x

Subscribe to our mailing list

x











More about yourself *



How do you plan to use these resources?






ENGLISH | KANNADA
ಗಣಿತ ಕಲಿಕಾ ಆಂದೋಲನವು (GKA) ಸರ್ಕಾರಿ ಪ್ರಾಥಮಿಕ ಶಾಲೆಯ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಗಣಿತ ನೈಪುಣ್ಯತೆಯನ್ನು ವೃದ್ಧಿಸಲು ಅಕ್ಷರ ಫೌಂಡಶನ್ ರವರಿಂದ ವಿನ್ಯಾಸಗೊಂಡಂತಹ ಗಣಿತದ ಮಾದರಿ ಹಾಗೂ ಪೂರಕ ಬೋಧನಾ ಕಾರ್ಯಕ್ರಮವಾಗಿದೆ. ಇದು ಗಣಿತ ಕೌಶಲ್ಯಗಳನ್ನು ಹೆಚ್ಚಿಸುವ, ಸಂತಸದ ಕಲಿಕೆ ಹಾಗು ಹಾಗು ನಿತ್ಯ ಜೀವನಕ್ಕೆ ಸಂಬಂಧಿತ “ಚಟುವಟಿಕೆ ಆಧಾರಿತ ಕಲಿಕೆಯ” ತತ್ವವನ್ನು ಆಧರಿಸಿದೆ. ಇದು ಚಿಂತನೆಯ ಸ್ಪಷ್ಟತೆ ಹಾಗು ದೈನಂದಿನ ಜೀವನಕ್ಕೆ ಸಂಬಂಧಿತ ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದು ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮವಾಗಿದ್ದು, ಸಂತಸದ ಕಲಿಕೆಯ ಮೂಲಕ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳ ಗಣಿತ ಕೌಶಲ್ಯಗಳನ್ನು ಸುಧಾರಿಸುವತ್ತ ಗಮನಹರಿಸುತ್ತದೆ. ಇದು ‘ಮಾಡುವ ಮೂಲಕ ತಿಳಿ’ ಹಾಗೂ ಸಹಕಾರಿ ಗುಂಪು ಕಲಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಗಣಿತ ದ ಬೋಧನಾ/ಕಲಿಕಾ ಸಾಮಗ್ರಿಗಳನ್ನು (TLMs) ಒದಗಿಸುವ ಮೂಲಕ ಶಿಕ್ಷಕರಿಗೆ ತರಬೇತಿ ಹಾಗು ಬೆಂಬಲ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ಶಿಫಾರಸು ಮಾಡಲಾದ ಕಲಿಕಾ ಸಾಮರ್ಥ್ಯಗಳ ಕಲಿಕೆಗೆ ಅನುಕೂಲವಾಗುವಂತೆ ಈ TLM ಗಳನ್ನು ವಿನ್ಯಾಸಗೊಳಿಸಲಾಗಿದೆ. ಸಂಶೋಧನಾಕಾರರ, ವಿಷಯ ತಜ್ಞರ ಮತ್ತು ಅನುಭವಿ ಕ್ಷೇತ್ರವೃತ್ತಿಗಾರರ ವಿಚಾರಗಳಿಂದ ಗಣಿತ ಕಲಿಕಾ ಆಂದೋಲನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಗಣಿತ ಕಲಿಕಾ ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸರ್ಕಾರಿ ಪ್ರಯತ್ನಗಳಿಗೆ ಬೆಂಬಲವನ್ನು ನೀಡುತ್ತದೆ.
ಅಕ್ಷರ ಗಣಿತ ಕಿಟ್ ಬೋಧನಾ ಕಲಿಕಾ ಸಾಮಗ್ರಿಗಳನ್ನು (TLM’s) ಒಳಗೊಂಡಿದೆ. ಉದಾಹರಣೆಗೆ ಸಂಖ್ಯಾರೇಖೆ (ಮಣಿಸರ), ಬೇಸ್ ಹತ್ತರ ಬ್ಲಾಕ್‍ಗಳು, ಸ್ಥಾನಬೆಲೆ ಪಟ್ಟಿಗಳು, ಭಿನ್ನರಾಶಿಯ ಪಟ್ಟಿಗಳು, ಜಿಯೋಬೋರ್ಡ್, ಗಡಿಯಾರ, ಆಟಿಕೆ ಹಣ, ಅಳತೆ ಟೇಪ್, ತಕ್ಕಡಿ ಇತ್ಯಾದಿ.

ಈ ಗಣಿತದ ಕಿಟ್‍ಗಳನ್ನು Innovative Design Educational Kits (IDEK) (e-mail: idekits@gmail.com) ವತಿಯಿಂದ ಖರೀದಿಸಬಹುದಾಗಿದೆ.

ಕಲಿಕೆಯ ಸುಗಮಗಾರಿಕೆಗಾಗಿ ಈ ಬೋಧನಾ ಕಲಿಕಾ ಸಾಮಗ್ರಿಗಳಿಗೆ ಶಿಕ್ಷಕರ ಕೈಪಿಡಿಗಳು ಮತ್ತು ಗಣಿತದ ಪರಿಕಲ್ಪನಾ ಕಾರ್ಡುಗಳು ಆಧಾರವಾಗಿವೆ. ಕಾರ್ಯಕ್ರಮದಲ್ಲಿ ಪ್ರತಿಯೊಂದು ತರಗತಿಗೂ ಒಂದು ಗಣಿತದ ಕಿಟ್ , ಗಣಿತ ಪರಿಕಲ್ಪನಾ ಕಾರ್ಡುಗಳು ಮತ್ತು ಶಿಕ್ಷಕರ ಕೈಪಿಡಿಗಳನ್ನು ಒದಗಿಸಲಾಗುತ್ತದೆ. ಇವು ಕನ್ನಡ/ಉರ್ದು/ಇಂಗ್ಲಿಷ್ ಭಾಷೆಯಲ್ಲಿರುತ್ತವೆ.ಕೆಳಗಿನ ಸಂಪನ್ಮೂಲಗಳು ಉಚಿತವಾಗಿದ್ದು ಅವುಗಳನ್ನು ಡೌನ್ ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು.
ಈ ವೀಡಿಯೋ ತುಣುಕುಗಳು ಶಿಕ್ಷಕರಿಗಾಗಿದ್ದು, ಇವು ಕಾರ್ಯಕ್ರಮದೊಂದಿಗೆ ಬೋಧನೋಪಕರಣಗಳ ಬಳಕೆಯ ಪ್ರಾತ್ಯಕ್ಷಿಕೆಯನ್ನು ಒದಗಿಸುತ್ತವೆ. ಈ ವೀಡಿಯೋಗಳು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ದೊರೆಯುತ್ತವೆ.


 
Introduction to Addition
 
Addition with Carry Over
 
Introduction to Subtraction
 
Subtraction with Borrowing
 
Introduction to Fractions
 
Equivalent Fractions
 
Comparison of Fractions
The below Maths worksheets were disseminated to children via smartphones as a part of our Maneyalle Madona Lekka (MML) Campaign during the pandemic, to help children learn/practice maths concepts at home.

These practice worksheets can be given to children in Grades 4 and 5 even now, as homework.







ಗಣಿತ ಕಲಿಕಾ ಆಂದೋಲನ ಶಿಕ್ಷಕರ ಕೈಪಿಡಿ
ಈ ಕೈಪಿಡಿಯು GKA ಕಾರ್ಯಕ್ರಮದ ಭಾಗವಾಗಿದ್ದು, ಗಣಿತ ಶಿಕ್ಷಕರಿಗೆ, ಗಣಿತ ಕಿಟ್ ನಲ್ಲಿನ ಬೋಧನಾ ಸಾಮಗ್ರಿಗಳನ್ನು ಬಳಸುವುದರ ಬಗ್ಗೆ ಮಾರ್ಗಸೂಚಿಯಾಗಿದೆ.

ಶಿಕ್ಷಕರ ಕೈಪಿಡಿ ಮತ್ತು ಪರಿಕಲ್ಪನೆ ಕಾರ್ಡುಗಳ ಕನ್ನಡ, ಇಂಗ್ಲೀಷ್, ಓರಿಯಾ ಮತ್ತು ಉರ್ದು ಆವೃತ್ತಿಗಳು SSA ರವರಿಂದ ಹಾಗೂ ಕರ್ನಾಟಕ ಮತ್ತು ಓಡಿಸ್ಸಾಗಳಲ್ಲಿನ ಶಿಕ್ಷಕರಿಂದ ಪ್ರಮಾಣೀಕೃತಗೊಂಡಿವೆ. ಅವುಗಳನ್ನು ಕರ್ನಾಟಕ ಮತ್ತು ಓಡಿಸ್ಸಾದ 14 ಜಿಲ್ಲೆಗಳಲ್ಲಿನ 17,000 ಶಾಲೆಗಳಲ್ಲಿ ಬಳಸಲಾಗುತ್ತಿದೆ.

ಮರಾಠಿ, ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಗಳಿಗೆ ಆಯಾ ರಾಜ್ಯ ಶಿಕ್ಷಣ ಇಲಾಖೆಗಳಿಂದ ಮತ್ತು ಶಿಕ್ಷಕರಿಂದ ಪುನರ್ ಪರಿಶೀಲನೆಯ ಅಗತ್ಯತೆ ಇದೆ.

ಇಂತಹ ಆವೃತ್ತಿಗಳನ್ನು ಪರಿಶೀಲಿಸುವಲ್ಲಿ ದಯವಿಟ್ಟು ಸಹಕರಿಸಿ, ಈ ಒಳ್ಳೆಯ ಕಾರ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಬಹುದಾಗಿದೆ.
ಅಲ್ಲದೇ ವಿಷಯವನ್ನು ಇನ್ನಷ್ಟು ಸುಧಾರಿಸಲು ಬಯಸುವವರು ತಮ್ಮ ಸಲಹೆ/ಸೂಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ನಮಗೆ ಬರೆಯರಿ. - nagrajprabhu@akshara.org.in

GKA ಶಿಕ್ಷಕರ ತರಬೇತಿ ಕೈಪಿಡಿ
ಈ ಕೈಪಿಡಿಯು ಸಂಪನ್ಮೂಲ ವ್ಯಕ್ತಿಗಳಿಗೆ (ಗಣಿತದ RP ಯವರಿಗೆ) GKA ತರಬೇತಿಯನ್ನು ನಡೆಸಲು ಮಾರ್ಗಸೂಚಿಯಾಗಿದೆ.
ಗಣಿತ ಕಲಿಕಾ ಆಂದೋಲನದ ಅಂಗವಾಗಿರುವ ಗಣಿತ ಕಿಟ್ ನ ಕಲಿಕೋಪಕರಣಗಳನ್ನು ಬಳಸಿಕೊಂಡು ಚಟುವಟಿಕೆ ಆಧಾರಿತ ಕಲಿಕೆ
ಮತ್ತು ಬೋಧನಾ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಕೈಪಿಡಿಯು ಸಂಪನ್ಮೂಲ ವ್ಯಕ್ತಿಗಳಿಗೆ 1 ದಿನದ ಪುನಶ್ಚೇತನ ತರಬೇತಿ,
3 ಅಥವಾ 5 ದಿನಗಳ GKA ತರಬೇತಿಯನ್ನು ನಡೆಸಲು ಮಾರ್ಗದರ್ಶಿಯಾಗಿದೆ.
GKA ಪ್ರಮುಖ ಅಂಶಗಳ ವಿವರಣೆ, ತರಗತಿಯ ನಿರ್ವಹಣೆ, ತರಬೇತುದಾರರು/ಅಧ್ಯಾಪಕರು ತರಗತಿಯಲ್ಲಿ
ಮಾಡಬೇಕಾದ/ಮಾಡಬಾರದ (dos and don’ts) ವಿಷಯಗಳನ್ನು ತರಬೇತಿಯಲ್ಲಿ ಪ್ರಸ್ತುತಪಡಿಸುವ ವಿಧಾನವನ್ನು ವಿವಿಧ
ಚಟುವಟಿಕೆ ಮತ್ತು ಆಟಗಳ ಮೂಲಕ ವಿವರಿಸಲಾಗಿದೆ. ಕೆಲವು ಸಾಮಾನ್ಯ ಪ್ರಶ್ನೆಗಳಿಗೆ (FAQ) ಉತ್ತರವನ್ನೂ ಕೊಡಲಾಗಿದೆ.
ಈ ಕೈಪಿಡಿಯು ಕನ್ನಡ, ಇಂಗ್ಲೀಷ್ ಹಾಗೂ ಒಡಿಯ ಭಾಷೆಗಳಲ್ಲಿವೆ. ಕನ್ನಡ ಹಾಗು ಇಂಗ್ಲೀಷ್ ಭಾಷೆಯ ಕೈಪಿಡಿಗಳು ಕರ್ನಾಟಕ
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ಪರಿಶೀಲಿಸಲ್ಪಟ್ಟಿದೆ.
ಈವರೆಗೆ 20,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು GKA ತರಬೇತಿಯನ್ನು ಪಡೆದಿದ್ದಾರೆ. ಅವರ ಸಲಹೆ,
ಸೂಚನೆಗಳನ್ನು ಪಡೆದುಕೊಂಡು ಪರಿಷ್ಕರಿಸಿದ ಶಿಕ್ಷಕರ ತರಬೇತಿಯ ಎರಡನೇ ಆವೃತ್ತಿಯು ಇಲ್ಲಿದೆ.

 
ಗಣಿತ ಪರಿಕಲ್ಪನೆ ಕಾರ್ಡುಗಳು
ಗಣಿತ ಪರಿಕಲ್ಪನೆಗಳಿಗೆ ಸಂಬಂಧಿತ ಸಣ್ಣ ಕಥೆಗಳನ್ನೊಳಗೊಂಡಂತಹ ಚಿತ್ರ ಸಹಿತ 10 ಕಾರ್ಡುಗಳು ಆಯಾ ಪರಿಕಲ್ಪನೆಗಳಿಗೆ ಸಂಬಂಧಿತ ಪದಗಳನ್ನು ಸಹ ಒಳಗೊಂಡಿರುತ್ತದೆ. ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಪ್ರೋತ್ಸಾಹಿಸುವ ಪ್ರಶ್ನೆಗಳನ್ನು ಇದು ಹೊಂದಿದೆ. ಈ ಕಾರ್ಡುಗಳನ್ನು ಕಿಟ್ ಗಳೊಂದಿಗೆ ಒದಗಿಸಲಾಗುತ್ತದೆ.



All Akshara Foundation Resources are licensed under a Creative Commons Attribution 4.0 International License). Under this license you are free to:

Share — copy and redistribute the material in any medium or format,
Adapt — remix, transform, and build upon the material for any purpose.

You must give appropriate credit to Akshara Foundation, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use. You may not apply legal terms or technological measures that legally restrict others from doing anything the license permits.

See: https://creativecommons.org/licenses/by/4.0





Akshara Foundation