x

Subscribe to our mailing list

x











More about yourself *



How do you plan to use these resources?






ENGLISH | KANNADA
ಒಬ್ಬತೀಕ್ಷ್ಣ ದೃಷ್ಟಿಯ ಹುಡುಗ ಮೊದಲ ಬಹುಮಾನ ಗೆಲ್ಲುತ್ತಾನೆ! – ಏಂಜಲೀನ

ನಾವು ನಿಮಗೆ ಆನಂದ್ ಎಂಬ ಒಬ್ಬ ಹುಡುಗನ ಕಥೆಯನ್ನು ಹೇಳುತ್ತೇವೆ. ಆತನು ತನ್ನ ಒಂಭತ್ತು ವರ್ಷಗಳವರಗೆ ಶಾಲೆಯ ಬಾಗಿಲುಗಳನ್ನು ಸಹ ಕಂಡಿರಲಿಲ್ಲ. ಪ್ರಸ್ತುತ ಆತ 4ನೇ ತರಗತಿಯಲ್ಲಿ ಓದುತ್ತಿದ್ದಾನೆ ಧಾರವಾಡ ಜಿಲ್ಲೆಯ, ನವಲಗುಂದ ತಾಲ್ಲೂಕಿನ ಜವೂರ್ ಎಂಬ ಹಳ್ಳಿಯಿಂದ ಬಂದವನೆ ಆನಂದ್ ಕಿರೇಹೊಸೂರ್. ಈತ ಅವರ ಕುಟುಂಬದ ಕಿರಿಯ ಮಗ ಹಾಗು ಅವನಿಗೆ ವಿವಾಹವಾದ ಓರ್ವ ಅಣ್ಣ ಹಾಗು ನಾಲ್ಕು ಜನ ಅಕ್ಕಂದಿರಿದ್ದಾರೆ. ಈವರೆಗೆ ಯಾರೂ ಶಾಲೆಗೆ ಹೋದವರಲ್ಲ. ಆನಂದನ ತಂದೆ ಒಬ್ಬ ಕುರಿ ಕಾಯುವವನ ಮತ್ತು ಅವನ ಹಿರಿಯ ಮಗ ಅವನಿಗೆ ಕುರಿ ಕಾಯುವಲ್ಲಿ ಸಹಾಯ ಮಾಡುತ್ತಾನೆ.

ಜೀವನೋಪಾಯವು ಹೆಚ್ಚು ಅನಿವಾರ್ಯವೆಂದು ಅಭಿಪ್ರಾಯ ಪಟ್ಟ ಅವನ ಪೋಷಕರು, 9ರ ಪ್ರಾಯದ ಆನಂದನನ್ನು ಶಾಲೆಗೆ ಕಳುಹಿಸದೆ, ಕುರಿಕಾಯುವಲ್ಲಿ ಸಹಾಯಕ್ಕೆ ಬಳಸುತ್ತಿದ್ದರು. ಆನಂದನ ಸಹೋದರಿಯಾದ ದೇವಕ್ಕ ಗದಗ ಜಿಲ್ಲೆಯ ಬಿನದ್ಕಟ್ಟಿ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವನನ್ನು ಆಕೆಯ ಪಾಲನೆಗಾಗಿ ಅಲ್ಲಿಗೆ ಕಳುಹಿಸಲಾಗಿತ್ತು.

ಅಲ್ಲಿ, ಶಿಕ್ಷಣ ಇಲಾಖೆಯ ದಾಖಲಾತಿ ನಡೆಯುತ್ತಿತ್ತು. ಬಿನದ್ಕಟ್ಟಿಗೆ ಗೊತ್ತುಪಡಿಸಿದ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಯು ಆನಂದನು ಮನೆಯಲ್ಲಿ ಇದ್ದುದನ್ನು ಕಂಡು ಅವನನ್ನು ಶಾಲೆಗೆ ದಾಖಲು ಮಾಡಿಸಲು ಹೇಳಿದರು. ಆನಂದನು ಅಲ್ಲಿಗೆ ಬಹಳ ದಿನ ಇರಲು ಬಂದಿರಲಿಲ್ಲ. ಆತನ ಅಕ್ಕ ಅವನನ್ನು ಅಲ್ಲಿಯ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ದಾಖಲು ಮಾಡಿಸಿದರು.

ಒಂಭತ್ತು ವರ್ಷಗಳಲ್ಲಿ ಎಂದೂ ಶಾಲೆಗೆ ಹೋಗದ ಆನಂದನಿಗೆ ಚಡಪಡಿಕೆ ಶುರುವಾಯಿತು. ಆತನಿಗಿಂತ ಕಿರಿಯ ಮಕ್ಕಳೊಡನೆ ತರಗತಿಯಲ್ಲಿ ಕೂರಲು, ಲೇಖನಿ ಹಿಡಿಯಲು ಆಗಲಿಲ್ಲ. ಆತನ ಮನಸ್ಸೆಲ್ಲಾ ಜವೂರಿನಲ್ಲಿದ್ದ ಅವನ ಕುರಿಗಳ ಮೇಲಿತ್ತು. ಅವನನ್ನು ಮತ್ತೆ ಊರಿಗೆ ಕಳುಹಿಸಲು ಅವನು ಅಕ್ಕನಲ್ಲಿ ಕೇಳಿಕೊಂಡನು.

ಅವನ ಶಿಕ್ಷಕಿ ಶ್ಯಾಮಾರವರ, ಪ್ರೋತ್ಸಾಹ, ಬೆಂಬಲ ಹಾಗು ಪ್ರೇರಣೆಗಳಿಂದ ಆನಂದ್ ಶಾಲೆಗೆ ಬರಲು ಮುಂದುವರೆಸಿದನು. ಅವನು ಶಾಲೆಗೆ ಬರಲು ಹಾಗು ಮುಂದುವರೆಸಲು ಬೇಕಿದ್ದುದು ಬೆಂಬಲವೆಂಬುದು ಅವರಿಗೆ ತಿಳಿದಿತ್ತು. ಶ್ಶಾಮಾರವರು ಅವನಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥೈಸಿ ಹೇಳಿದರು. ಆಕೆ ಕರುಣಾಳುವಾಗಿದ್ದಳು ಮತ್ತು ಅವನಿಗೆ ಒಂದು ವರ್ಷ ಪೂರ್ತಿ ಓದಲು ಮನವೊಲಿಸಿದರು.

ಆನಂದ್ ಆಕೆಯನ್ನು ನಂಬಿದ, ಆಕೆ ಹೇಳಿದ್ದೆಲ್ಲವನ್ನು ಕೇಳಿದ, ಕ್ರಮೇಣವಾಗಿ ಕಲಿಯಲು ಆರಂಭಿಸಿದ. ಅವನಲ್ಲಿದ್ದ ಕೀಳರಿಮೆ ಬಹಳ ಶೀಘ್ರವಾಗಿ ಕಡಿಮೆಯಾಯಿತು ಅಲ್ಲದೇ ಅವನು ತನ್ನ ಹಳ್ಳಿಗೆ ಹೋಗಲು ಇಷ್ಟ ಪಡಲಿಲ್ಲ. ಶ್ಯಾಮಾ ಅವನಿಗೆ 3ನೇ ತರಗತಿಯವರೆಗೆ ಶಿಕ್ಷಕರಾಗಿದ್ದರು. ಪ್ರಸ್ತುತ ಅವನು 4ನೇ ತರಗತಿಯಲ್ಲಿ ಸಂತೋಷವಾಗಿ ಪಾಠ ಕಲಿಯುತ್ತಿದ್ದಾನೆ.

ಆನಂದನ ಇತರೆ ಸಾಧನೆಗಳೂ ಸಹ ಬಹಳ ಸಂತೋಷ ನೀಡುತ್ತವೆ. ಬಿನದ್ಕಟ್ಟಿಯಲ್ಲಿ ನಡೆದ ಅಕ್ಷರ ಗ್ರಾಮ ಪಂಚಾಯತ್ ಗಣಿತ ಸ್ಪರ್ಧೆಯಲ್ಲಿ, ಆನಂದ್ 48 ಸ್ಪರ್ಧಿಗಳ ಪೈಕಿ 20/20 ಗಳಿಸಿ ಮೊದಲನೇ ಸ್ಥಾನ ಗಳಿಸಿದ. ಅವನು ತನ್ನ ಬಹುಮಾನದೊಂದಿಗೆ, ಕಣ್ಣಲ್ಲಿ ಸಂತೋಷದ ಕಂಬನಿಯೊಡನೆ ಅವನ ಸ್ಥಾನಕ್ಕೆ ಹಿಂದಿರುಗಿ ಕುಳಿತುಕೊಳ್ಳುವವರೆಗೂ ಸಭಿಕರು ಚಪ್ಪಾಳೆ ನಿಲ್ಲಿಸಲಿಲ್ಲ. ದೇವಕ್ಕನಿಗೆ ಆಕ ನೋಡುತ್ತಿರುವುದನ್ನು ನಂಬಲಾಗಲಿಲ್ಲ. ಕೆಲವರಿಗೆ ಆನಂದ್ ಮೊದಲೇ ಪರಿಚಿತನಾಗಿದ್ದನು. ಈಗ ಈ ಸಾಧನೆಯೊಂದಿಗೆ ಅವನ ವಿಶ್ವಾಸವು ಹೆಚ್ಚುತ್ತಿದ್ದು ಅವನು ಪಂಚಾಯತ್ನಲ್ಲಿ ಗುರುತಿಸಲ್ಪಡುತ್ತಿದ್ದಾನೆ.

ನಮ್ಮ ಸುತ್ತ ಮುತ್ತಲಿನಲ್ಲಿ ಇಂತಹ ಅನೇಕ ಅದ್ಭುತ ಕಥೆಗಳಿವೆ. ಗ್ರಾಮ ಪಂಚಾಯತಿ ಗಣಿತ ಸ್ಪರ್ಧೆಯಂತಹ ವೇದಿಕೆಯು ಅವುಗಳನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತದೆ.




ಸರ್ಕಾರೇತರ ಸಂಸ್ಥೆಗಳ ಬಗೆಗೆ ಶಿಕ್ಷಕರ ದೃಷ್ಟಿಕೋನವನ್ನು ಬದಲಿಸಿದ ಗಣಿತ ಕಲಿಕಾ ಆಂದೋಲನ (GKA) ಕಾರ್ಯಕ್ರಮ – ಮಂಜುನಾಥ ಬರ್ಕಾರ್

ಗಣಿತ ಕಲಿಕಾ ಆಂದೋಲನವು ಸರ್ಕಾರೇತರ ಸಂಘಟನೆಗಳ ಬಗೆಗೆ ಶಿಕ್ಷಕರ ದೃಷ್ಟಿಕೋನವನ್ನು ಬದಲಾಯಿಸಿದ ಬಗ್ಗೆ ಒಂದು ಕಥೆ.

ಧಾರವಾಡ ಜಿಲ್ಲೆಯಿಂದ 50ಕಿಮೀ ದೂರದಲ್ಲಿರುವ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಲಾವರ ಎಫ್.ಎ 35 ವರ್ಷದ ಶಿಕ್ಷಕರು ಕಳೆದ ಒಂಭತ್ತು ವರ್ಷಗಳಿಂದ ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷರದ ಕ್ಷೇತ್ರ ಕಾರ್ಯಕರ್ತರು ಅವರ ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದ ಬಗ್ಗೆ ತಲಾವರರಿಂದ ಪ್ರತಿಕ್ರಿಯೆ ತಿಳಿಯಲು ಪ್ರಯತ್ನಿಸಿದರು. ಆದರೆ ಅವರು ಶಾಲೆಯ ಶಿಕ್ಷಕರಾಗಿದ್ದರೂ ಅದಕ್ಕೆ ಯಾವ ರೀತಿಯಾದ ಆಸಕ್ತಿಯನ್ನು ವ್ಯಕ್ತಪಡಿಸಲಿಲ್ಲ. ಅವರು ಗಣಿತ ಕಲಿಕಾ ಆಂದೋಲನದ ಮೊದಲ ದಿನದ ತರಬೇತಿಯ ಸಮಯದಲ್ಲಿ ಅಥವ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ ಅಥವ ಉತ್ಸುಕತೆ ತೋರ್ಪಡಿಸಲಿಲ್ಲ.

ತರಬೇತಿಯ ಮುಕ್ತಾಯದ ಮೂರನೆಯ ದಿನದಂದು ಅವರಿಗೆ ತಾವ ಗಣಿತದಂತಹ ಅಮೂರ್ತ, ಮತ್ತು ಗೊಂದಲಮಯವಾದ ವಿಷಯವನ್ನು ಬೋಧಿಸುವಾಗ ಏನನ್ನು ಮರೆತಿದ್ದರು ಎಂಬುದರ ಅರಿವಾಯಿತು. ನಂತರ ಅವರು GKA ಕಿಟ್ ನಲ್ಲಿರುವ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಅವರ ತರಗತಿಗಳಲ್ಲಿ ಉಪಯೋಗಿಸಲು ಪ್ರಾರಂಭಿಸಿದರು. ಅವರಿಗೆ ತಮ್ಮ ಹಳೆಯ ಸಾಂಪ್ರದಾಯಿಕ ವಿಧಾನಗಳಿಂದ ಹೊರಬರಲು ಇದು ಸಹಾಯಮಾಡಿತು. ಅವರು ಕ್ಷೇತ್ರ ಕಾರ್ಯಕರ್ತರೊಂದಿಗೆ ಸಂವಹನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಲಾವರ್ ಅವರು ಮಕ್ಕಳಿಗೆ ಗಣಿತ ವಿಷಯ ಕಠಿಣವೆಂಬ ಭಯ ಹೋಗಲಾಡಿಸಲು ಮತ್ತು ಗಣಿತದ ಮೂಲಭೂತ ಅಂಶಗಳನ್ನು ಅರ್ಥಮಾಡಿಸಲು ಸಹಾಯಕವಾದ ಕಿಟ್ನ ಅಪಾರವಾದ ಉಪಯೋಗವನ್ನು ಕಂಡುಕೊಂಡರು.

ತಲಾವರ್ ಅವರ ವೃತ್ತಿಪರ ಬೆಳವಣಿಗೆ ಚುರುಕಾಗಿತ್ತು. ಇಂದಿನ ದಿನಗಳಲ್ಲಿ ಅವರು ಇತರೆ ಶಿಕ್ಷಕರೊಡನೆ ಶಿಕ್ಷಕರ ಗುಂಪುಗಳೊಂದಿಗೆ ಮತ್ತು ಕ್ಷೇತ್ರ ಕಾರ್ಯಕರ್ತರೊಡನೆ ತಮ್ಮ ತರಗತಿಯಲ್ಲಿ ನಡೆಯುವ ಚಟುವಟಿಕೆಗಳನ್ನು, ಗಣಿತ ಬೋಧನಾ-ಕಲಿಕಾ (TLM's) ಸಾಮಗ್ರಿಗಳೊಂದಿಗೆ ಹೇಗೆ ಬೋಧಿಸುತ್ತಾರೆಂದು ಹಂಚಿಕೊಳ್ಳುತ್ತಾರೆ. ಅಕ್ಷರ ಫೌಂಡೇಶನ್ ಕೆಲವು ವಾರಗಳ ಹಿಂದೆ ಸ್ಥಳೀಯ ಆಡಳಿತ ಸಹಕಾರದೊಂದಿಗೆ ನಡೆಸಿದ ಗ್ರಾಮ ಪಂಚಾಯತ್ ಗಣಿತ ಸ್ಪರ್ಧೆಯಲ್ಲಿ ತಮ್ಮ ಶಾಲೆಯು ಒಂದಕ್ಕಿಂತ ಹೆಚ್ಚು ಬಹುಮಾನಗಳನ್ನು ಗಳಿಸಬೇಕೆಂದು ಬಹಳ ಶ್ರಮಿಸಿದರು. ಈ ಸ್ಪರ್ಧೆಯಲ್ಲಿ ಅವರ ಶಾಲೆಯ ಮಕ್ಕಳು ಎರಡು ಬಹುಮಾನಗಳನ್ನು ಗೆದ್ದರು ಎಂದು ತಿಳಿದು ಅಪಾರ ಸಂತೋಷ ವ್ಯಕ್ತಪಡಿಸಿದರು.

ತಲಾವರ್ ರವರು ಈಗಾಗಲೇ ಗಣಿತ ಕಲಿಕಾ ಆಂದೋಲನದ ಒಬ್ಬ ನಿಷ್ಟಾವಂತ ರಾಯಭಾರಿ. ಸರ್ಕಾರೇತರ (NGO) ಸಂಸ್ಥೆಗಳು ಕೇವಲ ಸಾಮಗ್ರಿಗಳನ್ನು ಸರಬರಾಜು ಮಾಡುತ್ತವೆ ಎಂಬ ಅವರಲ್ಲಿನ ತಪ್ಪು ಕಲ್ಪನೆಯನ್ನು ಗ್ರಹಿಕೆಗಳನ್ನು ಹೋಗಲಾಡಿಸಿದೆ ಅಲ್ಲದೇ ಅವರು ಗಣಿತ ಕಿಟ್ ನೊಂದಿಗೆ ಅವರ ಯಶ ಸ್ವಿ ಕಥೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುತ್ತಾರೆ.




1-3-6-9 ಗೋಡೆಯ ಬರವಣಿಗೆಯ ಪರಿಣಾಮ – ಅಯ್ಯಣ್ಣ

ಇದು ಅಕ್ಷರದ 1-3-6-9 ಗೊಡೆಯ ಬರವಣಿಗೆಯ ಪ್ರಭಾವದ ಕಥೆ.

ಮಾಲಿಂಗರಾಯ ಶಿವಶರಣಪ್ಪ ಯಾದಗಿರಿ ಜಿಲ್ಲೆಯ ಶಾಹಾಪುರ ತಾಲ್ಲೂಕಿನ, ಐಯ್ಯಲಾ ಗ್ರಾಮದ ಓರ್ವ ಉತ್ಸಾಹಿ ಯುವಕ. ಅವರು ತಮ್ಮ ಡಿ.ಎಡ್ ( ಶಿಕ್ಷಣದಲ್ಲಿ ಡಿಪ್ಲೋಮ) ಪೂರ್ಣಗೊಳಿಸಿದ್ದಾರೆ ಮತ್ತು ಬಿ.ಎಸ್ಸಿ (ಬ್ಯಾಚಲರ್ ಆಫ್ ಸೈನ್ಸ್‌) ಪದವೀಧರರು. ಅವರ ಗ್ರಾಮದ ಬಗೆಗಿನ ಒಲವು, ಉತ್ಸಾಹ ತೋರುವ ರೀತಿ ಹಾಗು ಚಿಂತನಾ ಸ್ವಭಾವ, ಅವರಲ್ಲಿ ಅಕ್ಷರದ 1-3-6-9 ಗೋಡೆಯ ಬರವಣಿಗೆಯ ಕಾರ್ಯಕ್ರಮದ ಕಾರ್ಯತಂತ್ರವನ್ನು ತಿಳಿಯಲು ಕುತೂಹಲ ಕೆರಳಿಸಿತು.

ಒಮ್ಮೆ ಅವರು ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಏನೂ ಪ್ರಗತಿ ಆಗದಿರುವುದನ್ನು ಕಂಡು ನಿರಾಶರಾದರು. ಅಲ್ಲದೆ ಗೋಡೆಯ ಬರಹ ಆರಂಭವಾದಾಗಿನಿಂದಲೂ ಯಾವುದೇ ರೀತಿಯ ಉತ್ಸಾಹವಾಗಲಿ, ಬದಲಾವಣೆಯಾಗಲಿ ಆಗಿರಲಿಲ್ಲ. ಮಾಲಿಂಗರಾಯರು ಶಾಲೆಯಲ್ಲಿನ ವಿದ್ಯಾಭ್ಯಾಸದ ಬಗೆಗೆ ಈ ರೀತಿಯಾದ ನಿರ್ಲಕ್ಷತೆ ಯ ಕಾರಣ ತಿಳಿಯಲು ಮುಖ್ಯೋಪಾಧ್ಯಾಯರೊಂದಿಗೆ ತೀವ್ರವಾದ ಚರ್ಚೆಯಲ್ಲಿ ತೊಡಗಿದರು. ಅವರಿಗೆ ಮುಖ್ಯೋಪಾಧ್ಯಾಯರಿಂದ ಸಮಾಧಾನಕರ ಅಥವ ತೃಪ್ತಿಕರ ಉತ್ತರ ಸಿಗಲಿಲ್ಲ. ಮುಖ್ಯೋಪಾಧ್ಯಾಯರು ಮಾಲಿಂಗರಾಯರ ವಿಷಯವನ್ನು ಪರಿಗಣಿಸದೆ ವಿಚಾರಮಾಡದೆ, ಅವರನ್ನು ಅಲ್ಲಿಂದ ಹೊರನಡೆಯಲು ಹೇಳಿದರು.

ಆ ಕ್ಷಣ ಕಾರ್ಯಗತರಾದ ಮಾಲಿಂಗರಾಯರು, ಅಲ್ಲಿಯ ಕ್ಷೇತ್ರ ಶಿಕ್ಷಣ ಅಧಿಕಾರಿ (BEO) ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಯವರನ್ನು (BRP) ಸಂಪರ್ಕಿಸಿ ಶಾಲೆಯ ಶೋಚನೀಯ ಹಾಗು ಗಂಭೀರ ಸ್ಥಿತಿಯ ಬಗ್ಗೆ ತಿಳಿಸಿದರು. ಶಾಲೆಯಲ್ಲಿ ಶಿಕ್ಷಕರ ತೀವ್ರ ಗೈರುಹಾಜರಿಯ ಬಗ್ಗೆ, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಹಾಗು 1-3-6-9 ದಿಂದ ರೂಪಿಸಲ್ಪಟ್ಟ ಶಿಕ್ಷಣ ಕಾರ್ಯತಂತ್ರದ ಪ್ರಯೋಗವನ್ನು ಅನುಸರಿಸಲಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿಯವರ ಗಮನಕ್ಕೆ ತಂದರು.

ಕ್ಷೇತ್ರ ಶಿಕ್ಷಣಾಧಿಕಾರಿಯವರು (BEO) ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಯವರು (BRP) ಶಾಲೆಗೆ ಭೇಟಿ ನೀಡುವುದಾಗಿ ಒಪ್ಪಿಕೊಂಡರು. ಅದರಂತೆ ಶಾಲೆಗೆ ಭೇಟಿ ನೀಡಿ, ಮುಖ್ಯೋಪಾಧ್ಯಾಯರಿಗೆ ಬೋಧನಾ-ಕಲಿಕಾ (TLM's) ಸಾಮಗ್ರಿಗಳ ಬಳಕೆ ಹಾಗು ಅವುಗಳ ಮುತುವರ್ಜಿವಹಿಸಲು, ಎಚ್ಚರಿಸಿದರು.

ಮುಖ್ಯೋಪಾಧ್ಯಾಯರು 1-3-6-9 ಒಳಗೊಂಡ ಗೋಡೆ ಬರವಣಿಗೆಯ ಬಗೆಗೆ ತಿಳಿದುಕೊಂಡು ಅದರಂತೆ ಮಾಸಿಕ ಎಸ್ ಡಿ ಎಂಸಿ ಸಭೆಗಳು, ತ್ರೈಮಾಸಿಕ ಪೋಷಕರ ಸಭೆಗಳು, ಸರ್ಕಾರದ ಸುಮುದಾಯದತ್ತ ಶಾಲೆಯ ಕಾರ್ಯಕ್ರಮದಡಿ ಮಕ್ಕಳ ಕಲಿಕೆಯ ಮತ್ತು ಪ್ರಗತಿಯ ಬಗ್ಗೆ, ಅರೆ ವಾರ್ಷಿಕ ಪೋಷಕರ ವಿಮರ್ಶೆ ಮತ್ತು 9 ತಿಂಗಳವರೆಗಿನ ಮಕ್ಕಳ ನಿಯಮಿತ ಹಾಜರಾತಿ ದಾಖಲೆಗಳನ್ನು ವ್ಯವಸ್ಥಿತವಾಗಿ ಇಡುವುದಾಗಿಯೂ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸಿವುದಾಗಿಯೂ ಒಪ್ಪಿಕೊಂಡರು.

ಈಗ ಮಾಲಿಂಗರಾಯರು ಎಸ್ ಡಿ ಎಂಸಿ ಸದಸ್ಯರನ್ನು ಶಾಲೆಯ ವಿಷಯಗಳಲ್ಲಿ ಹೆಚ್ಚು ಪಾತ್ರವಹಿಸಲು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಐಯ್ಯಲ ಗ್ರಾಮದ ಮಕ್ಕಳ ಗುಣಮಟ್ಟದ ಕಲಿಕೆಯ ಬಗೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.




Akshara Foundation