ಅಕ್ಷರದಲ್ಲಿ ಪ್ರತಿಯೊಂದು ಕಾರ್ಯಕ್ರಮವು ಮಕ್ಕಳು ಉತ್ತಮವಾಗಿ ಕಲಿಯುವ ಮತ್ತು ಶೈಕ್ಷಣಿಕ ಪ್ರಗತಿಗೆ ತಳಹದಿ ಕೌಶಲ್ಯಗಳನ್ನು ಪಡೆಯಲು ವಿನ್ಯಾಸದ ಹಂತದಲ್ಲಿಯೇ ರೂಪಿಸಲ್ಪಟ್ಟ ಒಂದು ಖಚಿತವಾದ ಗುರಿ, ಮುಂಗಾಣ್ಕೆಗಳನ್ನು ಹೊಂದಿರುತ್ತದೆ. ನಮ್ಮ ಸಂಶೊಧನಾ ಮತ್ತು ಮೌಲ್ಯಮಾಪನ ತಂಡವು ಮುಖ್ಯ ಭೂಮಿಕೆಗೆ ಪ್ರವೇಶಿಸಿ ಕಾರ್ಯಕ್ರಮವು ಹೇಗೆ ನಡೆಯುತ್ತಿದೆ ಮತ್ತು ಅವುಗಳ ಅಂತಿಮ ಫಲಿತಾಂಶವು ಅವುಗಳ ತಳಹದಿಯಾಗಿರುವ ನಿರೀಕ್ಷೆಗಳನ್ನು ಪೂರೈಸಿದೆಯೇ ಎಂದು ಮಾಪನ ಮಾಡುವರು ದತ್ತಾಂಶ, ಮಕ್ಕಳ ಪರೀಕ್ಷಾ ಅಂಕಗಳು, ತರಗತಿ ವೀಕ್ಷಣೆಗಳು, ಶಿಕ್ಷಕರ ಹಿಮ್ಮಾಹಿತಿಗಳು ಮತ್ತು ಕ್ಷೇತ್ರ ಟಿಪ್ಪಣಿಗಳು ಪರಿಶೋಧನೆಗೊಳಪಟ್ಟು ಕಾರ್ಯಕ್ರಮ ಮತ್ತು ಅದರ ಪರಿಣಾಮಕತ್ವದ ಮೇಲಿನ ಸಂಶೋಧನಾ ಲೇಖನಗಳಾಗಿ ರೂಪಾಂತರಗೊಳ್ಳುತ್ತವೆ. ಅದು ಒಂದು ಹೆಜ್ಜೆ ಹಿಂದಕ್ಕೆ ಸರಿದು ಕಲಿಕಾ ಕಾರ್ಯ ತಂತ್ರಗಳು, ಯಶಸ್ಸನ್ನು ಖಾತರಿಪಡಿಸುವುದು ಮತ್ತು ಅದೇ ಸಮಯದಲ್ಲಿ ಕುಂದು ಕೊರತೆಗಳನ್ನು ಎತ್ತಿ ತೋರಿಸಿ ಸುಧಾರಣೆಯಾಗಬೇಕಾದ ಕ್ಷೇತ್ರಗಳನ್ನು ಬೊಟ್ಟು ಮಾಡಿ ತೋರಿಸುವ ಒಂದು ವಸ್ತುನಿಷ್ಟ ಹಾಗೂ ಮುಕ್ತ ಮನಸ್ಸಿನ ಅವಲೋಕನವಾಗಿದೆ.
ಈ ಭೂಮಿಕೆಯ ಹಿಂದೆ ಮೌನವಾಗಿ, ತರಬೇತಿ, ಪಠ್ಯವಸ್ತು ಮತ್ತು ಮಾಪನದ ಸಾಧನಗಳನ್ನು ರೂಪಿಸುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸುವ ತೆರೆಮರೆಯ ಶ್ರಮವಿದೆ –. ಈ ತಂಡವು ಪ್ರತಿ ವರ್ಷವು C¸Àgï (ಶೈಕ್ಷಣಿಕ ವರದಿಯ ವಾರ್ಷಿಕ ಸ್ಥಿತಿಗತಿ)ನ ರಾಷ್ಟ್ರವ್ಯಾಪಿ ವ್ಯಾಪ್ತಿಯಲ್ಲಿ ಕರ್ನಾಟದ ಅದರ ಸಮೀಕ್ಷೆ, ಶೊಧನೆಗಳನ್ನು ಮತ್ತು ಕಲಿಕಾ ಪ್ರಮಾಣೀಕರಣಗಳನ್ನು ಸುಗಮಗಾರಿಕೆ ನಡೆಸುವ ಮೂಲಕ ಮಹತ್ವದ ಪಾತ್ರವಹಿಸುತ್ತದೆ.
ವಕಾಲತ್ತು, ಶಿಕ್ಷಣದಲ್ಲಿ ಸುದಾರಣೆಯನ್ನು ಮುಂದಕ್ಕೆ ತಳ್ಳುವುದು, ಸರಕಾರಕ್ಕೆ ವಿಶ್ಲೇಷಣೆ ಮತ್ತು ದಿಕ್ಸೂಚಿಗಳಿರುವ ಸ್ಥಿತಿ ಗತಿ ವರದಿ, ಪ್ರಸ್ತುತಿಗಳು ಮತ್ತು ಪ್ರೌಢ ಪ್ರಬಂಧಗಳಂತಹ ದೊಡ್ಡ ಪ್ರಮಾಣದ ತೊಡಗಿಸಿಕೊಳ್ಳುವಿಕೆ-ಇವೆಲ್ಲವೂ ಸಂಶೋಧನೆ ಮತ್ತು ಮೌಲ್ಯಮಾಪನ ತಂಡದ ಪ್ರಗತಿಯಲ್ಲಿರುವ ಕೆಲಸಗಳಾಗಿವೆ.
ಈ ಭೂಮಿಕೆಯ ಹಿಂದೆ ಮೌನವಾಗಿ, ತರಬೇತಿ, ಪಠ್ಯವಸ್ತು ಮತ್ತು ಮಾಪನದ ಸಾಧನಗಳನ್ನು ರೂಪಿಸುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸುವ ತೆರೆಮರೆಯ ಶ್ರಮವಿದೆ –. ಈ ತಂಡವು ಪ್ರತಿ ವರ್ಷವು C¸Àgï (ಶೈಕ್ಷಣಿಕ ವರದಿಯ ವಾರ್ಷಿಕ ಸ್ಥಿತಿಗತಿ)ನ ರಾಷ್ಟ್ರವ್ಯಾಪಿ ವ್ಯಾಪ್ತಿಯಲ್ಲಿ ಕರ್ನಾಟದ ಅದರ ಸಮೀಕ್ಷೆ, ಶೊಧನೆಗಳನ್ನು ಮತ್ತು ಕಲಿಕಾ ಪ್ರಮಾಣೀಕರಣಗಳನ್ನು ಸುಗಮಗಾರಿಕೆ ನಡೆಸುವ ಮೂಲಕ ಮಹತ್ವದ ಪಾತ್ರವಹಿಸುತ್ತದೆ.
ವಕಾಲತ್ತು, ಶಿಕ್ಷಣದಲ್ಲಿ ಸುದಾರಣೆಯನ್ನು ಮುಂದಕ್ಕೆ ತಳ್ಳುವುದು, ಸರಕಾರಕ್ಕೆ ವಿಶ್ಲೇಷಣೆ ಮತ್ತು ದಿಕ್ಸೂಚಿಗಳಿರುವ ಸ್ಥಿತಿ ಗತಿ ವರದಿ, ಪ್ರಸ್ತುತಿಗಳು ಮತ್ತು ಪ್ರೌಢ ಪ್ರಬಂಧಗಳಂತಹ ದೊಡ್ಡ ಪ್ರಮಾಣದ ತೊಡಗಿಸಿಕೊಳ್ಳುವಿಕೆ-ಇವೆಲ್ಲವೂ ಸಂಶೋಧನೆ ಮತ್ತು ಮೌಲ್ಯಮಾಪನ ತಂಡದ ಪ್ರಗತಿಯಲ್ಲಿರುವ ಕೆಲಸಗಳಾಗಿವೆ.

ಕರ್ನಾಟಕ ಓದುವ ಕಾರ್ಯಕ್ರಮದ ಕರ್ನಾಟಕ ಕಲಿಕಾ ಸಹಭಾಗಿತ್ವ – ಹಿನ್ನೆಲೆ ಮತ್ತು ವಿಧಾನ .2007
ಕರ್ನಾಟಕ ಕಲಿಕಾ ಸಹಭಾಗಿತ್ವ ಶಿಕ್ಷಕರಿಗೆ ಬೆಂಗಳೂರಿನಾದ್ಯಂತ ಓದುವ ವರ್ಧಿತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಬೆಂಬಲಿಸುವುದರೊಂದಿಗೆ ಪ್ರಾರಂಭವಾಯಿತು. ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿನ ಓದಲು ಸಾಧ್ಯವಾಗದಿರುವ ಮಕ್ಕಳ ಮೇಲೆ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಕರ್ನಾಟಕ ಕಲಿಕಾ ಸಹಭಾಗಿತ್ವವು, ಈ ಮಕ್ಕಳು ಮತ್ತು ಅವರ ಸಹವರ್ತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮುಂದಿನ ಕಲಿಕೆಯನ್ನು ಸುಗಮಗೊಳಿಸಲು ಉದ್ದೇಶಿಸುತ್ತದೆ.


ಗಣಿತವನ್ನು ತಮಾಷೆಯನ್ನಾಗಿ/ಆನಂದದಾಯಕವಾಗಿ ಮಾಡುವುದು: ಬೆಂಗಳೂರಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಡೆಸಿದ ಪರಿಹಾರ ಗಣಿತ ಮಧ್ಯವರ್ತನೆ ಕಾರ್ಯಕ್ರಮ, 2010
ಭಾರತದಲ್ಲಿನ ವಿದ್ಯಾರ್ಥಿ ಫಲಿತಾಂಶಗಳ ಮೌಲ್ಯಮಾಪನವು ಸರಕಾರಿ ಶಾಲೆಗಳ ಒಂದು ದೊಡ್ಡ ಪ್ರಮಾಣದ ವಿದ್ಯಾರ್ಥಿಗಳ ಪ್ರಾಥಮಿಕ ಓದು ಅಥವಾ ಗಣಿತಶಾಸ್ತ್ರವು ಶ್ರೇಣಿ ಮಟ್ಟದಲ್ಲಿರುವುದಿಲ್ಲವೆಂದು ತೋರಿಸಿದೆ. 2008-2009ರ ದತ್ತಾಂಶದ ಫಲಿತಾಂಶವು ಅಕ್ಷರದ ಪರಿಹಾರ ಗಣಿತ ಮಧ್ಯವರ್ತನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಗಣಿತ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆಯೆಂದು ತೋರಿಸುತ್ತದೆ. ಸರಾಸರಿಯಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟಗಳು 20% ರಷ್ಟು ಹೆಚ್ಚಿರುವುದನ್ನು ಕೂಡಾ ಅಂಕಿ ಅಂಶಗಳು ತೋರಿಸುತ್ತವೆ ಮತ್ತು ಕಲಿಕಾ ಫಲಿತಾಂಶದ ವ್ಯತ್ಯಯಗಳು ನಾಟಕೀಯವಾಗಿ ಕುಸಿದಿರುವುದು ಕಂಡುಬರುತ್ತದೆ.


ಭಾಷಾ ಕೌಶಲ್ಯಗಳ ಮೇಲೆ ಶಾಲಾ ಗ್ರಂಥಾಲಯಗಳ ಪರಿಣಾಮಗಳು: ಭಾರತದಲ್ಲಿ ಅಯೋಜಿತವಾಗಿ ನಿಯಂತ್ರಿಸಲ್ಪಟ್ಟ ಪ್ರಯೋಗದಿಂದ ದೊರಕಿದ ಪುರಾವೆ 2013
ಅಕ್ಷರದ ಶಾಲಾ ಗ್ರಂಥಾಲಯ ಕಾರ್ಯಕ್ರಮದ ಮೇಲೆ ಒಂದು ಅಯೋಜಿತವಾಗಿ ನಿಯಂತ್ರಿಸಲ್ಪಟ್ಟ ಪ್ರಯೋಗವನ್ನು ನಡೆಸಲಾಯಿತು. ಒಟ್ಟಿನಲ್ಲಿ ಕಾರ್ಯಕ್ರಮವು ವಿದ್ಯಾರ್ಥಿಗಳ ಮೇಲೆ 16 ತಿಂಗಳ ನಂತರ ನಡೆಸಲಾದ ಭಾಷಾ ಕೌಶಲ ಪರೀಕ್ಷೆ ಅಂಕಗಳ ಮೇಲೆ ಯಾವುದೇ ಪ್ರಭಾವ ಬೀರದಿರುವುದು ಕಂಡುಬಂತು. ಎಲ್ಲಾ ಗ್ರಂಥಾಲಯಗಳು ನಿರೀಕ್ಷಿಸಿದಂತೆ ಕಾರ್ಯ ನಿರ್ವಿಹಿಸಿದ್ದರೂ ಮತ್ತು ಒಂದು ದೊಡ್ಡ ಪ್ರಮಾಣದ ಸಂಖ್ಯೆಯ ವಿದ್ಯಾರ್ಥಿಗಳು ಅವುಗಳನ್ನು ಬಳಸಿದ್ದರೂ (ಸರಾಸರಿ ಒಂದು ತಿಂಗಳಿಗೆ 81%) ವಿದ್ಯಾರ್ಥಿಗಳ ಭಾಷಾ ಕೌಶಲಗಳ ಮೇಲೆ ಅವುಗಳು ಒಟ್ಟು ಪರಿಣಾಮ ಬೀರದಿರುವುದನ್ನು ನಾವು ಕಂಡುಕೊಂಡೆವು.


ಒಬ್ಬ ಅಲ್ಪಸಂಖ್ಯಾತರಿಗೆ/ಳಿಗೆ ಶಿಕ್ಷಣ ನೀಡುವುದು; ಬೆಂಗಳೂರು, ಸಿಲಿಕಾನ್ ನಗರ ಸರಕಾರಿ ಉರ್ದು ಶಾಲೆಗಳ ಒಂದು ಪ್ರಕರಣ ಅಧ್ಯಯನ, 2012
ಬ್ರಿಟಿಷ್ ಎಜುಕೇಷನಲ್ ರಿಸರ್ಚ್ ಎಸೋಸಿಯೇಷನ್ ನಲ್ಲಿ ಪ್ರಸ್ತುತಪಡಿಸಿದ ಲೇಖನವು ಬೆಂಗಳೂರಿನ ಸರಕಾರಿ ಉರ್ದು ಶಾಲೆಗಳ ಮೇಲೆ, ಸಾರ್ವಜನಿಕ ಒದಗಿಸುವಿಕೆಯ ವಿಶಾಲ ಚೌಕಟ್ಟಿನೊಳಗೆ ನಿಲುಕುವಿಕೆ, ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ವಿಷಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೊರಬಂದ ಅಂಶಗಳನ್ನು ಬಿಂಬಿಸುತ್ತದೆ.ಲೇಖನವು ಎತ್ತಿರುವ ಹೆಚ್ಚಿನ ವಿಚಾರಗಳು ಬೆಂಗಳೂರಿನ ಮುಖ್ಯವಾಹಿನಿ ಶಾಲೆಗಳ ಸಂದರ್ಭವನ್ನು ಪ್ರತಿಬಿಂಬಿಸಿದರೂ, ಒಂದೋ ಸಮಸ್ಯೆಯ ಸೂಕ್ಷತೆಯಿಂದ ಇಲ್ಲವೇ ಸೂಕ್ತ ದ್ವನಿಯ ಕೊರತೆ ಮತ್ತು ಅದನ್ನು ಬೆಂಬಲಿಸಲು ಅಂಕಿ ಅಂಶಗಳ ಕೊರತೆಯಿಂದಾಗಿ ಅಲ್ಪಸಂಖ್ಯಾತರ ವಿಚಾರ ಮಾತ್ರ ನಿರ್ಲಕ್ಷಿಸಲ್ಪಟ್ಟಿವೆ.


ಪರಿಣಾಮಕಾರಿ ತೊಡಗಿಸಿಕೊಳ್ಳುವಿಕೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ವ್ಯವಸ್ಥೆಯೊಂದಿಗೆ ಒಂದು ಪರಿಸರ ವ್ಯವಸ್ಥೆಯನ್ನು ರೂಪಿಸುವುದು- ಅಕ್ಷರ ಫೌಂಡೇಷನ್ ನ ಶಾಲಾ ಪೂರ್ವ ಶೈಕ್ಷಣಿಕ ಕಾರ್ಯಕ್ರಮ-2014
ಅಕ್ಷರವು ತನ್ನ ಶಾಲಾ ಪೂರ್ವ ಕಾರ್ಯಕ್ರಮವನ್ನು ಬೆಂಗಳೂರಿನ ಅಧಿಸೂಚಿಸಲ್ಪಡದ ಕೊಳಚೆ ಪ್ರದೇಶಗಳಲ್ಲಿ ಒಂದು ಕ್ರಿಯಾ –ಸಂಶೋಧನೆಯನ್ನಾಗಿ ಅನುಷ್ಟಾನಗೊಳಿಸಿದೆ: ಮಹಿಳಾ ಉದ್ಯಮಶೀಲರು ಸ್ವತಂತ್ರವಾಗಿ ಮತ್ತು ಮೂರನೇ ಕೆಲಸಗಾರ ಮಾದರಿ 2 ರ ಮೂಲಕ ನಡೆಸುವ ಬಾಲವಾಡಿಗಳು. ಆದರೂ, ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ತಲುಪಿವಿಕೆಯು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಸಹಯೋಜನೆಯೊಂದಿಗೆ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿದ್ದು, ಇದು ಈ ಲೇಖನದ ಪ್ರಮುಖ ಗಮನ ಕ್ಷೇತ್ರವಾಗಿದೆ.


ನಗರದ ಬಡವರಿಗೆ ಶಿಕ್ಷಣ ನೀಡುವುದು- ಬೆಂಗಳೂರಿನ ಅಧಿಸೂಚನೆಗೊಳ್ಳದ ಕೊಳಚೆ ಪ್ರದೇಶಗಳಲ್ಲಿ ಶಾಲಾ ಪೂರ್ವ ಕೇಂದ್ರಗಳನ್ನು ನಡೆಸುವ ಕುರಿತು ಒಂದು ಪ್ರಕರಣ ಅಧ್ಯಯನ. 2013
ಬೆಂಗಳೂರಿನ ಅಧಿಸೂಚನೆಗೊಳ್ಳದ ಕೊಳಚೆ ಪ್ರದೇಶಗಳಲ್ಲಿ 12 ತಿಂಗಳುಗಳಿಗಿಂತಲೂ ಹೆಚ್ಚು ಅಕ್ಷರವು ನಡೆಸಿದ ಅನೌಪಚಾರಿಕ ಶಾಲಾ ಪೂರ್ವ ಕಾರ್ಯಕ್ರಮವನ್ನು ಈ ಲೇಖನದಲ್ಲಿ ನಾವು ವಿವರಿಸುತ್ತೇವೆ. ಈ ಮಧ್ಯವರ್ತನೆಯು ವಿಶೇಷವಾಗಿ ಗಮನಾರ್ಹವಾಗಿದೆ ಯಾಕೆಂದರೆ ಈ ಪ್ರದೇಶವು ಸ್ಥಳೀಯ ಸರಕಾರದಿಂದ ಮಾನ್ಯತೆಯನ್ನು ಪಡೆದಿಲ್ಲದಿರುವುದರಿಂದ ಅದು ಒಂದು ವ್ಯವಸ್ಥೆಯನ್ನು ಹೊಸತಾಗಿ ಪ್ರಾರಂಭಿಸುವುದನ್ನು ಒಳಗೊಂಡಿತ್ತು ಹಾಗೂ ಆದುದರಿಂದಲೇ ಅದು ತೀವ್ರವಾದ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿತ್ತು.
