x

Subscribe to our mailing list

x











More about yourself *



How do you plan to use these resources?






ENGLISH | KANNADA
ತರಗತಿ ಗ್ರಂಥಾಲಯವು ಅಕ್ಷರ ಫೌಂಡೇಶನ್ ಸಂಸ್ಥೆಯ ಒಂದು ನಾವಿನ್ಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪೂರಕವಾಗಿ ತರಗತಿಯಲ್ಲಿಯೇ ಒಂದು ಗ್ರಂಥಾಲಯ ಸ್ಥಾಪಿಸಲಾಗಿದೆ. ಮಕ್ಕಳಿಗೆ ಕೈಗೆ ಸಿಗುವಂತೆ ಉತ್ತಮ ಹಾಗೂ ಆಕರ್ಷಕ ಪುಸ್ತಕಗಳಿದ್ದಲ್ಲಿ ಮಕ್ಕಳು ಓದುವುದರಲ್ಲಿ ಸಂತಸವನ್ನು ಪಡೆಯುತ್ತಾರೆಂಬುದು ನಮ್ಮ ನಂಬಿಕೆಯಾಗಿದೆ. ಅಲ್ಲದೆ ಶಾಲಾ ಪಠ್ಯಕ್ರಮವನ್ನು ಆಸಕ್ತಿಯಿಂದ ಹಾಗೂ ಆನಂದದಾಯಕವಾಗಿ ಕಲಿಯಲು ಗ್ರಂಥಾಲಯವು ನೆರವು ಹಾಗೂ ಉತ್ತೇಜನವನ್ನು ನೀಡುತ್ತದೆ.

ತರಗತಿ ಗ್ರಂಥಾಲಯವು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ.

1. ಭಾರತೀಯ ಹಾಗೂ ಆಂಗ್ಲ ಭಾಷೆಗಳಲ್ಲಿ, ಮಕ್ಕಳ ವಯಸ್ಸಿಗೆ ಸೂಕ್ತ ಪುಸ್ತಕಗಳನ್ನು ಆಯ್ಕೆ ಮಾಡುವುದು.

2. ತರಗತಿ ಗ್ರಂಥಾಲಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವುದು.

3. ಕ್ರಿಯಾತ್ಮಕವಾಗಿ ಪುಸ್ತಕಗಳನ್ನು ಉಪಯೋಗಿಸಲು ಶಿಕ್ಷಕರಿಗೆ ತರಬೇತಿ ನೀಡುವುದು.

4. ತರಗತಿ ಮಟ್ಟದಲ್ಲಿ ಮಕ್ಕಳ ಓದುವ ಹವ್ಯಾಸದ ಮೌಲ್ಯ ಮಾಪನ ಮಾಡುವುದು.

5. ಸರ್ಕಾರದ ಸಹಭಾಗಿತ್ವದಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದು.
ಪ್ರತಿ ತರಗತಿ ಗ್ರಂಥಾಲಯದ ಕಿಟ್, 120 ಪುಸ್ತಕಗಳನ್ನು ಹಿಡಿಯುವ ಮತ್ತು ಜೇಬುಗಳಿರುವ ಒಂದು ಕ್ಲಾತ್ gÁåಕ್ (Cloth Rack) ಹಾಗೂ ಒಂದು ಹಿಸ್ಟೋಗ್ರಾಮ್ ಚಾರ್ಟ ನ್ನು ಒಳಗೊಂಡಿರುತ್ತದೆ.

ಪುಸ್ತಕಗಳು ತರಗತಿ ಗ್ರಂಥಾಲಯದಲ್ಲಿರುವ ಪುಸ್ತಕಗಳು ಪ್ರಖ್ಯಾತ ಪ್ರಕಾಶಕರ ಮತ್ತು ಅನೇಕ ವರ್ಗಗಳನ್ನು ಒಳಗೊಂಡಿರುತ್ತದೆ. ಗ್ರಂಥಾಲಯದ ಪುಸ್ತಕಗಳು ಪಠ್ಯಕ್ರಮದಲ್ಲಿರುವ ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ. ಈ ಪುಸ್ತಕಗಳು ಸರ್ಕಾರಿ ಶಾಲಾ ಮಕ್ಕಳ ಕಲ್ಪನೆಗೆ ಸಿಗದ ಆಯಾಮಕ್ಕೆಇವರನ್ನು ಕರೆದುಕೊಂಡೋಗುವಂತಹದ್ದಾಗಿರುತ್ತದೆ.

ಹಿಸ್ಟೋಗ್ರಾಮ್ , ಗೋಡೆಯ ಮೇಲೆ ಅಂಟಿಸಬಹುದಾದ ಹಿಸ್ಟೋಗ್ರಾಮ್ ಚಾರ್ಟ ನ ಮೇಲೆ ಮಕ್ಕಳು ಪುಸ್ತಕಗಳನ್ನು ಕೊಳ್ಳುವ ಸಮಯದಲ್ಲಿ ಸೂಕ್ತ ಪೆಟ್ಟಿಗೆಯಲ್ಲಿ ಗುರುತನ್ನು ಮಾಡಬೇಕು. ಈ ಚಾರ್ಟನಿಂದ ಪ್ರತಿ ತರಗತಿಯಲ್ಲಿ ಎಷ್ಟು ಪುಸ್ತಕಗಳು ಎರವಲು ಪಡೆಯಲಾಗಿದೆ ಎಂಬ ವಿವರ ತಿಳಿಯ ಬಹುದು.

ಸರಳ ಹಾಗೂ ಪರಿಣಾಮಕಾರಿಯಾದ ಈ ತರಗತಿ ಗ್ರಂಥಾಲಯವನ್ನು ನಡೆಸಿಕೊಂಡು ಹೋಗಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದು.


ಕಾರ್ಯಕ್ರಮದ ಕೈಪಿಡಿ
ಈ ಕೈಪಿಡಿಯು ತರಗತಿ ಗ್ರಂಥಾಲಯ ಕಾರ್ಯಕ್ರಮದ ಕಾರ್ಯಾಚರಣೆಯ ಪೂರ್ಣ ಮಾಹಿತಿಯನ್ನು ನೀಡುವುದು, ಪುಸ್ತಕಗಳ ಆಯ್ಕೆ, ಪುಸ್ತಕಗಳನ್ನು ವಿಭಾಗಿಸುವ ವಿಧಾನ ಹಾಗೂ ಅದರ ಬಳಕೆಯನ್ನು ಮಾಪನ ಮಾಡುವ ವಿಧಾನದ ವಿವರಗಳನ್ನು ಒಳಗೊಂಡಿರುತ್ತದೆ.

ಹಿಸ್ಟೋಗ್ರಾಮ್
ಈ ಚಾರ್ಟನಿಂದ ಪ್ರತಿ ತರಗತಿಯಲ್ಲಿ ಎಷ್ಟು ಪುಸ್ತಕಗಳು ಎರವಲು ಪಡೆಯಲಾಗಿದೆ ಎಂಬ ವಿವರ ತಿಳಿಯ ಬಹುದು.

ಪುಸ್ತಕಗಳ ಪಟ್ಟಿ
ಈ ಕಡತವು ಸರ್ಕಾರಿ ಶಾಲೆಗಳಲ್ಲಿ ತರಗತಿ ಗ್ರಂಥಾಲಯ ಸ್ಥಾಪಿಸಲು ಕೊಂಡುಕೊಳ್ಳ ಬಹುದಾದ ಪುಸ್ತಕಗಳ ಹಾಗೂ ಪ್ರಕಾಶಕರ ವಿವರಗಳನ್ನು ಒಳಗೊಂಡಿರುತ್ತದೆ.



All Akshara Foundation Resources are licensed under a Creative Commons Attribution 4.0 International License). Under this license you are free to:

Share — copy and redistribute the material in any medium or format,
Adapt — remix, transform, and build upon the material for any purpose.

You must give appropriate credit to Akshara Foundation, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use. You may not apply legal terms or technological measures that legally restrict others from doing anything the license permits.

See: https://creativecommons.org/licenses/by/4.0





Akshara Foundation