x

Subscribe to our mailing list

xMore about yourself *How do you plan to use these resources?


ENGLISH | KANNADA
ನಾವು, ಅಕ್ಷರದಲ್ಲಿ ನಮ್ಮ ಕಲಿಕೆಯನ್ನು ಕರ್ನಾಟಕ ರಾಜ್ಯದೊಳಗಡೆ ಮಾತ್ರವಲ್ಲದೆ ಹೊರಗೆ ಕೂಡಾ ಹಂಚಿಕೊಳ್ಳುವುದರಲ್ಲಿ ನಂಬಿಕೆಯಿರಿಸಿದ್ದೇವೆ. ಯಾವುದೇ ಸಂಘಟನೆಗೆ ಶಿಕ್ಷಣ ಕ್ಷೇತ್ರದಲ್ಲಿ ಬಳಸಲ್ಪಡಬಹುದಾದ ಸರಳ, ಆರೋಹಣೀಯ ಮತ್ತು ಸುಸ್ಥಿರ ಪರಿಹಾರಗಳನ್ನು ನಾವು ಒದಗಿಸುತ್ತೇವೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸಾಮಗ್ರಿ ಮತ್ತು ಪರಿಣತಿಯನ್ನು ಡೌನ್ ಲೋಡ್ ಮಾಡಬಹುದು ಮತ್ತು ಅವುಗಳನ್ನು ವಿಶ್ವದಾದ್ಯಂತ ಯಾವುದೇ ಭೌಗೋಳಿಕ ಪ್ರದೇಶ ಮತ್ತು ಸ್ಥಳಗಳಲ್ಲಿ ಬಳಸಬಹುದಾಗಿದೆ.
ಅಕ್ಷರದ ಶಾಲಾ ಪೂರ್ವ ಕಾರ್ಯಕ್ರಮವು ಒಂದು ವೈಜಾÕನಿಕ ಮತ್ತು ವಾಸ್ತವವಾದಿ ವಿನ್ಯಾಸವನ್ನು ಆಧರಿಸಿದೆ. ಸಮೃದ್ಧಗೊಳಿಸಲಾದ ಬೋಧನಾ – ಕಲಿಕಾ ಸಾಮಗ್ರಿಯು (ಬೋ.ಕ.ಸಾ)ಯು 3-6 ವರ್ಷದ ಮಕ್ಕಳ ಅಭಿವೃದ್ಧಿ ಕ್ಷೇತ್ರಗಳನ್ನು ಒಳಗೊಳ್ಳುತ್ತವೆ. ಮಕ್ಕಳ ಮೌಲ್ಯಮಾಪನವು ಮಕ್ಕಳು ಕ್ರಮಿಸುವ ಕಲಿಕಾ ರೇಖೆಯನ್ನು ಅಳತೆ ಮಾಡುವುದು. ಒಂದು ವಿಶೇಷ ಶಾಲಾ ಸಿದ್ಧತೆಯ ಅಂಶವು 5-6 ವರ್ಷದ ಮಗುವನ್ನು ಪ್ರಾಥಮಿಕ ಶಿಕ್ಷಣದ ಆ ಜಿಗಿತಕ್ಕೆ ತಯಾರು ಮಾಡುತ್ತದೆ.
ಕಾರ್ಯಕ್ರಮ ವಿನ್ಯಾಸವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ನ್ನು ಅನುಸರಿಸುತ್ತದೆ ಮತ್ತು ಮಕ್ಕಳಿಗೆ ಶೈಕ್ಷಣಿಕ ಉನ್ನತಿಯತ್ತ ಕೊಂಡೊಯ್ಯುವ ಭದ್ರ ಬುನಾದಿಯನ್ನು ಒದಗಿಸಲು ಅದು ಶಿಶು ಬೋಧನಾ ವಿಧಾನದ ಅತ್ಯುತ್ತಮ ಆಚರಣೆ (pedagogical best practices), ಶಿಕ್ಷಕರ ಅನುಭವ, ವಿಷಯ ತಜÕರು ಮತ್ತು ಅಕ್ಷರದ ಸ್ವಂತ ಕ್ಷೇತ್ರ ಮಟ್ಟದ ಒಳನೋಟಗಳಿಂದ ಅದು ರೂಪುಗೊಂಡಿದೆ. ಶಿಕ್ಷಕರು ಗಣಿತ ಬೋಧನಾ – ಕಲಿಕಾ ಸಾಮಗ್ರಿಯು ಆಕರ್ಷಣೀಯವಾಗಿದೆ ಮತ್ತು ಅದು ಬಹು ವಿಧದ ಅನ್ವಯಿಕತೆಗಳು ಮತ್ತು ಅಸಂಖ್ಯಾತ ಸಾಧ್ಯತೆಗಳನ್ನು ಹೊಂದಿರುವುದಾಗಿ ಹೇಳುತ್ತಾರೆ; ಅಂದರೆ ಅವುಗಳು ಸಂಕೀರ್ಣ ಪರಿಕಲ್ಪನೆಗಳಾದಂತಹ ಭಿನ್ನರಾಶಿಗಳು ಮತ್ತು ದಶಮಾಂಶಗಳನ್ನು- ಉದಾಹರಣೆಗೆ ರೇಖಾತ್ಮಕವಾಗಿ ಸ್ಪಷ್ಟವಾಗಿರುವ ಸಹಾಯಕ ಸಾಧನಗಳ ಮೂಲಕ -ಸರಳೀಕೃತಗೊಳಿಸುತ್ತವೆ. ಈ ಪ್ರಕಿಯೆಯು ಮೂರ್ತ-ಪ್ರತಿನಿಧಿತ್ವ-ಅಮೂರ್ತದ ಹಾದಿಯನ್ನು ಅನುಸರಿಸುತ್ತದೆ ಮತ್ತು ಇದು ತರಗತಿ ಕೊಣೆಯೊಳಗೆ ಸಂತಸದಾಯಕ ಕಲಿಕೆಯಾಗಿ ಅನಾವರಣಗೊಳ್ಳುವುದು.
‘ಸ್ವಲ್ಪ ಇಂಗ್ಲಿಷ್ ತುಂಬಾ ಫನ್’ ವು ಮಾತೃಭಾಷೆ/ದೇಶೀಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಕ್ಷರವು ರೂಪಿಸಿದ ಇಂಗ್ಲೀಷ್ ಭಾಷೆಯ ಪರಿಚಯಾತ್ಮಕ ಸಾಮಗ್ರಿಯಾಗಿರುತ್ತದೆ: ಶಿಕ್ಷಕರಿಗೆ ಬೆಂಬಲದಾಯಕ, ಶಿಶು ಸ್ನೇಹಿ ಪ್ಯಾಕೇಜ್ ಚಿತ್ರಗಳಿರುವ ಒಂದು ಚಾರ್ಟ್, ಶಿಕ್ಷಕರಿಗೆ ಆಲಿಸುವಿಕೆ-ಗ್ರಹಿಸುವಿಕೆ ಕೌಶಲ್ಯಗಳ ಕೈಪಿಡಿ, ಇದಾದ ನಂತರ ಮಾತನಾಡುವ, ಮತ್ತು ಪ್ರಾಥಮಿಕ ಓದು ಮತ್ತು ಬರೆಯುವ ಕೌಶಲ್ಯಗಳು, ಅಕ್ಷರ ಮಾಲೆ, ಮಿಂಚು ಹಾಳೆಗಳು, ಓದಿನ ಹಾಳೆ ಮತ್ತು ಅಭ್ಯಾಸ ಪುಸ್ತಕಗಳು. ಇದನ್ನು ಮೂಲಭೂತವಾಗಿ ಆಲಿಸುವಿಕೆ-ಗ್ರಹಿಸುವಿಕೆ ಕೌಶಲ್ಯ, ನಂತರ ಮಾತನಾಡುವ ಮತ್ತು ಓದು ಹಾಗು ಬರೆಯುವ ಪ್ರಾಥಮಿಕ ಕೌಶಲ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿಯ ವಿಷಯಗಳು ಪರಿಚಿತ ಹಿನ್ನೆಲೆಗಳ ಕಥಾವಸ್ತು ಮತ್ತು ಕಥೆಗಳು ಮತ್ತು ಅನುಕೂಲಕರ ಅನುಷ್ಟಾನಕ್ಕಾಗಿ ವಿವಿಧ ಭಾಗಗಳನ್ನಾಗಿ ವಿಭಜಿಸಲಾಗಿದೆ: ಹಲೋ ಇಂಗ್ಲಿಷ್-1 ಹಲೋ ಇಂಗ್ಲಿಷ್-2 ಮತ್ತು ಹಲೋ ಇಂಗ್ಲಿಷ್-3
ಅಕ್ಷರ ಫೌಂಡೇಶನ್ ಈ ತಾಣದಲ್ಲಿ ಲಭ್ಯವಿರುವಂತೆ ಮಾಡಿರುವ ಅದರಲ್ಲೂ ನಿರ್ದಿಷ್ಟವಾಗಿ ಕ್ರಿಯೇಟಿವ್ ಕಾಮನ್ಸ್ (CREATIVE COMMONS) ಪರವಾನಿಗೆಗಳಡಿಯಲ್ಲಿ ಹಾಗೆಂದು ಗುರುತು ಹಾಕಲ್ಪಟ್ಟಿರುವ ವಿಷಯಗಳಿಗೆ ಅನುಮತಿ ಯನ್ನು ನೀಡುತ್ತದೆ. ಈ ಪರವಾನಗಿಗಳು ನಮ್ಮ ಜಾಲತಾಣದ ವಿಷಯಗಳನ್ನು ಸಂಬಂಧಪಟ್ಟ ಪರವಾನಗಿಗಳ ಷರತ್ತುಗಳಡಿಯಲ್ಲಿ ಬಳಸಲು ನಿಮಗೆ ಮತ್ತು ಪ್ರತಿಯೊಬ್ಬರಿಗೂ ಅನುವು ಮಾಡಿಕೊಡುತ್ತವೆ. ಈ ವಿಷಯಗಳನ್ನು ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದೆ ಅಥವಾ ಅಕ್ಷರ ಫೌಂಡೇಶನ್ ಮತ್ತು ನಿಮ್ಮ ನಡುವೆ ಯಾವುದೇ ಬಾಧ್ಯತೆಗಳಿಲ್ಲದೆ ಉಚಿತವಾಗಿ ಲಭ್ಯವಿರುವಂತೆ ಮಾಡಲಾಗಿದೆ.

ಕ್ರಿಯೇಟಿವ್ ಕಾಮನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಕೃತಿಸ್ವಾಮ್ಯ ಷರತ್ತುಗಳ ಕುರಿತು ತಿಳಿಯಲು ಇಲ್ಲಿ ಒತ್ತಿರಿ.Akshara Foundation