x

Subscribe to our mailing list

x











More about yourself *



How do you plan to use these resources?






ENGLISH | KANNADA
ಅಕ್ಷರದಲ್ಲಿ ಪ್ರತಿಯೊಂದು ಕಾರ್ಯಕ್ರಮವು ಮಕ್ಕಳು ಉತ್ತಮವಾಗಿ ಕಲಿಯುವ ಮತ್ತು ಶೈಕ್ಷಣಿಕ ಪ್ರಗತಿಗೆ ತಳಹದಿ ಕೌಶಲ್ಯಗಳನ್ನು ಪಡೆಯಲು ವಿನ್ಯಾಸದ ಹಂತದಲ್ಲಿಯೇ ರೂಪಿಸಲ್ಪಟ್ಟ ಒಂದು ಖಚಿತವಾದ ಗುರಿ, ಮುಂಗಾಣ್ಕೆಗಳನ್ನು ಹೊಂದಿರುತ್ತದೆ. ನಮ್ಮ ಸಂಶೊಧನಾ ಮತ್ತು ಮೌಲ್ಯಮಾಪನ ತಂಡವು ಮುಖ್ಯ ಭೂಮಿಕೆಗೆ ಪ್ರವೇಶಿಸಿ ಕಾರ್ಯಕ್ರಮವು ಹೇಗೆ ನಡೆಯುತ್ತಿದೆ ಮತ್ತು ಅವುಗಳ ಅಂತಿಮ ಫಲಿತಾಂಶವು ಅವುಗಳ ತಳಹದಿಯಾಗಿರುವ ನಿರೀಕ್ಷೆಗಳನ್ನು ಪೂರೈಸಿದೆಯೇ ಎಂದು ಮಾಪನ ಮಾಡುವರು. ದತ್ತಾಂಶ, ಮಕ್ಕಳ ಪರೀಕ್ಷಾ ಅಂಕಗಳು, ತರಗತಿ ವೀಕ್ಷಣೆಗಳು, ಶಿಕ್ಷಕರ ಹಿಮ್ಮಾಹಿತಿಗಳು ಮತ್ತು ಕ್ಷೇತ್ರ ಟಿಪ್ಪಣಿಗಳು ಪರಿಶೋಧನೆಗೊಳಪಟ್ಟು ಕಾರ್ಯಕ್ರಮ ಮತ್ತು ಅದರ ಪರಿಣಾಮಕತ್ವದ ಮೇಲಿನ ಸಂಶೋಧನಾ ಲೇಖನಗಳಾಗಿ ರೂಪಾಂತರಗೊಳ್ಳುತ್ತವೆ. ಅದು ಒಂದು ಹೆಜ್ಜೆ ಹಿಂದಕ್ಕೆ ಸರಿದು ಕಲಿಕಾ ಕಾರ್ಯ ತಂತ್ರಗಳು, ಯಶಸ್ಸನ್ನು ಖಾತರಿಪಡಿಸುವುದು ಮತ್ತು ಅದೇ ಸಮಯದಲ್ಲಿ ಕುಂದು ಕೊರತೆಗಳನ್ನು ಎತ್ತಿ ತೋರಿಸಿ ಸುಧಾರಣೆಯಾಗಬೇಕಾದ ಕ್ಷೇತ್ರಗಳನ್ನು ಬೊಟ್ಟು ಮಾಡಿ ತೋರಿಸುವ ಒಂದು ವಸ್ತುನಿಷ್ಟ ಹಾಗೂ ಮುಕ್ತ ಮನಸ್ಸಿನ ಅವಲೋಕನವಾಗಿದೆ.

ಈ ಭೂಮಿಕೆಯ ಹಿಂದೆ ಮೌನವಾಗಿ, ತರಬೇತಿ, ಪಠ್ಯವಸ್ತು ಮತ್ತು ಮಾಪನದ ಸಾಧನಗಳನ್ನು ರೂಪಿಸುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸುವ ತೆರೆಮರೆಯ ಶ್ರಮವಿದೆ –. ಈ ತಂಡವು ಪ್ರತಿ ವರ್ಷವು ಅಸರ್ (Annual Status of Education Report)ನ ರಾಷ್ಟ್ರವ್ಯಾಪಿ ವ್ಯಾಪ್ತಿಯಲ್ಲಿ ಕರ್ನಾಟದ ಸಮೀಕ್ಷೆ, ಶೋಧನೆಗಳನ್ನು ಮತ್ತು ಕಲಿಕಾ ಪ್ರಮಾಣೀಕರಣಗಳನ್ನು ಸುಗಮಗಾರಿಕೆ ನಡೆಸುವ ಮೂಲಕ ಮಹತ್ವದ ಪಾತ್ರವಹಿಸುತ್ತದೆ.

ವಕಾಲತ್ತು, ಶಿಕ್ಷಣದಲ್ಲಿ ಸುದಾರಣೆಯನ್ನು ಮುಂದಕ್ಕೆ ತಳ್ಳುವುದು, ಸರಕಾರಕ್ಕೆ ವಿಶ್ಲೇಷಣೆ ಮತ್ತು ದಿಕ್ಸೂಚಿಗಳಿರುವ ಸ್ಥಿತಿ ಗತಿ ವರದಿ, ಪ್ರಸ್ತುತಿಗಳು ಮತ್ತು ಪ್ರೌಢ ಪ್ರಬಂಧಗಳಂತಹ ದೊಡ್ಡ ಪ್ರಮಾಣದ ತೊಡಗಿಸಿಕೊಳ್ಳುವಿಕೆ-ಇವೆಲ್ಲವೂ ಸಂಶೋಧನೆ ಮತ್ತು ಮೌಲ್ಯಮಾಪನ ತಂಡದ ಪ್ರಗತಿಯಲ್ಲಿರುವ ಕೆಲಸಗಳಾಗಿವೆ.


Akshara Foundation