x

Subscribe to our mailing list

* indicates required
Email Format
x











More about yourself *



How do you plan to use these resources?






ENGLISH | KANNADA
ಗುಣಾತ್ಮಕ ಶಿಕ್ಷಣವು ಪ್ರತಿಯೊಂದು ಮಗುವಿನ ನಿರಾಕರಿಸಲ್ಪಡಲಾಗದ ಹಕ್ಕು ಎಂಬ ನಂಬಿಕೆಯಿಂದ ಈ ಸಂಸ್ಥೆಯು ಸ್ಥಾಪನೆಗೊಂಡಿದೆ ಮತ್ತು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅನೂಕೂಲ ಅಥವ ಸಂಪನ್ಮೂಲಗಳಿಲ್ಲವೆಂದ ಮಾತ್ರಕ್ಕೆ ಮಕ್ಕಳು ಇದರಿಂದ ವಂಚಿತರಾಗಕೂಡದು ಎನ್ನುವುದು ನಮ್ಮ ನಂಬಿಕೆ.





ಶಾಲಾ –ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿರುವ ಅಂತರಗಳು.
ಸರಳ ವಿಸ್ತರಿಸಬಹುದಾದ ಮತ್ತು ಸುಸ್ಥಿರ ಪರಿಹಾರಗಳ ವ್ಯವಸ್ಥೆಯ ಮೂಲಕ ಚಾಲನೆಗೊಳಿಸುವುದು.
ನಮ್ಮ ಕೆಲಸದ ಪ್ರದರ್ಶನ ಮತ್ತು ಪರಿಣಾಮದ ಮೂಲಕ ಸಮಂಜಸ ವಿಸ್ತರಣೆ ಹಾಗೂ ಕಠಿಣ ಮಾಪನಗಳ ಪರಿಹಾರವನ್ನು ನೀಡುವುದು
ಸಾರ್ವಜನಿಕ ಕ್ಷೇತ್ರದಲ್ಲಿರುವ ಮಾಹಿತಿಯು ಸಮಗ್ರ ರೂಪದಲ್ಲಿ ಲಭ್ಯವಾಗಿರುವಂತೆ ಮತ್ತು ಸಾರ್ವತ್ರೀಕರಣಗೊಳಿಸಲು ವಕಾಲತ್ತು ಮಾಡುವುದು.
ಕಳೆದ 15 ವರ್ಷಗಳಿಂದ ಅಕ್ಷರವು ಸಮಗ್ರವಾದ, ವಿಸ್ತರಿಸಬಹುದಾದ (scalable) ನೋಡಿ ಮಾಡಬಹುದಾದ ಮತ್ತು ಮಿತವ್ಯಯಕಾರಿಯಾಗಿ ವಿನ್ಯಾಸಗೊಳಿಸಿದ ಬಹು ವಿಧದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅಕ್ಷರದ ಎಲ್ಲಾ ಕಾರ್ಯಕ್ರಮಗಳು ಶಿಶು ಕೇಂದ್ರಿತವಾಗಿದ್ದು, ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು; ಶಾಲೆ ಬಿಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಹಾಗೂ ಮಕ್ಕಳ ಕಲಿಕಾ ಫಲಿತಾಂಶಗಳು ಮತ್ತು ಸಮಗ್ರ ಅಭಿವೃದ್ಧಿಯ ಸುಧಾರಣೆಯನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಅವುಗಳನ್ನು ರೂಪಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಅಕ್ಷರವು ಪ್ರಸ್ತುತ ನಡೆಯುತ್ತಿರುವ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ಕಾರ್ಯಕ್ರಮಗಳಿಗೆ ಪೂರಕವಾಗಿ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ನಿಕಟ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದೆ.