


ಸ್ವಲ್ಪ ಇಂಗ್ಲೀಷ್ ತುಂಬಾ ಫನ್ (ಸ್ವಲ್ಪವೇ ಇಂಗ್ಲೀಷ್, ತುಂಬಾ ಮೋಜು), ಮುದ್ರಣ-ಆಧರಿತ ಕಾರ್ಯಕ್ರಮವು ಒಬ್ಬ ಸರಾಸರಿ ಶಾಲಾ ಶಿಕ್ಷಕರು ಸಹ ಸುಲಭವಾಗಿ ಅನುಷ್ಠಾನಗೊಳಿಸುವಂತ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಹೊಂದಿದೆ. ಜೊತೆಗೆ ಶಿಕ್ಷಕರಿಗೆ ಕೌಶಲ್ಯ-ವೃದ್ಧಿಸುವ ಕಾರ್ಯಾಗಾರಗಳನ್ನು ಹೊಂದಿದ್ದು, ಇದನ್ನು ಕರ್ನಾಟಕದ ಒಳನಾಡಿನ ಶಿಕ್ಷಕರು ಸ್ವಾಗತಿಸಿದ್ದಾರೆ. “ಈ ಬೋಧನಾ ಸಾಮಗ್ರಿಗಳು ಶಿಕ್ಷಕರು ಮತ್ತು ಮಕ್ಕಳ ಕೈಗೆಟುಕುವಂತಿದೆ, ……. ಮತ್ತು ಗ್ರಾಮಾಂತರ ಶಾಲೆಗಳಿಗೆ ಸೂಕ್ತವಾಗಿದೆ”, ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಿಕ್ಷಕ/ತರಬೇತುದಾರರೊಬ್ಬರ ಅನಿಸಿಕೆಯಾಗಿದೆ.

ಇದರ ಕಾರ್ಯವಿಧಾನ
ಶಿಕ್ಷಕರು ಮತ್ತು ಮಕ್ಕಳ ನಡುವೆ ಇಂಗ್ಲೀಷ್ ನಲ್ಲಿ ಸಂವಹಹಿಸಲು ಉತ್ತೇಜಿಸಲು ವರ್ಣಮಯ ಮತ್ತು ಆಕರ್ಷಕ ಚಾರ್ಟ್ ಗಳನ್ನು ಬಳಸಲಾಗುತ್ತದೆ. ಭಾಷೆಯ ಮೂಲ ಅರ್ಥೈಸುವಿಕೆ, ಶಬ್ದಭಂಡಾರ ರಚನೆ ಮತ್ತು ಸರಿಯಾದ ವಿಧಾನ ತಿಳಿದುಕೊಳ್ಳುವುದರ ಮೂಲಕ ಈ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಭಾಷಾ ಉತ್ಪಾದನೆಯನ್ನು ವೃದ್ಧಿಸಲು ಮುಕ್ತ ಪ್ರಶ್ನೆಗಳು ಮತ್ತು ಅಭ್ಯಾಸಗಳ ಸಂಯೋಜನೆಯುಳ್ಳ ಕೈಪಿಡಿಯು ಶಿಕ್ಷಕರಿಗೆ ಮಾರ್ಗದರ್ಶನ ಒದಗಿಸುತ್ತದೆ. ಆಡು ಭಾಷೆಯ ಪರಿಚಯದ ಮೇಲೆ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ರಚಿಸಲಾಗಿದೆ. ತರಗತಿಯು ಮುದ್ರಿತ ಸಾಮಗ್ರಿಗಳಾದ ಕಥೆ ಚಾರ್ಟ್ ಗಳು, ಫೋನಿಕ್ ಕಾರ್ಡ್ ಗಳು, ಅಭ್ಯಾಸ ಪುಸ್ತಕಗಳು ಮತ್ತು ಓದುವ ಕಾರ್ಡ್ ಗಳಿಂದ ಕೂಡಿರುತ್ತದೆ. ಕಾರ್ಯಕ್ರಮದ ವಿಸ್ತರಣೆ ಮತ್ತು ಪ್ರತಿ ಹಂತದಲ್ಲಿನ ಮೂಲ ಸಾಮರ್ಥ್ಯ ವೃದ್ಧಿಗೆ ಬೆನ್ನೆಲುಬಿನಂತೆ ಅವಶ್ಯಕವಾದ ಕ್ಯಾಸ್ಕೇಡ್ ವಿಧಾನದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.