x

Subscribe to our mailing list

x











More about yourself *



How do you plan to use these resources?






ENGLISH | KANNADA
ಈ ಕೆಳಗಿನ ಕಾರ್ಯಕ್ರಮಗಳನ್ನು ಬೆಂಬಲಿಸಿ:
ನಿಮ್ಮ ದೇಣಿಗೆಯನ್ನು ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಮಾಡಲು ನೀವು ಬಯಸುವುದಾದಲ್ಲಿ, ಅದನ್ನು ದಯವಿಟ್ಟು “ಅಕ್ಷರ ಫೌಂಡೇಶನ್ ’ ಹೆಸರಿಗೆ ತೆಗೆದು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿರಿ:
ಅಕ್ಷರ ಫೌಂಡೇಶನ್ ,
ಸಂಖ್ಯೆ 621, 5ನೇ ಮುಖ್ಯ ರಸ್ತೆ,
ಒ.ಎಮ್.ಬಿ.ಆರ್. ಲೇ ಔಟ್ (ಏಕ್ಸಿಸ್ ಬ್ಯಾಂಕ್ ಬಳಿ)
ಬಾಣಸವಾಡಿ,
ಬೆಂಗಳೂರು – 560 043
ದೂರವಾಣಿ: 080-25429726/27

ಚೆಕ್ /ಡಿಮಾಂಡ್ ಡ್ರಾಫ್ಟ್ ನೊಂದಿಗೆ ನಿಮ್ಮ ಪೂರ್ತಿ ಹೆಸರು, ಪಾನ್ ಸಂಖ್ಯೆ, ಇ-ಮೈಲ್ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಪೂರ್ತಿ ಅಂಚೆ ವಿಳಾಸ ಮತ್ತು ನೀವು ಯಾವ ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ಬಯಸುವಿರೆಂಬುದನ್ನು ಪತ್ರದಲ್ಲಿ ಬರೆದು ಒಂದು ಪತ್ರವನ್ನು ದಯವಿಟ್ಟು ಲಗತ್ತಿಸಿ.
ದೇಣಿಗೆಯನ್ನು ಬ್ಯಾಂಕ್ ನಿಂದ ಬ್ಯಾಂಕ್ ಗೆ ವರ್ಗಾವಣೆ ಮೂಲಕ ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಕೆಳಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀಡಲಾಗಿದೆ.

ಫಲಾನುಭವಿ ಹೆಸರು: ಅಕ್ಷರ ಫೌಂಡೇಶನ್
ಬ್ಯಾಂಕ್ ಹೆಸರು: ಏಕ್ಸಿಸ್ ಬ್ಯಾಂಕ್
ಶಾಖೆ: ಕಸ್ತೂರಿ ನಗರ
ಖಾತೆ ಸಂಖ್ಯೆ: 231010100038368
IFSC / RTGS Code: UTIB0001446

ಆನ್ ಲೈನ್ ನಿಧಿ ವರ್ಗಾವಣೆಯಾದಲ್ಲಿ ನಿಮ್ಮ ವ್ಯವಹಾರದ ವಿವರಗಳು, ಪೂರ್ತಿ ಹೆಸರು, ಪಾನ್ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು asha@akshara.org.in ಗೆ ದಯವಿಟ್ಟು ಮೈಲ್ ಕಳುಹಿಸಿರಿ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ದಾನಿಗಳು ಈಗ ತೆರಿಗೆ ರಿಯಾಯಿತಿ ದೇಣಿಗೆಗಳನ್ನು ಮಾಡಬಹುದಾಗಿದೆ. ಈ ಕೆಳಗೆ ನಮೂದಿಸಲಾದ ಎಲ್ಲಾ ಸಂಸ್ಥೆಗಳು 501(c)3 ಸಂಸ್ಥೆಗಳಾಗಿವೆ. ಅವರ ಮೂಲಕ ಮಾಡಲಾಗುವ ಎಲ್ಲಾ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಪ್ರಮಾಣ ಪತ್ರ ದೊರೆಯುವುದು.
1. ಇಂಡಿಯನ್ಸ್ ಫಾರ್ ಕಲೆಕ್ಟಿವ್ ಆಕ್ಷನ್ (ಐ.ಸಿ.ಎ.). ದೇಣಿಗೆಗಳನ್ನು ಎರಡು ರೀತಿಯಾಗಿ ನೀಡಬಹುದಾಗಿದೆ:

ಅ) ಐ.ಸಿ.ಎ./ಅಕ್ಷರ ದ ಪರವಾಗಿರುವ ಚೆಕ್ ಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಇಂಡಿಯನ್ಸ್ ಫಾರ್ ಕಲೆಕ್ಟಿವ್ ಆಕ್ಷನ್, ಮಮ್ ಫೋರ್ಡ್ ಪ್ಲೇಸ್, ಪಾಲೋ ಆಲ್ಟೊ Ca 94306( Indians for Collective Action, 3838 Mumford Place, Palo Alto, Ca 94306)

ಆ) ಆನ್ ಲೈನ್ ಮೂಲಕ ದೇಣಿಗೆ ನೀಡುವುದಾದಲ್ಲಿ ನೀವು http://icaonline.org/donate ಗೆ ಭೇಟಿ ನೀಡಿ ಡ್ರಾಪ್ ಡೌನ್ ಯೋಜನೆಗಳ ಪಟ್ಟಿಯಿಂದ ಅಕ್ಷರ ಫೌಂಡೇಶನ್ ಅನ್ನು ಆಯ್ಕೆಮಾಡಿರಿ. ಪೇ ಪಾಲ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ದೇಣಿಗೆ ನೀಡ ಬಹುದಾಗಿದೆ.
ಏನಾದರು ಪ್ರಶ್ನೆಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ನೀವು ಅಭಯ್ ಭೂಷಣ್ ರವರನ್ನು ಸಂಪರ್ಕಿಸಬಹುದಾಗಿದೆ ((akbhushan@aol.com, 650-868-6645)
2.Through Global Giving : ಇಲ್ಲಿ ಒತ್ತಿರಿ
3. Through CAF America: ಇಲ್ಲಿ ಒತ್ತಿರಿ
4. Through Agora Fund : ಇಲ್ಲಿ ಒತ್ತಿರಿ
  • ನಾವು ಯಾವುದೇ ಅನಾಮಧೇಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ.
  • ಮರುಪಾವತಿ: ಒಮ್ಮೆ ದೇಣಿಗೆಯನ್ನು ಮಾಡಿದ ಮೇಲೆ ಅದನ್ನು ಅಂಶಿಕವಾಗಿ ಇಲ್ಲವೇ ಪೂರ್ತಿಯಾಗಿ ಮರುಪಾವತಿಸಲು ಸಾಧ್ಯವಾಗುವುದಿಲ್ಲ.
  • ಅಕ್ಷರ ಫೌಂಡೇಶನ್ ಗೆ ಮಾಡಲಾಗುವ ಎಲ್ಲಾ ದೇಣಿಗೆಗಳು ಕಲಂ 80G.ಯಡಿಯಲ್ಲಿ 50% ತೆರಿಗೆ ವಿನಾಯತಿಯನ್ನು ಪಡೆಯುತ್ತವೆ.
  • ತೆರಿಗೆ ವಿನಾಯಿತಿಯು ಭಾರತದಲ್ಲಿ ಮಾತ್ರ ಸಿಂಧುವಾಗಿದೆ. ನೀವು ನಿಮ್ಮ ದೇಣೆಗೆಯ ಮೇಲೆ ತೆರಿಗೆ ವಿನಾಯತಿಯನ್ನು ಪಡೆಯಲು ಬಯಸುವುದಾದರೆ, ದೇಣಿಗೆ ಹಾಳೆಯ ಮೇಲೆ ಭಾರತ ಸರಕಾರವು ನೀಡಿದ ನಿಮ್ಮ ಪಾನ್ ಸಂಖ್ಯೆಯನ್ನು ನಮೂದಿಸಿ.
  • ತಲುಪಿಸಲಾದ ಸ್ವೀಕೃತಿ ಪತ್ರ ಅಥವಾ ದೇಣಿಗೆಯ ರಸೀದಿಯನ್ನು ನಿಮ್ಮ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು. ದಯವಿಟ್ಟು ನಿಮ್ಮ ವಿಳಾಸವನ್ನು ಒದಗಿಸಿ.

1. ಅಕ್ಷರ ಫೌಂಡೇಶನ್ ಗೆ ನಾನು ದೇಣಿಗೆ ನೀಡುವುದರಿಂದ ಎನಾದರು ತೆರಿಗೆ ಅನುಕೂಲಗಳು/ಲಾಭಗಳಿವೆಯೇ?
ಅಕ್ಷರ ಫೌಂಡೇಶನ್ ಗೆ ಮಾಡಲಾಗುವ ಎಲ್ಲಾ ದೇಣಿಗೆಗಳು ಕಲಂ 80G.ಯಡಿಯಲ್ಲಿ 50% ತೆರಿಗೆ ವಿನಾಯತಿಯನ್ನು ಪಡೆಯುತ್ತವೆ. ನಾವು 45 ಕೆಲಸದ ದಿನಗಳೊಳಗಾಗಿ ಅದನ್ನು ನಿಮಗೆ ನಿಮ್ಮ ಅಂಚೆ ವಿಳಾಸಕ್ಕೆ ಕಳುಹಿಸುತ್ತೇವೆ.
ಜಾಗತಿಕ ನೀಡಿಕೆ ಮತ್ತು ಸಿ.ಎ.ಎಫ್, ಅಮೆರಿಕಾ ಮೂಲಕ ನೀಡಿದ ಎಲ್ಲಾ ದೇಣಿಗೆಗಳಿಗೆ ಅವರಿಂದ ತೆರಿಗೆ ವಿನಾಯಿತಿ ಪ್ರಮಾಣ ಪತ್ರ ಸಿಗುವುದು.

ಸರಕಾತಾರೇತರ ಸಂಸ್ಥೆಗೆ ನೀಡಿದ ದೇಣಿಗೆಯು ಸರಿಯಾದ ರೀತಿಯಲ್ಲಿ ಬಳಸಲ್ಪಡುತ್ತಿದೆಯೆಂದು ನಾನು ಹೇಗೆ ಖಾತರಿ ಪಡಿಸುವುದು?
ಅಕ್ಷರ ಫೌಂಡೇಶನ್ ತನ್ನ ವೆಚ್ಚಗಳಲ್ಲಿ ಅತ್ಯಂತ ಪಾರದರ್ಶಕವಾಗಿದೆ. ಲೆಕ್ಕ ಪತ್ರಗಳು ಮತ್ತು ಕಾರ್ಯಕ್ರಮಗಳು ನಿಯಮಿತವಾಗಿ ಲೆಕ್ಕ ಪರಿಶೋಧನೆಗೊಳಗಾಗುತ್ತವೆ ಮತ್ತು ಎಲ್ಲಾ ಸಮಯದಲ್ಲೂ ಲೆಕ್ಕ ಪತ್ರ ಮಾರ್ಗದರ್ಶನ ತತ್ವಗಳ ಪ್ರಕಾರ ಹಣಕಾಸಿನ ವಿಷಯಗಳಲ್ಲಿ ಕಟ್ಟು ನಿಟ್ಟಿನ ಮಾರ್ಗದರ್ಶನ ಸೂತ್ರಗಳನ್ನು ನಿರ್ವಹಿಸಲಾಗುತ್ತದೆ. ನಮ್ಮ ಇತ್ತೀಚೆಗಿನ ವಾರ್ಷಿಕ ವರದಿಯನ್ನು ನೋಡಲು ಇಲ್ಲಿ ಒತ್ತಿರಿ:

3. ನನ್ನ ದೇಣಿಗೆಯ ಕುರಿತು ನಾನು ಯಾರನ್ನು ಸಂಪರ್ಕಿಸಬಹುದು?
ಅಕ್ಷರ ಫೌಂಡೇಶನ್ ಗೆ ದೇಣಿಗೆ ನೀಡುವ ಕುರಿತು ಹೆಚ್ಚಿನ ಸಹಾಯ ಅಥವಾ ಮಾಹಿತಿಗಾಗಿ ದಯವಿಟ್ಟು asha@akshara.org.in ಗೆ ಇಮೈಲ್ ಬರೆಯಿರಿ.

4. ದಾನಿಗೆ ಯಾವ ಮಾಹಿತಿಯನ್ನು ಕಳುಹಿಸಲಾಗುತ್ತದೆ?
ಅಕ್ಷರದ ತ್ರೈಮಾಸಿಕ ಸುದ್ದಿ ಪತ್ರಕ್ಕೆ ಸಹಿ ಮಾಡಿರಿ. ಇದನ್ನು ನಿಮಗೆ ಅಂಚೆ ಮೂಲಕ ಕಳಿಹಿಸಲಾಗುತ್ತದೆ-ಇದು ಕಾರ್ಯಕ್ರಮ ಚಟುವಟಿಕೆ ಗಳ ಮೇಲೆ ಹೊಸತಾದ ಮಾಹಿತಿಯನ್ನು ಮತ್ತು ನಿಮ್ಮ ದೇಣಿಗೆಗಳಿಂದ ಬೆಂಬಲಿಸಲ್ಪಡುತ್ತಿರುವ ಕಾರ್ಯಕ್ರಮದ ಯಶೋಗಾಥೆಗಳನ್ನು ಒದಗಿಸುತ್ತದೆ.

5. ನಾನು ಒಂದು ಗೌರವ ಸೂಚಕವಾಗಿ ಅಥವಾ ನಿರ್ದಿಷ್ಟ ಸಮಾರಂಭಗಳಿಗೆ ದೇಣಿಗೆಯನ್ನು ಮಾಡಬಹುದೇ?
ಹೌದು, ಒಂದು ಗೌರವ ಸೂಚಕವಾಗಿ ಅಥವಾ ನಿರ್ದಿಷ್ಟ ಸಮಾರಂಭಗಳಿಗೆ ದೇಣಿಗೆಯನ್ನು ಮಾಡಬಹುದು.
ಅದು ಗೌರವ ಸೂಚಕವಾಗಿದ್ದಲ್ಲಿ, ನಿಮ್ಮ ದೇಣಿಗೆ ವಿವರಗಳೊಂದಿಗೆ, ಈ ಕೆಳಗಿನ ವಿವರಗಳನ್ನು asha@akshara.org.in ಗೆ ಇಮೇಲ್ ಕಳುಹಿಸಿ.
● ಗೌರವ ಸೂಚಕದ ವಿಧ: ಇವರ ಗೌರವಾರ್ಥ/ಇವರ ನೆನಪಿಗಾಗಿ/ಇದಕ್ಕೆ ಬೆಂಬಲವಾಗಿ
● ವ್ಯಕ್ತಿಯ ಹೆಸರು
● ವಿಶೇಷ ಸಮಾರಂಭ.



Akshara Foundation