x

Subscribe to our mailing list

x











More about yourself *



How do you plan to use these resources?






ENGLISH | KANNADA
ಭಾರತವು ದೇಶದಾದ್ಯಂತ ಎಲ್ಲಾ ಮಕ್ಕಳಿಗೆ ಅನುಕೂಲವಾಗುವಂತೆ ಒಂದು ಪ್ರಮುಖ ಹೆಗ್ಗುರುತಾದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು 2010 ರಲ್ಲಿ ಪರಿಚಯಿಸಿತು. ಅಕ್ಷರವು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀರಣ ಮತ್ತು ಪ್ರತಿಯೊಂದು ಮಗುವು ಶಾಲೆಯಲ್ಲಿರುವುದನ್ನು ಖಾತರಿ ಪಡಿಸುವ ಹಾದಿಯಲ್ಲಿದೆ. ಆದಾಗ್ಯೂ, ಪ್ರಾಥಮಿಕ ಶಾಲೆಗಳಲ್ಲಿ ಅರ್ಧಕ್ಕೆ ಶಾಲೆ ಬಿಡುವವರ ಪ್ರಮಾಣವು ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿನ ವಿದ್ಯಾರ್ಥಿ ಫಲಿತಗಳ ಒಂದು ಮೌಲ್ಯಮಾಪನವು ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಅತ್ಯಂತ ದೊಡ್ದ ಪ್ರಮಾಣವು ಪ್ರಾಥಮಿಕ/ಮೂಲಭೂತ ಓದಿನ ಕೌಶಲ್ಯಗಳಲ್ಲಿ ಶ್ರೇಣಿ-ಸೂಕ್ತ ಮಟ್ಟದಲ್ಲಿರುವುದಿಲ್ಲವೆಂಬ ಅಂಶವನ್ನು ತೋರಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮಗೆ ಓದಲು ಸಾಧ್ಯವಾಗುವುದಿಲ್ಲವೆಂಬ ಕಾರಣದಿಂದ ಮಾತ್ರವೇ ಇತರ ವಿಷಯಗಳನ್ನು ಗ್ರಹಿಸಲು ವಿಫಲರಾಗುವರು ಮತ್ತು ಅವರಲ್ಲಿ ಹೆಚ್ಚಿನವರು ಅರ್ಧಕ್ಕೆ ಶಾಲೆಯಿಂದ ಹೊರಬೀಳುವರು. ಯಾಕೆಂದರೆ, ಅವರಿಗೆ ತಮ್ಮ ಕಲಿಕೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಇಲ್ಲವೇ ಶಾಲೆಯಿಂದ ತಮಗೆ ಸಾಕಷ್ಟು ಉಪಯೋಗ ಲಭಿಸುತ್ತಿಲ್ಲವೆಂದು ಅವರಿಗೆ ಅನಿಸುತ್ತಿದೆ. ಅವರು ಮೂಲಭೂತ ಕೆಲಸವಾದ ಕಲಿಕೆಯನ್ನು ಮಾಡಲು ಅಸಮರ್ಥರಾದರೆ, ಅವರು ಶಾಲಾ ವಿದ್ಯಾಭ್ಯಾಸದ ಲಾಭಗಳನ್ನು ಪಡೆಯುವರೆಂದು ನಾವು ಹೇಗೆ ನಿರೀಕ್ಷಿಸುವುದು?.
The Akshara Idea
2-7 ಶ್ರೇಣಿಗಳಿಗೆ ಒಂದು ಪರಿಹಾರ ಓದಿನ ಕಾರ್ಯಕ್ರಮವಾದ ಓದುವೆ ನಾನು ಕಾರ್ಯಕ್ರಮವನ್ನು ಅಕ್ಷರವು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲಿ 2006 ರಲ್ಲಿ ಅಭಿವೃದ್ಧಿಗೊಳಿಸಿ ಅನುಷ್ಟಾನಗೊಳಿಸಿತು. ಈ ಕಾರ್ಯಕ್ರಮವು ಕರ್ನಾಟಕದ ಸರಕಾರಿ ಪ್ರಾಥಮಿಕ ಶಾಲೆಗಳ ಕಲಿಕಾ ಮಾಧ್ಯಮಗಳದ ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ಓದುವ ಕೌಶಲ್ಯಗಳನ್ನು ಬೋಧಿಸುವ ಗುರಿಯನ್ನು ಹೊಂದಿರುತ್ತದೆ.
ಕಾರ್ಯಕ್ರಮವು ಮೂಲತಃ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಲಾಲುದ್ದೀನ್ ರವರಿಂದ ರೂಪಿಸಲ್ಪಟ್ಟಿದ್ದು, ಅದು ಮಕ್ಕಳಿಗೆ ಸಹಜವಾಗಿ ಕಲಿಯುವ ಒಂದು ತಂತ್ರದ ಮೇಲೆ ಆಧರಿಸಿದೆ. ಆಲಿಸುವಿಕೆ, ಮಾತನಾಡುವುದು, ಓದು ಮತ್ತು ಬರವಣಿಗೆಯನ್ನು ಒಂದು ಆಟದ ರೀತಿಯಲ್ಲಿ ಸಂಯೋಜಿಸಲ್ಪಟ್ಟಿರುವ ಒಂದು ಸಮಗ್ರ ವಿಧಾನವನ್ನು ಈ ವಿಧಾನವು ಬಳಸುತ್ತದೆ. ಅನುಕ್ರಮಣೀಯವಾಗಿ ಕಲಿಯುವ ಬದಲು, ಮಕ್ಕಳು ಒಂದಕ್ಕೊಂದು ಥಳುಕು ಹಾಕಲ್ಪಟ್ಟಿರುವ ಮತ್ತು ಒಬ್ಬ ಮಗುವಿಗೆ ಸ್ವಂತವಾಗಿ ‘ಓದಲು’ ಅನುವು ಮಾಡಿಕೊಡುವ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ವಿದ್ಯಾರ್ಥಿಗಳು ಒಂದು ಜೊತೆ ಕಥೆಗಳ ಹಾಳೆಗಳನ್ನು ಬಳಸುತ್ತಾರೆ-ಪ್ರತಿ ಕಾರ್ಡ್ ನಲ್ಲಿ ಸಚಿತ್ರ ವರ್ಣನೆಗಳಿರುವ ಒಂದು ಸರಳ ಕಥೆಯಿರುತ್ತದೆ. ಪ್ರತಿ ಅವಧಿಗೆ ಒಂದು ಕಥೆ ಕಾರ್ಡ್ ಇರುವುದು ಮತ್ತು ಕಥೆಗಳು ಕ್ರಮೇಣ ಹೆಚ್ಚು ಸಂಕೀರ್ಣವಾಗುತ್ತವೆ. ಮಕ್ಕಳು ತಮ್ಮ ಸ್ವಂತಿಕೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುವಂತೆ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಓದನ್ನು ಶಾಲೆಯ ಒಳಗೂ ಮತ್ತು ಹೊರಗೂ ಅಭ್ಯಾಸ ಮಾಡುವರು. ಮಕ್ಕಳ ಪ್ರಗತಿಯನ್ನು ಮೇಲುಸ್ತುವಾರಿ ಮಾಡಿ ಕಾರ್ಯಕ್ರಮವು ಸರಿಯಾದ ಹಾದಿಯಲ್ಲಿಡುವ ಮೌಲ್ಯಮಾಪನವನ್ನು ಕಾರ್ಯಕ್ರಮವು ಹೊಂದಿರುತ್ತದೆ.






 
Akshara Foundation