x

Subscribe to our mailing list

x











More about yourself *



How do you plan to use these resources?






ENGLISH | KANNADA
ಕರ್ನಾಟಕವು 46,000 ಕ್ಕಿಂತಲೂ ಹೆಚ್ಚಿನ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮತ್ತು 64,000 ಸರ್ಕಾರಿ ಅಂಗನವಾಡಿ ಕೇಂದ್ರ ಹೊಂದಿದ್ದು ಇವುಗಳು ಜೊತೆಯಾಗಿ 8 ಮಿಲಿಯನ್ ಗಿಂತಲೂ ಹೆಚ್ಚಿನ ಮಕ್ಕಳಿಗೆ ಸೇವೆ ಒದಗಿಸುತ್ತಿವೆ. ಶೇ 98 ರಷ್ಟು ಮಕ್ಕಳು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಜರಾದರೆ ಶೇ 85 ರಷ್ಟು ಮಕ್ಕಳು ಪ್ರಾಥಮಿಕ ಪೂರ್ವ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ನಮ್ಮ ಮಕ್ಕಳ ಕಲಿಕಾ ಫಲಿತಾಂಶವು ಕೆಳ ಮಟ್ಟದಲ್ಲಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಈ ಬೃಹತ್ ಸವಾಲುಗಳನ್ನು ಎದುರಿಸಲು ಯಾವುದೇ ಒಂದು ಸಂಘಟನೆ ಏಕಾಂಗಿಯಾಗಿ ಪ್ರಭಾವಿಸಲು ಸಾಧ್ಯವಿಲ್ಲವೆನ್ನುವುದನ್ನು ಕಂಡುಕೊಂಡೆವು. ಸಾಮೂಹಿಕ ಪ್ರಯತ್ನವು ಇಲ್ಲಿಯ ಪ್ರಮುಖ ಅಗತ್ಯವಾಗಿದೆ.
ಕರ್ನಾಟಕ ಕಲಿಕಾ ಸಹಭಾಗಿತ್ವ ವನ್ನು ಅಕ್ಷರವು ಬಹು ಸಂಘಟನೆಗಳ ಸಂಘಟಿತ ಕ್ರಿಯೆಯ ಮೂಲಕ ಬದಲಾವಣೆಯನ್ನು ಸುಗಮಗೊಳಿಸುವ ಮತ್ತು ಕರ್ನಾಟದ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಪ್ರಭಾವಿಸುವ ಪಾಲುದಾರಿಕೆಯನ್ನಾಗಿ 2006 ರಲ್ಲಿ ಸ್ಥಾಪಿಸಿತು. ಕರ್ನಾಟಕ ಕಲಿಕಾ ಸಹಭಾಗಿತ್ವ ಪಾಲುದಾರಿಕೆಯು ಈ ಸಂಘಟನೆಗಳ ಪ್ರಯತ್ನಗಳನ್ನು ಕ್ರೋಢೀಕರಿಸುತ್ತದೆ. ಹಾಗೆಯೇ ಸಾಧನ ಮತ್ತು ದತ್ತಾಂಶಗಳನ್ನು ಒಂದು ಸಾಮಾನ್ಯ ವೇದಿಕೆಯಲ್ಲಿ ಒದಗಿಸುತ್ತದೆ- ಕರ್ನಾಟಕ ಕಲಿಕಾ ಸಹಭಾಗಿತ್ವವು ಪ್ರತಿಯೊಂದು ಸಂಸ್ಥೆಯು ಏನು ಮಾಡುತ್ತಿದೆಯೋ ಅದನ್ನೇ ಪುನರಾವರ್ತಿಸಲು ಬಯಸುವುದಿಲ್ಲ. ಕರ್ನಾಟಕ ಕಲಿಕಾ ಸಹಭಾಗಿತ್ವವು ಪ್ರತಿಯೊಂದು ಸಂಸ್ಥೆಯು ಮಾಡುತ್ತಿರುವ ಕೆಲಸವನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿ ಒಂದು ಸಾಮೂಹಿಕ ಕ್ರಮದತ್ತ -ಬಿಡಿ ಬಿಡಿಯಾಗಿ ಮತ್ತು ಚದುರಿಕೊಂಡು ಪ್ರಭಾವ ಬೀರುವ ಬದಲು ಒಟ್ಟಿಗೆ ಕೊಂಡೊಯ್ಯಲು ಬಯಸುತ್ತದೆ.
ಕರ್ನಾಟಕ ಕಲಿಕಾ ಸಹಭಾಗಿತ್ವವು ಬಹುವಿಧದ ಸಮಕಾಲೀನ ತಂತ್ರಜ್ಞಾನಗಳಾದಂತಹ ಜಾಲ-ಆಧಾರಿತ ದತ್ತಾಂಶ ವಿಶ್ಲೇಷಣೆ, ಮತ್ತು ದೃಶ್ಯೀಕರಣ, ಸಂಚಾರಿ ಅನ್ವಯಿಕತೆಗಳು (mobile applications), ಅಂತರ್ –ಕ್ರಿಯಾತ್ಮಕ ಧ್ವನಿ ಸ್ಪಂದನ ವ್ಯವಸ್ಥೆಗಳು (interactive voice response systems), ಶ್ವೇತ ಪತ್ರ ಆಧಾರಿತ ದತ್ತಾಂಶ ( legacy paper-based data) ಕರ್ನಾಟಕದಲ್ಲಿ ಒಂದು ಪಾರದರ್ಶಕ ಮತ್ತು ಉತ್ತರದಾಯಿತ್ವವಿರುವ ಸಾರ್ವಜನಿಕ ಶಾಲಾ ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣ ವಲಯವನ್ನು ರೂಪಿಸಲು ಇರುವ ಒಂದು ಅನನ್ಯ ಚೌಕಟ್ಟಾಗಿದೆ. ಕರ್ನಾಟಕ ಕಲಿಕಾ ಪಾಲುದಾರಿಕೆಯು ಬಹುವಿಧದ ಸಂಸ್ಥೆಗಳ ನಡುವೆ ಒಂದು ಹೊಸ ಸಾಮೂಹಿಕ ಪ್ರಭಾವದ ಮಾದರಿಯನ್ನು ಬಹುವಿಧದ ಸಂಸ್ಥೆಗಳೊಂದಿಗೆ –ಸಾರ್ವಜನಿಕ, ಖಾಸಗಿ ಮತ್ತು ಸರಕಾರಿ-ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ರೂಪಿಸುತ್ತಿದೆ.

ಕರ್ನಾಟಕ ಕಲಿಕಾ ಸಹಭಾಗಿತ್ವವು ಒಳಹರಿವು (inputs) ಮತ್ತು ಹೊರಹರಿವಿನ ಜಾಡನ್ನು ಹಿಡಿಯಲು, ನೀತಿ, ವಕಾಲತ್ತು ಮತ್ತು ಮಧ್ಯವರ್ತನೆಗಳಿಗೆ ದತ್ತಾಂಶಗಳನ್ನು ಒದಗಿಸಲು ತಂತ್ರಜ್ಞಾನವನ್ನು ಬಳಸುತ್ತದೆ. ಅದು ಸಾಮಾನ್ಯ ಕಾರ್ಯಸೂಚಿ (common agendas); ಹಂಚಿತ ಮಾಪನ ವ್ಯವಸ್ಥೆ, ಪ್ರತಿಯೊಂದು ಸಂಸ್ಥೆಗಳ ಕೆಲಸಗಳನ್ನು ಬಲಬಡಿಸುವ ಮತ್ತು ಪಾಲುದಾರಿಕೆ ಸಂಸ್ಥೆಗಳ ನಡುವೆ ಮತ್ತು ವಿಶಾಲ ಪರಿಸರ ವ್ಯವಸ್ಥೆಯೊಂದಿಗೆ ಪ್ರಭಾವ, ಸಂಯೋಜನೆ ಮತ್ತು ಸಂವಹನಕ್ಕಾಗಿ ಹೊಸ ಮಾರ್ಗಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ.

ಕರ್ನಾಟಕ ಕಲಿಕಾ ಸಹಭಾಗಿತ್ವವು ಬಹು ವಿಧದ ಭಾಗೀದಾರರಿಗೆ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಳನೊಟಗಳನ್ನು ಒದಗಿಸುತ್ತದೆ. ಕರ್ನಾಟಕ ಕಲಿಕಾ ಸಹಭಾಗಿತ್ವವು ಎಲ್ಲಾ ಕೆಲಸಗಳು ಮುಕ್ತ ಪರವಾನಿಗೆಗಳಡಿಯಲ್ಲಿ ಗೌಪ್ಯತೆ ಕಾನೂನುಗಳು ನಮಗೆ ಹಂಚಲು ಅನುಮತಿ ನೀಡುವಷ್ಟರ ಮಟ್ಟಿಗೆ ಕೋಡ್: https://github.com/klpdotorg/ ಮತ್ತು ದತ್ತಾಂಶಗಳೆರಡೂ ಒದಗಿಸುತ್ತದೆ.

ಕರ್ನಾಟಕ ಕಲಿಕಾ ಸಹಭಾಗಿತ್ವವು ನಿರ್ಧಾರ ತೆಗೆದುಕೊಳ್ಳುವವರಿಗೆ ಸಹಾಯಕಾರಿಯಾಗುವ ಸರಳ ಮತ್ತು ಮಾಹಿತಿ ಸಮೃದ್ಧ ದತ್ತಾಂಶ ದೃಶ್ಯೀಕರಣಗಳನ್ನು ರೂಪಿಸಲು ದೊಡ್ಡ ಪ್ರಮಾಣದ ದತ್ತಾಂಶಗಳೊಂದಿಗೆ ಕೆಲಸ ಮಾಡುತ್ತದೆ.
ಕೆಲವು ಉದಾಹರಣೆಗಳು:
ದತ್ತಾಂಶ
ಕರ್ನಾಟಕ ಕಲಿಕಾ ಸಹಭಾಗಿತ್ವವು ಬಹು ವಿಧದ ಭಾಗೀದಾರರಿಗೆ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಳನೊಟಗಳನ್ನು ಒದಗಿಸುತ್ತದೆ. ಕರ್ನಾಟಕ ಕಲಿಕಾ ಪಾಲುದಾರಿಕೆಯ ಎಲ್ಲಾ ಕೆಲಸಗಳು ಮುಕ್ತ ಪರವಾನಿಗೆಗಳಡಿಯಲ್ಲಿ ಗೌಪ್ಯತೆ ಕಾನೂನುಗಳು ನಮಗೆ ಹಂಚಲು ಅನುಮತಿ ನೀಡುವಷ್ಟರ ಮಟ್ಟಿಗೆ ಕೋಡ್ ಮತ್ತು ದತ್ತಾಂಶಗಳೆರಡೂ ದೊರಕುತ್ತವೆ
ವರದಿ
ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಸಿಗುವ ದತ್ತಾಂಶದ ಒಂದು ಉದಾಹರಣೆ ಇಲ್ಲಿದೆ. ಅಂತಹದೇ ವರದಿಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅವರ ಕ್ಶೇತ್ರಗಳಿಗಾಗಿ ಕಳುಹಿಸಲಾಗುವುದು.
ಅನ್ವಯಿಕತೆ
ಅತ್ಯುತ್ತಮವಾಗಿ ಕ್ರೋಢೀಕರಣಗೊಂಡ ಶಿಕ್ಷಣದ ಜಿಲ್ಲಾ ಮಾಹಿತಿ ವ್ಯವಸ್ಥೆಯನ್ನು (DISE data) ಬಳಸಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತದ ವಿಶ್ವವಿದ್ಯಾಲಯ (NUEPA) ಅಭಿವೃದ್ಧಿಪಡಿಸಿದ ಅನ್ವಯಿಕತೆಯು ಇಲ್ಲಿದೆ.
ರಿಯಲ್ ಟೈಮ್
ಇಲ್ಲಿ ನಿಮಗೆ ಶಾಲೆ ಮತ್ತು ಶಾಲಾ ಪೂರ್ವ ರಿಯಲ್ ಟೈಮ್ ವರದಿ ಮಾಡುವ ವ್ಯವಸ್ಥೆಗಳು ಬಳಕೆಯಲ್ಲಿರುವುದನ್ನು ಕಾಣಬಹುದಾಗಿದೆ.


ಕರ್ನಾಟಕ ಕಲಿಕಾ ಸಹಭಾಗಿತ್ವದ ದತ್ತಾಂಶದ ಆಧಾರದಲ್ಲಿ ರಚಿಸಿದ ವರದಿಗಳನ್ನು ನಾವು ಯಶಸ್ವಿಯಾಗಿ ಸಂಸತ್ ಸದಸ್ಯರಿಗೆ (ಸಂಸದರು) ಮತ್ತು ಕರ್ನಾಟಕದ ವಿಧಾನ ಸಭೆಯ ಸದಸ್ಯರಿ(ಶಾಸಕರು)ಗೆ ತಲುಪಿಸಿದ್ದೇವೆ. ಬೆಂಗಳೂರು ನಗರ ಜಿಲ್ಲೆಯ ಶಾಸಕರಿಂದ ದೊರಕಿರುವ ಆರಂಭಿಕ ಹಿಮ್ಮಾಹಿತಿಯು ಬಹಳ ಭರವಸೆದಾಯಕವಾಗಿತ್ತು ಮತ್ತು ನಮ್ಮ ವರದಿಗಳನ್ನು ಆಧರಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆ ವರದಿಗಳು http://reports.klp.org.in/ ಯಲ್ಲಿ ಲಭ್ಯವಿರುತ್ತವೆ.

ಸ್ವತಂತ್ರ ಶಾಲಾ ಹಣಕಾಸು ದತ್ತಾಂಶ ಸೆಟ್ (PAISA) ದೆಹಲಿ ಮೂಲದ ಅಕೌಂಟೆಬಿಲಿಟಿ ಇನೀಶಿಯೇಟಿವ್ ಸಂಸ್ಥೆಯೊಂದರ ಕರ್ನಾಟಕ ಕಲಿಕಾ ಸಹಭಾಗಿತ್ವ, ಜಿಲ್ಲಾ ಶಿಕ್ಷಣದ ಮಾಹಿತಿ ವ್ಯವಸ್ಥೆ (DISE data) ಮತ್ತು ಇಂಡಿಯಾ ಗವರ್ನ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳ ವರದಿಗಳ ಸಹಯೋಗದೊಂದಿಗೆ ರೂಪಿಸಲಾಗಿದೆ.





 
Akshara Foundation