಣಿತಶಾಸ್ತ್ರವನ್ನು ಕಲಿಸಲು ಪ್ರೋತ್ಸಾಹಿಸಿದರು ಹಾಗು ಮಕ್ಕಳ್ಳಲ್ಲಿ ಗಣಿತದ ಬಗೆಗಿನ ಭಯವನ್ನು ಹೋಗಲಾಡಿಸಿದರು. ಅವರು ಶಿಕ್ಷಣದ ಪರವಾಗಿ ಶಾಲೆಯ ಪರವಾಗಿ ಬಹಳ ಸಲಕರಣೆಗಳನ್ನು ಹೊಂದಿದವರು. ಎರಡು ವರ್ಷಗಳ ಕಾಲ ಶಾಲೆಗೆ ಹಾಜರಾಗದ ಓರ್ವ ಶಿಕ್ಷಕನನ್ನು ರಾಜಕೀಯ ಪ್ರಭಾವ ಬಳಸಿ ಹೋರಾಡಿ ಶಾಲೆಗೆ ಹಿಂದಿರುಗುವಂತೆ ಮಾಡಿದಿರು. ದಯಾನಂದ ಸ್ವಾಮಿಯವರು ಇಲ್ಲಿ ಈ ಹಳ್ಳಿಯಲ್ಲಿ ಒಂದು ಮಾದರಿ, ರೂಪದರ್ಶಕರಾಗಿ ಯುವಜನರಿಗೆ ಸ್ಪೂರ್ತಿಯಾಗಿ ಮಕ್ಕಳಿಗೆ ಕಲಿಸಲು ಸ್ವಯಂ ಸೇವರಾಗಲು ಪ್ರೇರೇಪಿಸುತ್ತಾರೆ.

1-3-6-9 ಗೋಡೆಯ ಬರವಣಿಗೆಯ ಪರಿಣಾಮ – ಅಯ್ಯಣ್ಣ ಅವರಿಂದ

ಇದು ಅಕ್ಷರದ 1-3-6-9 ಗೊಡೆಯ ಬರವಣಿಗೆಯ ಪ್ರಭಾವದ ಕಥೆ.

ಮಾಲಿಂಗರಾಯ ಶಿವಶರಣಪ್ಪ ಯಾದಗಿರಿ ಜಿಲ್ಲೆಯ ಶಾಹಾಪುರ ತಾಲ್ಲೂಕಿನ, ಐಯ್ಯಲಾ ಗ್ರಾಮದ ಓರ್ವ ಉತ್ಸಾಹಿ ಯುವಕ. ಅವರು ತಮ್ಮ ಡಿ.ಎಡ್ (ಶೀಕ್ಷಣದಲ್ಲಿ ಡಿಪ್ಲೋಮ) ಪುರ್ಣಗೊಳಿಸಿದ್ದಾರೆ ಮತ್ತು ಬಿ.ಎಸ್ಸಿ (ಬ್ಯಾಚಲರ್ ಆಫ್ ಸೈನ್ಸ್‌) ಪದವೀಧರರು. ಅವರ ಗ್ರಾಮದ ಬಗೆಗಿನ ಒಲವು, ಉತ್ಸಾಹ ಹಾಗು ಚಿಂತನಾ ಸ್ವಭಾವ ಅವರನ್ನು ಅಕ್ಷರದ 1-3-6-9 ಗೋಡೆಯ ಬರವಣಿಗಯ ಕಾರ್ಯಕ್ರಮದ ಕಾರ್ಯತಂತ್ರವನ್ನು ತಿಳಿಯಲು ಅವರಲ್ಲಿ ಕುತೂಹಲ ಕೆರಳಿಸಿತು.

ಒಮ್ಮೆ ಅವರು ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಏನು ನಡೆಯದಿರುವುದನ್ನು ಕಂಡು ನಿರಾಶ್ರಿತರಾದರು. ಅಲ್ಲದೆ ಗೋಡೆಯ ಬರಹ ಆರಂಭವಾದಾಗಿನಿಂದಲೂ ಯಾವುದೇ ರೀತಿಯ ಬದಲಾವಣೆ, ಮುಂದುವರಿಕೆ ಸಂಭವಿಸಿರಲಿಲ್ಲ. ಅದಕ್ಕಾಗಿ ಯಾವುದೇ ರೀತಿಯ ಉತ್ಸಾಹವಾಗಲಿ, ಚೈತನ್ಯವಾಗಲಿ ಇರಲಿಲ್ಲ. ಮಾಲಿಂಗರಾಯರು ಶಾಲೆಯಲ್ಲಿ ಓದಿನ ಬಗೆಗೆ, ವಿದ್ಯಾಭ್ಯಾಸದ ಬಗೆಗೆ ಈ ರೀತಿಯಾದ ಅಸಹಜ ವರ್ತನೆಯ ಬಗ್ಗೆ ಕಾರಣ ತಿಳಿಯಲು ಮುಖ್ಯೋಪಾಧ್ಯಾಯರೊಂದಿಗೆ ತೀವ್ರವಾದ ಚರ್ಚೆಯಲ್ಲಿ ತೊಡಗಿದರು. ಅವರಿಗೆ ಮುಖ್ಯೋಪಾಧ್ಯಾಯರಿಂದ ಸಮಾಧಾನಕರ ಅಥವ ತೃಪ್ತಿಕರ ಉತ್ತರ ಸಿಗಲಿಲ್ಲ. ಮುಖ್ಯೋಪಾಧ್ಯಾಯರು ಮಾಲಿಂಗರಾಯರ ವಿಶಯವನ್ನು ಪರಿಗಣಿಸದೆ ವಿಚಾರಮಾಡದೆ, ಅಲ್ಲಿಂದ ಹೊರನಡೆಯಲು ಹೇಳಿದರು.

ಆ ಕ್ಷಣ ಕಾರ್ಯಗತರಾದ ಮಾಲಿಂಗರಾಯರು, ಅಲ್ಲಿಯ ಕ್ಷೇತ್ರ ಶಿಕ್ಷಣ ಅಧಿಕಾರಿ (BEO) ಮತ್ತು ಬ್ಲಾಕ್ ರಿಸೋರ್ಸ ಅಧಿಕಾರಿಯನ್ನು (BRP) ಸಂಪರ್ಕಿಸಿ ಆ ಶಾಲೆಯ ಶೋಚನೀಯ ಹಾಗು ಗಂಭೀರ ಸ್ಥಿತಿಯನ ಬಗ್ಗೆ ತಿಳಿಸಿದರು. ಶಾಲೆಯಲ್ಲಿ ಶೀಕ್ಷಕರ ತೀವ್ರ ಗೈರುಹಾಜರಿಯ ಬಗ್ಗೆ, ಕಳಪೆ ಗುಣಮಟ್ಟದ ಬೋಧನೆಯ ಬಗ್ಗೆ ಹಾಗು 1-3-6-9 ದಿಂದ ರೂಪಿಸಲ್ಪಟ್ಟ ಶಿಕ್ಷಣ ಕಾರ್ಯತಂತ್ರದ ಪಯೋಗವನ್ನು ಅನುಸರಿಸಲಿಲ್ಲವೆಂದು ವರದಿ ನೀಡಿದರು.

ಕ್ಷೇತ್ರ ಶಕ್ಷಣ ಅಧಿಕಾರಿ (BEO) ಮತ್ತು ಬ್ಲಾಕ್ ರಿಸೋರ್ಸ ಅಧಿಕಾರಿಯವರು (BRP) ಶಾಲೆಗೆ ಭೇಟಿ ನೀಡುವುದಾಗಿ ಒಪ್ಪಿಕೊಂಡರು ಮತ್ತು ಹಾಗೆಯೇ ಭೇಟಿ ನೀಡಿ ಶಾಲೆಯ ಬೋಧನಾ-ಕಲಿಕಾ (TLM's) ಸಾಮಗ್ರಿಗಳ ಸಂಗ್ರಹದ ಲೆಕ್ಕ ನೋಡಿ ಮುಖ್ಯೋಪಾಧ್ಯಾಯರಿಗೆ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಲು ಎಚ್ಚರಿಸಿದರು.

ಮುಖ್ಯೋಪಾಧ್ಯಾಯರನ್ನು 1-3-6-9 ಒಳಗೊಂಡ ಗೋಡೆ ಬರವಣಿಗೆಯ ಬಗೆಗೆ ಅವರ ಸ್ಫೂರ್ತಿಯನ್ನು ಕಾರ್ಯಗತಗೊಳಿಸಿವುದಾಗಿ, ಮಾಸಿಕ ಎಸ್ಡಿಎಂಸಿ ಸಭೆಗಳು, ತ್ರೈಮಾಸಿಕ ಪೋಷಕರ ಸಭೆಗಳು, ಸರ್ಕಾರದ ಸುಮುದಾಯತ್ತ ಶಾಲೆಯ ಕಾರ್ಯಕ್ರಮದಡಿ ಮಕ್ಕಳ ಕಲಿಕೆಯ ಸಾಮಥ್ಯ೵ದ ಬಗ್ಗೆ, ಅರೆ ವಾರ್ಷಿಕ ಪೋಷಕರ ವಿಮರ್ಶೆ ಮತ್ತು 9 ತಿಂಗಳವರೆಗಿನ ಮಕ್ಕಳ ನಿಯಮಿತ ಹಾಜರಾತಿ ದಾಖಲೆಗಳನ್ನು ಪಾಲಿಸುವುದಾಗಿ ಖಚಿತಪಡಿಸಿಕೊಂಡರು.

ಈಗ ಮಾಲಿಂಗರಾಯರು ಎ.ಸ್ಡಿ.ಎಂ.ಸಿ ಸದಸ್ಯರನ್ನು ಶಾಲೆಯ ವಿಷಯಗಳಲ್ಲಿ ಹೆಚ್ಚು ಪಾತ್ರವಹಿಸಲು ಪ್ರೋತ್ಸಾಹಿಸುತ್ತಾರೆ ಮತ್ತು ಐಯ್ಯಲ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಕಲಿಕೆಯ ಬಗೆಗೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ.

ಸರ್ಕಾರೇತರ ಸಂಸ್ಥೆಗಳ ಬಗೆಗೆ ಶಿಕ್ಷಕರ ದೃಷ್ಟಿಕೋನವನ್ನು ಬದಲಿಸಿದ ಗಣಿತ ಕಲಿಕಾ ಆಂದೋಲನ (GKA) ಕಾರ್ಯಕ್ರಮ - ಮಂಜುನಾಥ ಬರ್ಕಾರ್ ಅವರಿಂದ

ಗಣಿತ ಕಲಿಕಾ ಆಂದೋಲನವು ಸರ್ಕಾರೇತರ ಸಂಘಟನೆಗಳ ಬಗೆಗೆ ಶಿಕ್ಷಕರ ದೃಷ್ಟಿಕೋನವನ್ನು ಬದಲಾಯಿಸಿದ ಬಗ್ಗೆ ಒಂದು ಕಥೆ.

ಧಾರವಾಡ ಜಿಲ್ಲೆಯಿಂದ 50ಕಿಮೀ ದೂರದಲ್ಲಿರುವ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಲಾವರ ಎಫ್.ಎ 35 ವರ್ಷದ ಓರ್ವ ಶಿಕ್ಷಕ. ಕಳೆದ ಒಂಭತ್ತು ವರ್ಷಗಳಿಂದ ಅವರು ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷರದ ಕ್ಷೇತ್ರಕಾರ್ಯಕರ್ತರು ಅವರ ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದ ಬಗ್ಗೆ ತಲಾವರ-ರಿಂದ ಪ್ರತಿಕ್ರಿಯೆ ತಿಳಿಯಲು ಪ್ರಚೋದಿಸಿ ಪ್ರಯತ್ನಿಸಿದರು. ಆದರೆ ಅವರು ಶಾಲೆಯ ಶಿಕ್ಷಕರಾಗಿದ್ದರೂ ಅದಕ್ಕೆ ಯಾವ ರೀತಿಯಾದ ಆಸಕ್ತಿಯನ್ನು ವ್ಯಕ್ತಪಡಿಸಲಿಲ್ಲ. ಅವರು ಗಣಿತ ಕಲಿಕಾ ಆಂದೋಲನದ ಮೊದಲ ದಿನದ ತರಬೇತಿಯ ಸಮಯದಲ್ಲಿ ಅಥವ ಚರ್ಚೆಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಅಥವ ಉತ್ಸುಕತೆ ತೋರ್ಪಡಿಸಲಿಲ್ಲ.

ತರಬೇತಿಯ ಮುಕ್ತಾಯದ ಮೂರನೆಯ ದಿನದಂದು ಅವರಿಗೆ ತಾವು ಗಣಿತದಂತಹ ಅಮೂರ್ತ, ಸಂಕೀರ್ಣ ಮತ್ತು ಗೊಂದಲಮಯವಾದ ವಿಷವನ್ನು ಬೋಧಿಸುವಾಗ ಏನನ್ನು ಮರೆತಿದ್ದರು ಎಂಬುದರ ಅರಿವಾಯಿತು. ನಂತರ ಅವರು GKA ಕಿಟ್ನಲ್ಲಿರು ಬೋಧನಾ-ಕಲಿಕಾ ಸಾಮಗ್ರಿಗಳನ್ನು ಅವರ ತರಗತಿಗಳಲ್ಲಿ ಉಪಯೋಗಿಸಲು ಪ್ರಾರಂಭಿಸಿದರು. ಅವರನ್ನು ತಮ್ಮ ಹಳೆಯ ಗೊಡ್ಡು ನಂಬಿಕೆಗಳಿಂದ ಹೊರಬರಲು ಇದು ಸಹಾಯಮಾಡಿತು. ಅವರು ಕ್ಷೇತ್ರ ಕಾರ್ಯಕತ೵ರೊಂದಿಗೆ ಸಂವಹನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಲಾವರ್ ಅವರು ಮಕ್ಕಳ್ಳಿಗ ಗಣಿತದ ಬಗೆಗೆ ಮೂಡಿರುವ ಕಠಿಣ ಪರಿಕಲ್ಪನೆಯನ್ನು ನಿರ್ಮೂಲನೆ ಮಾಡಲು ಮತ್ತು ಗಣಿತದ ಮೂಲಭೂತ ಅಂಶಗಳನ್ನು ಅರ್ಥಮಾಡಿಸಲು ಸಹಾಯಕವಾದ ಕಿಟ್ನ ಅಪಾರವಾದ ಸಾಮಥರ್ಯ್‌ವನ್ನು ಕಂಡುಕೊಂಡರು.

ತಲಾವರ್ ಅವರ ವೃತ್ತಿಪರ ಬೆಳವಣಿಗೆ ಚುರುಕಾಗಿತ್ತು. ಇಂದಿನ ದಿನಗಳಲ್ಲಿ ಅವರು ಇತರೆ ಶಿಕ್ಷಕರೊಡನೆ ಶಿಕ್ಷಕರ ಗುಂಪುಗಳೊಂದಿಗೆ ಮತ್ತು ಕ್ಷೇತ್ರ ಕಾರ್ಯಕರ್ತರೊಡನೆ ತಮ್ಮ ತರಗತಿಯಲ್ಲಿ ನಡೆಯುವ ಚಟುವಟಿಕೆಗಳನ್ನು, ಅವರು ಗಣಿತ ಶಾಸ್ತ್ರವನ್ನು ಬೋಧನಾ-ಕಲಿಕಾ (TLM's) ಸಾಮಗ್ರಿಗಳೊಂದಿಗೆ ಹೇಗೆ ಬೋಧಿಸುತ್ತಾರೆಂದು ಹಂಚಿಕೊಳ್ಳುತ್ತಾರೆ. ಆಕ್ಷರ ಕೆಲವು ವಾರಗಳ ಹಿಂದೆ ಸ್ಥಳೀಯ ಆಡಳಿತ ಸಹಕಾರದಲ್ಲಿ ನಡೆಸಿದ ಗ್ರಾಮ ಪಂಚಾಯತ್ ಗಣಿತ ಸ್ಪರ್ಧೆಯಲ್ಲಿ ತಮ್ಮ ಶಾಲೆಯು ಒಂದಕ್ಕಿಂತ ಹೆಚ್ಚು ಬಹುಮಾನಗಳನ್ನು ಗಳಿಸಬೇಕೆಂದು ಬಹಳಾ ಶ್ರಮಿಸಿದರು. ಈ ಸ್ಪರ್ಧೆಯಲ್ಲಿ ಅವರ ಶಾಲೆಯ ಮಕ್ಕಳು ಎರಡು ಬಹುಮಾನಗಳನ್ನು ಗೆದ್ದರು ಎಂದು ತಿಳಿದು ಅವರು ಅಪಾರ ಸಂತೋಷ ವ್ಯಕ್ತಪಡಿಸಿದರು.

ತಲಾವರ್ ಅವರು GKA-ಯ ಒಬ್ಬ ನಿಷ್ಟಾವಂತ ರಾಯಭಾರಿ. ಸರ್ಕಾರೇತರ (NGO) ಸಂಸ್ಥೆಗಳು ಕೇವಲ ಸಾಮಗ್ರಿಗಳನ್ನು ಸರಬರಾಜು ಮಾಡುತ್ತವೆ ಎಂಬ ಅವರ ತಪ್ಪು ಕಲ್ಪನೆಯನ್ನು ಗ್ರಹಿಕೆಗಳನ್ನು ಹೋಗಲಾಡಿಸಿದೆ ಮತ್ತು ಈಗ ಅವರು ಗಣಿತ ಕಿಟ್ನೊಂದಿಗೆ ಅವರ ಯಶಸ್ವೀ ಕಥೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುತ್ತಾರೆ.