x

Subscribe to our mailing list

xMore about yourself *How do you plan to use these resources?


ENGLISH | KANNADA
“ಮಗುವಿನ ಜೀವನದ ಆರಂಭಿಕ ವರ್ಷಗಳು ಜೀವನದಾದ್ಯಂತ ಉಳಿದುಕೊಳ್ಳುತ್ತವೆ” ಇದು ಅಕ್ಷರ ಪೌಂಡೇಶನ್ ಡಿಸೆಂಬರ್ 2012 ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ ಸಂವಾದದಲ್ಲಿ ಡಾ. ವಿನಿತಾ ಕೌಲ್, ದೆಹಲಿ ಅಂಬೇಡ್ಕರ್ ಯುನಿವರ್ ಸಿಟಿ ಸಿ.ಇ.ಸಿ.ಇ.ಡಿ.ಯ (CECED) ಪ್ರೊಫೆಸರ್ ಮತ್ತು ಮುಖ್ಯಸ್ಥೆಯು ಹೇಳಿದ ಆರಂಭಿಕ ನುಡಿಗಳಾಗಿದ್ದವು. ಆದುದರಿಂದ ಇದರ ಮಹತ್ವ ಹಿನ್ನಲೆಯಲ್ಲಿ, ಆರಂಭಿಕ ಶಿಶುಪಾಲನೆ ಮತ್ತು ಶಿಕ್ಷಣಕ್ಕೆ Early Childhood Care and Education (ECCE) .ಅಗತ್ಯವಿರುವ ಗಮನ ಮತ್ತು ಒತ್ತನ್ನು ನೀಡುವುದು ಅಗತ್ಯವಾಗಿದೆ.

ಆರಂಭಿಕ ಬಾಲ್ಯತನ ಆರೈಕೆ ಮತ್ತು ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯಂತಹ ವಿಶಾಲ ಪರಿಧಿಗಳ ಕ್ಷೇತ್ರವನ್ನು ಒಳಗೊಂಡಿದ್ದರೆ, ಅಕ್ಷರ ಪೌಂಡೇಶನ್ ನ ಪ್ರಮುಖ ಗಮನವು ಆರಂಭಿಕ ಶಿಶು ಶಿಕ್ಷಣದ ಮೇಲೆ ಕೇಂದ್ರೀಕೃತವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅಕ್ಷರವು ಕಳೆದ ಹಲವಾರು ವರ್ಷಗಳಿಂದ 3-6 ವರ್ಷ ಪ್ರಾಯದೊಳಗಿನ ಮಕ್ಕಳ ಶಿಕ್ಷಣದ ಮೇಲೆ ಅವರ ಶಾಲಾ ಪೂರ್ವ ಕಾರ್ಯಕ್ರಮದ ಮೂಲಕ ತನ್ನ ಗಮನವನ್ನು ಕೇಂದ್ರೀಕೃತಗೊಳಿಸುತ್ತಿದೆ. ಪ್ರಿಪೇರ್ ನಾಟ್ ರಿಪೇರ್ ಎನ್ನುವುದು ಕಾರ್ಯಕ್ರಮದ ಹೆಸರು ಮತ್ತು ಈ ಪ್ರಯತ್ನವು ಮಕ್ಕಳಿಗೆ ಬೆಳೆಯಲು ಮತ್ತು ಅವರ ಅಭಿವೃದ್ಧಿ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಸಮಗ್ರವಾಗಿ ಪೂರೈಸಲು ಒಂದು ಸಶಕ್ತಗೊಳಿಸುವ ಮತ್ತು ಪ್ರಚೋದಿಸುವ ಪರಿಸರವನ್ನು ರೂಪಿಸಿದೆ.

ಮಾರ್ಚ್ 2000 ರಿಂದ ಅಂದರೆ ಅಕ್ಷರ ಫೌಂಡೇಶನ್ ತನ್ನ ಪ್ರಾರಂಭದ ದಿನಗಳಿಂದಲೇ ಶಾಲಾ ಪೂರ್ವ ವಯೋಮಾನ ಗುಂಪಿನ 1,50,000ಕ್ಕಿಂತಲೂ ಹೆಚ್ಚಿನ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರಿದೆ..
The Akshara Idea
"ಪ್ರಿಪೇರ್ ನಾಟ್ ರಿಪೇರ್" ಕಾರ್ಯಕ್ರಮವನ್ನು ಸರಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯ ಸಹಯೋಗದ ಮೂಲಕ ಗುಣಾತ್ಮಕ ಶಾಲಾ ಪೂರ್ವ ಶಿಕ್ಷಣವನ್ನು ಒದಗಿಸಲು ಅಕ್ಷರ ಫೌಂಡೇಶನ್ ಅಭಿವೃದ್ಧಿಪಡಿಸಿದೆ. ಅಂಗನವಾಡಿ ಕಾರ್ಯಕರ್ತೆಯು ಸಮುದಾಯದಲ್ಲಿ ಅನೇಕ ಸೇವೆಗಳನ್ನು ಒದಗಿಸಲು ಜವಬ್ದಾರರಾಗಿರುವರು. ಇಷ್ಟೊಂದು ಜವಬ್ದಾರಿಗಳ ನಡುವೆ, ಶಾಲಾ-ಪೂರ್ವ ಮಕ್ಕಳಿಗೆ ಸಂರಚಿತ ಕಲಿಕಾ ಚಟುವಟಿಕೆಗಳಿಗೆ ಸಿಗಬೇಕಾದ ಪ್ರಾಮುಖ್ಯತೆಯು ಸಿಗುತ್ತಿಲ್ಲವೆಂದು ಕಂಡು ಬಂದಿದೆ.

ಅಕ್ಷರ ಫೌಂಡೇಶನ್ ರಾಜ್ಯ ಸರಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು, ಮತ್ತು 2009 ರಲ್ಲಿ ಬೆಂಗಳೂರು ನಗರದಾದ್ಯಂತ ಕಾರ್ಯಕ್ರಮವನ್ನಾಗಿ ಪ್ರಾರಂಭಿಸಿತು. ಬಾಲವಾಡಿ ಕೇಂದ್ರಗಳ ಕಳೆದ ಒಂದು ದಶಕದ ಸುದೀರ್ಘ ಅನುಭವವನ್ನು ಆಧರಿಸಿ ಕಾರ್ಯಕ್ರಮವು ರೂಪುಗೊಂಡಿದೆ. ಆರಂಭಗೊಂಡ ದಿನದಿಂದ ಕಳೆದ ಹಲವು ವರ್ಷಗಳಲ್ಲಿ, ಅದು ಸ್ವತಂತ್ರ ಬಾಲವಾಡಿಗಳ ಪೋಷಣೆ, ಅಂಗನವಾಡಿ ಕಾರ್ಯಕರ್ತೆಯರ ತರಬೇತಿ, ಅಂಗನವಾಡಿ ಮತ್ತು ಬಾಲವಾಡಿಗಳಿಗೆ ಬೋಧನಾ –ಕಲಿಕಾ ಸಾಮಗ್ರಿಗಳ ಒದಗಿಸುವಿಕೆ ಮತ್ತು ಸ್ವತಂತ್ರ ಬಾಲವಾಡಿ ಮತ್ತು ಅಂಗನವಾಡಿ ಗಳಿಗೆ ಮಕ್ಕಳ ಸಾಧನೆಗಳ ಮೇಲೆ ನಿಗಾ ಇಡಲು ಸಹಾಯಕಾರಿಯಾಗುವ ಒಂದು ಬೆಂಬಲ ಮತ್ತು ಮೇಲುಸ್ತುವಾರಿ ವ್ಯವಸ್ಥೆಯು ಒಳಗೊಂಡಿದ್ದವು.

ಈ ಉಪಕ್ರಮದ ಧೀರ್ಘಕಾಲಿನ ಉದ್ದೇಶವು ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಮತ್ತು ಮಕ್ಕಳು ತಮ್ಮ ಶಾಲಾ ಶಿಕ್ಷಣದ ಆರಂಭಿಕ ವರ್ಷಗಳಿಂದಲೇ ಇದರ ಲಾಭವನ್ನು ಪಡೆಯುವುದನ್ನು ಖಾತರಿಪಡಿಸುವುದಾಗಿದೆ ಹಾಗೂ ಈ ಮೂಲಕ ಅದು ಅವರ ಒಟ್ಟು ಜೀವನಕ್ಕೆ ಸಹಕಾರಿಯಾಗುವುದು. ಇದನ್ನು ಸಾಧಿಸಲು ಅಕ್ಷರವು ಶಾಲಾ –ಸಿದ್ದತೆಗೆ ಬೇಕಾಗುವ ಕೌಶಲ್ಯಗಳನ್ನು ಸಂತಸದಾಯಕ ಕಲಿಕೆಯ ಮೂಲಕ ನೀಡುವುದರ ಮೇಲೆ ತನ್ನ ಗಮನ ಕೇಂದ್ರೀಕರಿಸುತ್ತದೆ.
ಅಕ್ಷರದ ಶಾಲಾ ಪೂರ್ವ ಶಿಕ್ಷಣದ ಕಾರ್ಯ ತಂತ್ರವು ವಜ್ಞಾನಿಕ ಮತ್ತು ವಾಸ್ತವತೆಯ ವಿನ್ಯಾಸವನ್ನು ಆಧರಿಸಿದೆ. ಇದರ ಪ್ರಮುಖ ಗಮನವು ಬೋಧನಾ- ಕಲಿಕಾ ಸಾಮಗ್ರಿಗಳು ಮತ್ತು ಶಿಕ್ಷಕರ ಸಾಮರ್ಥ್ಯಾಭಿವೃದ್ಧಿಯಂತಹ ಪ್ರಮುಖ ಒಳಹರಿವಿನೊಂದಿಗೆ ಒಂದು ‘ಸಂರಚಿತ’ ಶಾಲಾ ಪೂರ್ವ ಕಾರ್ಯಕ್ರಮವನ್ನು ಸ್ಥಾಪಿಸುವುದು. ಅತ್ಯುತ್ತಮವಾಗಿ ಮತ್ತು ಸಂಶೋಧನಾಧಾರಿತವಾಗಿ ಆರಂಭಿಕ ಬಾಲ್ಯಕಾಲದ ಅಭಿವೃದ್ಧಿಯ ಬಹು ವಿಧದ ಕ್ಷೇತ್ರಗಳಾದ್ಯಂತದ ಅಭಿವೃದ್ಧಿಯನ್ನು ಬೆಂಬಲಿಸಲು ರೂಪಿಸಿದ ಶಾಲಾ –ಪೂರ್ವ (ಕಿಟ್) ಒಂದು ಸದೃಢ ತರಬೇತಿಯ ಅಂಶಕ್ಕೆ ಬೆಂಬಲ ಒದಗಿಸುತ್ತದೆ. ಕಾರ್ಯಕ್ರಮದ ಮೇಲುಸ್ತುವಾರಿ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಗೆ ಭಾಗವಾಗಿ ಬಾಲ ವಿಕಾಸ ಸಮಿತಿಗಳ ಪುನ:ಶ್ಚೇತನಗೊಳಿಸುವಿಕೆ ಆಗಿರುತ್ತದೆ. ಅಂಗನವಾಡಿಗಳಿಗೆ ಬೆಂಬಲ ನೀಡಲು, "ಪ್ರಿಪೇರ್ ನಾಟ್ ರಿಪೇರ್" –ಬೋಧನಾ-ಕಲಿಕಾ ಸಾಮಗ್ರಿಗಳು, ಕಿಟ್ ಮತ್ತು ಕೈಪಿಡಿಗಳಿಗಾಗಿ ಮೇಲಿನ ನಮ್ಮ ಸಂಪನ್ಮೂಲ ವಿಭಾಗವನ್ನು ಸಂಪರ್ಕಿಸಿ.

tlm


ಅಕ್ಷರವು 2000 ರಲ್ಲಿ ಪ್ರಾರಂಭವಾದಂದಿನಿಂದ, , ಪ್ರಿಪೇರ್ ನಾಟ್ ರಿಪೇರ್ ಕಾರ್ಯಕ್ರಮವು 1,50,000 ಮಕ್ಕಳ ಮೇಲೆ ಮಹತ್ವದ ಪ್ರಭಾವವನ್ನು ಬೀರಿದೆ.

ಬೋಧನೆ ಮತ್ತು ಸಮಯ ನಿರ್ವಹಣೆಗೆ ಅಂಗನವಾಡಿ ಕಾರ್ಯಕರ್ತರು ವಿವಿಧ ರೀತಿಯ ಪ್ರಯೋಗಿಕ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿದಿರುವುದರಿಂದ ಅವರಿಗೆ ಹೊಸ ದಿಕ್ಕು ಮತ್ತು ಉದ್ದೇಶಗಳು ದೊರಕಿದವು.

ಕಾರ್ಯಕ್ರಮವು ಗುಣಾತ್ಮಕ ಬೋಧನಾ-ಕಲಿಕಾ ಸಾಮಗ್ರಿಯ ಪ್ರಾಮುಖ್ಯತೆಯನ್ನು ಪೂರ್ವ ಶಾಲಾ ಶಿಕ್ಷಣದ ಒಂದು ಪ್ರಮುಖ ಸಾಧನವಾಗಿ ಪ್ರಧಾನ ಭೂಮಿಕೆಗೆ ತರುತ್ತದೆ. ಇದು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಈ ವಿಚಾರದಲ್ಲಿ ತನ್ನ ನಿಲುವಿನ ಮರುಚಿಂತನೆ ಮಾಡಲು ಪ್ರೇರೇಪಿಸಿದೆ ಮತ್ತು ಇಂದು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಪರೀಷ್ಕೃತಗೊಳಿಸಿದ ಸಾಮಗ್ರಿಗಳನ್ನು ಎಲ್ಲಾ ಅಂಗನವಾಡಿಗಳಿಗೆ ಒದಗಿಸುತ್ತದೆ.

ಇದುವರೆಗೆ ವಿಫಲವಾಗುತ್ತಿದ್ದ ಅಥವಾ ಕಾರ್ಯಸ್ಥಗಿತಗೊಂಡ ಬಾಲ ವಿಕಾಸ ಸಮಿತಿ ಮತ್ತು ಅಂಗನವಾಡಿ ಗೆಳೆಯರಂತಹ ಸಮುದಾಯ ಬೆಂಬಲ ಗುಂಪುಗಳಿಗೆ ಮರು ಹುಟ್ಟು ನೀಡಲಾಗಿದೆ.

 
Akshara Foundation