x

Subscribe to our mailing list

x











More about yourself *



How do you plan to use these resources?






ENGLISH | KANNADA

ಕ್ರಿಯೇಟಿವ್ ಕಾಮನ್ಸ್ ಇತರರ ಕೆಲಸ/ಕೃತಿಗಳನ್ನು ಕೃತಿಸ್ವಾಮ್ಯ ನಿಯಗಳಿಗನುಗುಣವಾಗಿ ಹಂಚಿಕೊಂಡು ಅವುಗಳನ್ನು ಮತ್ತೆ ಅಭಿವೃದ್ಧಿ ಪಡಿಸುವ ಕೆಲಸವನ್ನು ಸುಲಭ ಮಾಡಿಕೊಡುವುದಕ್ಕೆ ಮುಡಿಪಾಗಿರುವ ಒಂದು ಲಾಭ ರಹಿತ ಸಂಸ್ಥೆಯಾಗಿದೆ. ಸೃಜನಶೀಲ ಕೃತಿಗಳ ಕರ್ತೃ ಅವುಗಳನ್ನು ಸ್ವತಂತ್ರವಾಗಿ ಹೇಗೆ ಮುಂದಕ್ಕೆ ಕೊಂಡೊಯ್ಯಬೇಕೆಂದು ಬಯಸುವರೋ ಅದೇ ರೀತಿಯಲ್ಲಿ ಅವುಗಳೊಂದಿಗೆ ಸೃಜನಶೀಲವಾಗಿ ತೊಡಗಿಸಿಕೊಳ್ಳಲು  ನಾವು ಉಚಿತ ಪರವಾನಿಗೆಗಳನ್ನು ಮತ್ತು ಇತರ ಕಾನೂನಿನ ಸಾಧನಗಳನ್ನು ಒದಗಿಸುತ್ತೇವೆ –ಇದರಿಂದ ಇತರರು ಅವುಗಳನ್ನು ಹಂಚಿಕೊಳ್ಳಬಹುದು, ಮರು ಮಿಶ್ರಣ ಮಾಡಬಹುದು, ವಾಣಿಜ್ಯದ್ದೇಶಗಳಿಗಾಗಿ ಬಳಸಬಹುದು ಅಥವಾ  ಅಲ್ಲಿರುವ ಯಾವುದೇ ಸಂಯೋಜನೆಯನ್ನು ಕೂಡಾ ಬಳಸಿಕೊಳ್ಳಬಹುದಾಗಿದೆ”

ನಾವು ಎಟ್ರಿಬ್ಯೂಷನ್ ಪರವಾನಗಿಯನ್ನು ಬಳಸುತ್ತೇವೆ ಮತ್ತು  ನಮ್ಮ ಹಿತಾಸಕ್ತಿಯ ಪರವಾಗಿ  ಅಂದರೆ ಈ  ವಿಷಯದ ದಾನಿ/ನಿಧಿ ಒದಗಿಸಿದ ಅಕ್ಷರ ಫೌಂಡೇಷನ್, ಮತ್ತು ಮೂಲ ಕರ್ತೃ, ಸಚಿತ್ರಕಾರ ಮತ್ತು ಅನುವಾದಕ/ಕಿಗೆ ಮೂಲ ಕೃತಿಗೆ ಅನ್ವಯವಾಗುವಲ್ಲೆಲ್ಲಾ ನಿಮಗೆ ವಿತರಣೆ ಮಾಡಲು, ಮರು ಮಿಶ್ರಣ ಮತ್ತು ತಿರುಚಲು ಮತ್ತು ನಮ್ಮ ಕೆಲಸವನ್ನು ಅಭಿವೃದ್ಧಿಗೊಳಿಸಲು -ವಾಣಿಜ್ಯಾತ್ಮಕವಾಗಿ ಕೂಡಾ- ಈ ಪರವಾನಗಿಯು ಅನುಮತಿ ನೀಡುತ್ತದೆ.

ಎಟ್ರಿಬ್ಯೂಷನ್ ಷರತ್ತುಗಳು

ನಾವು ಅಲ್ಲಿಡುವ ಎಲ್ಲಾ ಕೃತಿಸ್ವಾಮ್ಯ ಮತ್ತು ಸೃಜನಾತ್ಮಕ ಕಣಜದ ಸೂಚನಾ ಪತ್ರಗಳನ್ನು ನೀವು ಹಾಗೆಯೇ ಇಡಬೇಕು ಮತ್ತು ನೀವು ಪ್ರಕಟಿಸುತ್ತಿರುವ ಕೃತಿಯ ಮಾಧ್ಯಮಕ್ಕೆ ನ್ಯಾಯಯುತವಾದ ರೀತಿಯಲ್ಲಿ ಅವುಗಳನ್ನು ಪುನರುತ್ಪತ್ತಿ ಮಾಡಬೇಕು.

ಅಕ್ಷರ ಫೌಂಡೇಷನ್, ಮತ್ತು ಮೂಲ ಕರ್ತೃ, ಸಚಿತ್ರಕಾರ ಮತ್ತು ಅನುವಾದಕ/ಕಿಗೆ ಮೂಲ ಕೃತಿಗೆ ಅನ್ವಯವಾಗುವಲ್ಲೆಲ್ಲಾ ನೀವು ಅವರ ಹೆಸರುಗಳನ್ನು ಉಲ್ಲೇಖಿಸಬೇಕು. ನೀವು ಅಂತರ್ ಜಾಲದಲ್ಲಿ ಪ್ರಕಟಿಸುವುದಾದರೆ, ಆ ಹೆಸರನ್ನು ವ್ಯಕ್ತಿಯ ಸ್ಥೂಲ ಚಿತ್ರಣ ಪುಟಕ್ಕೆ (person’s profile page) ಅಂತಹ ಪುಟವು ಅಸ್ತಿತ್ವದಲ್ಲಿದ್ದರೆ ಸಂಪರ್ಕಿಸುವುದು ಒಳ್ಳೆಯದು.

ನೀವು ಕೃತಿಯ ಶೀರ್ಷಿಕೆ ಅಥವಾ ಹೆಸರನ್ನು ಉಲ್ಲೇಖಿಸಬೇಕು. ನೀವು ಅಂತರ್ ಜಾಲದಲ್ಲಿ ಪ್ರಕಟಿಸುವುದಾದರೆ, ಆ ಹೆಸರನ್ನು ಅಥವಾ   ಶೀರ್ಷಿಕೆಯನ್ನು ನೇರವಾಗಿ ಮೂಲ ಕೃತಿಗೆ ಸಂಪರ್ಕಿಸುವುದು ಒಳ್ಳೆಯದು.

ನೀವು ಅಂತರ್ ಜಾಲದಲ್ಲಿ ಪ್ರಕಟಿಸುವುದಾದರೆ, ಆ ಪರವಾನಗಿ ಉಲ್ಲೇಖವನ್ನು  ಕ್ರಿಯೇಟಿವ್  ಕಾಮನ್ಸ್/ ಸೃಜನಶೀಲ ಕಣಜದ  ಜಾಲತಾಣದಲ್ಲಿರುವ ಪರವಾನಿಗೆಗೆ ಸಂಪರ್ಕಿಸುವುದು ಒಳ್ಳೆಯದು.

ಈ ಮೇಲಿನದೊಂದಿಗೆ ನೀವು ಅನುವಾದ ಅಥವಾ ರೂಪಾಂತರವನ್ನು ಮಾಡುವುದಾದಲ್ಲಿ, ನೀವು ನಿಮ್ಮ  ಕೃತಿಯನ್ನು  ಅನುವಾದ ಕೃತಿಯೆಂದು ಗುರುತಿಸಿಕೊಳ್ಳುವ ಅಗತ್ಯವಿದೆ. ಅಂದರೆ; “ ಈ ಕೃತಿಯು (ಮೂಲ ಕೃತಿಯ) ಬರೆದ (ಮೂಲ ಲೇಖಕರು) (ಸಚಿತ್ರಕಾರರು) ಫಿನ್ನಿಶ್ ಅನುವಾದವಾಗಿದೆ, (ಅಕ್ಷರ ಫೌಂಡೇಷನ್) ಪ್ರಕಟಿಸಿದ ಮತ್ತು ಹಣಕಾಸು ಒದಗಿಸಿದ (ದಾನಿ)” ಅಥವಾ “ (ಮೂಲ ಕೃತಿ) ಯನ್ನಾಧರಿಸಿದ (ಲೇಖಕರು)  (ಸಚಿತ್ರಕಾರರು) ಬರೆದ ಚಿತ್ರಕಥೆ, , (ಅಕ್ಷರ ಫೌಂಡೇಷನ್) ಪ್ರಕಟಿಸಿದ ಮತ್ತು ಹಣಕಾಸು ಒದಗಿಸಲ್ಪಟ್ಟಿದೆ (ದಾನಿ)”