ಸಾಮಾನ್ಯವಾಗಿ ಶಾಲೆಗಳಲ್ಲಿನ ಮಕ್ಕಳು ವಾರದಲ್ಲಿ 2 ಗಂಟೆಗಳಿಗೂ ಕಡಿಮೆ ಅವಧಿ ಗಣಿತದ ಕಲಿಕೆಗೆ ಒಳಪಡುತ್ತಾರೆ. ಅದರೊಂದಿಗೆ, ಅವರಲ್ಲಿ ಹಲವು ಮಕ್ಕಳ ಮನೆಗಳಲ್ಲಿ ಕಲಿಕಾ ಪರಿಸರವೂ ಇರುವುದಿಲ್ಲ. ಅಕ್ಷರದ ಹೊಸ ಆ್ಯಪ್ — ಬಿಲ್ಡಿಂಗ್ ಬ್ಲಾಕ್ಸ್, 1-5 ರವರಗಿನ ತರಗತಿಗಳಲ್ಲಿರುವ ಮಕ್ಕಳಿಗೆ ಗಣಿತ ಕಲಿತು ಅಭ್ಯಾಸ ಮಾಡಲು ಅವಕಾಶ ನೀಡುತ್ತದೆ.
ಗಣಿತವನ್ನು ಯಾವುದೇ ಸಮಯದಲ್ಲಿಯೂ, ಮತ್ತು ಎಲ್ಲಿಯಾದರೂ ಅಭ್ಯಾಸ ಮಾಡಲು ಸಹಾಯಮಾಡುವ ಈ ಉಚಿತವಾದ, ಮೋಜಿನಿಂದ ಕೂಡಿದ ಕಲಿಕಾ ಆ್ಯಪ್ ಈಗ ಲಭ್ಯವಿದೆ! ಈ ಆ್ಯಪ್ ಮಕ್ಕಳು ಶಾಲೆಯಲ್ಲಿ ಕಲಿತ ಪರಿಕಲ್ಪನೆಗಳನ್ನು ಮೋಜಿನ ಆಟಗಳ ಒಂದು ಸಮೂಹದ ರೂಪದಲ್ಲಿ ಅಭ್ಯಾಸ ಮಾಡಲು ಅವಕಾಶ ನೀಡುತ್ತದೆ. ಇದನ್ನು ಅತ್ಯಂತ ಮೂಲಭೂತ-ಮಟ್ಟದ ಸ್ಮಾರ್ಟ್ಫೋನ್ಗಳಲ್ಲೂ, ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳೆರಡರಲ್ಲೂ ಸಹ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಎನ್ಸಿಎಫ್2005 ಮಾರ್ಗದರ್ಶನ ಸೂತ್ರಗಳಿಗೆ ತಕ್ಕಂತೆ ರಚಿಸಲಾಗಿರುವ ಈ ಆ್ಯಪ್, ಪ್ರಸ್ತುತ 4 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ಒಟ್ಟು 150ಕ್ಕೂ ಅಧಿಕ ಅರ್ಥಗರ್ಭಿತವಾದ ಗಣಿತದ ಆಟಗಳನ್ನು ಒದಗಿಸುತ್ತದೆ.

-
ಇದನ್ನು ಅತ್ಯಂತ ಮೂಲಭೂತ-ಮಟ್ಟದ ಸ್ಮಾರ್ಟ್ಫೋನ್ಗಳಲ್ಲೂ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ
-
ಶಾಲಾ ಪಠ್ಯಕ್ಕೆ ತಕ್ಕಂತೆ ರಚಿಸಲಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿತ ಪರಿಕಲ್ಪನೆಗಳನ್ನು ಅಭ್ಯಾಸ ಮಾಡುವರು, ಆದರೆ ಒಂದು ಮೋಜಿನ ಆಟದಂತೆ!
-
ನಾಲ್ಕು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ — ಆಂಗ್ಲ ಭಾಷೆ, ಕನ್ನಡ, ಗುಜರಾತಿ, ಹಿಂದಿ ಮತ್ತು ಒಡಿಯಾ
-
ಈ ಆಟವನ್ನು 6 ಮಕ್ಕಳು ಒಂದೇ ಸಾಧನದಲ್ಲಿ ಆಡಬಹುದು.
-
ಈ ಆ್ಯಪ್ನಲ್ಲಿ ಯಾವುದೇ ನಡುವಿನ ಖರೀದಿಗಳು, ಮಾರಾಟದ ಪ್ರಚೋದನೆಗಳು ಅಥವಾ ಜಾಹೀರಾತುಗಳಿಲ್ಲ.
ಇದು ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ
-
ಇದು ಸಂಪೂರ್ಣವಾಗಿ ಉಚಿತ
-
ಗಣಿತದ ಶಿಕ್ಷಣ/ಕಲಿಕಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು; ಮಕ್ಕಳನ್ನು ಗಣಿತದ ಪರಿಕಲ್ಪನೆಗಳ ವಾಸ್ತವಾಂಶಗಳಿಂದ ಕ್ರಮೇಣವಾಗಿ ಅಮೂರ್ತ ಪರಿಕಲ್ಪನೆಗಳತ್ತ ಕೊಂಡೊಯ್ಯುವುದು.
-
ಕಲಿತ ಪರಿಕಲ್ಪನೆಗಳನ್ನು ಸದೃಢಗೊಳಿಸಲು, ಒಂದು ಅಭ್ಯಾಸ ಕ್ರಮವನ್ನು ಹೊಂದಿದೆ.
-
ಹಾಗೂ ಕಲಿಕೆಯ ಮಟ್ಟಗಳನ್ನು ಮೌಲ್ಯೀಕರಿಸಲು ಒಂದು ಸವಾಲು ಕ್ರಮವನ್ನು ಕೂಡ ಹೊಂದಿದೆ.
Mathematical Concepts
ಸಂಖ್ಯೆ ಪರಿಚಯ
-
ಸಂಖ್ಯೆ -
ಅನುಕ್ರಮ -
ಹೋಲಿಕೆ -
ಸ್ಥಾನ ಬೆಲೆ -
ಭಿನ್ನರಾಶಿ -
ಸಂಖ್ಯಾ ವಿನ್ಯಾಸ -
ದಶಮಾಂಶ
ಮೂಲ ಕ್ರಿಯೆಗಳು
-
ಸಂಕಲನ -
ವ್ಯವಕಲನ -
ಗುಣಾಕಾರ -
ಭಾಗಾಕಾರ
ಆಕಾರಗಳು
-
ಉದ್ದಳತೆ -
ಘನಾಕೃತಿಗಳು -
ಸರಳ ರೇಖಾಕೃತಿಗಳು -
ಆಕರಗಳ ವಿನ್ಯಾಯಸ -
ಮಾಪನಾಂಕ
ಅಳತೆಗಳು
-
ಹಣ -
ಉದ್ದಳತೆ -
ತೂಕದ ಅಳತೆ -
ದ್ರವದ ಅಳತೆ -
ಸಮಯ

* Google Play and the Google Play logo are trademarks of Google LLC” this line at the bottom of the page