x

Subscribe to our mailing list

x











More about yourself *



How do you plan to use these resources?






ENGLISH | KANNADA
ಇಂಗ್ಲೀಷ್ ಭಾಷೆಯು ಭಾರತದಲ್ಲಿ ಇಂದಿನ ಆಶೋತ್ತರ ಮತ್ತು ಅವಕಾಶಗಳ ಭಾಷೆಯಾಗಿದೆ. “ ಇಂಗ್ಲೀಷ್ ಗೆ ಬೇಡಿಕೆಯು ಕೆಳಮಟ್ಟದಿಂದ ಬರುತ್ತಿದೆ” ಎಂದು ಇತ್ತೀಚೆಗಿನ ಬ್ರಿಟಿಷ್ ಕೌನ್ಸಿಲ್ ವರದಿಯಾದ ಡೇವಿಡ್ ಗ್ರಾಡೋಲ್ ರವರ ‘ಇಂಗ್ಲೀಷ್ ನೆಕ್ಸ್ಟ್’ (2010). ತಿಳಿಸುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಮೊದಲೇ ಹೇಳುತ್ತದೆ ಇಂಗ್ಲೀಷ್ “ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬದುಕಿನಲ್ಲಿ ಪೂರ್ಣ ಪ್ರಮಾಣದ ಭಾಗವಹಿಸುವಿಕೆಗಾಗಿ ಜನರ ಆಶೋತ್ತರಗಳ ಒಂದು ಸಂಕೇತವಾಗಿದೆ.......” ಭಾರತದ ನಗರಗಳಲ್ಲಿ ಜನರು ಇಂಗ್ಲೀಷ್ ‘ಮಾತನಾಡುವುದು ಪ್ರಬಲ ಒತ್ತಾಸೆಗಳನ್ನು ಗ್ರಹಿಸುವುದು ಬಹಳ ಸುಲಭ. ಗ್ರಾಮೀಣ ಭಾರತದ ಸಂದರ್ಭವು ಇದಕ್ಕಿಂತ ಹೆಚ್ಚಿಗೇನು ಭಿನ್ನವಾಗಿರುವುದಿಲ್ಲ. ‘ಕೆಳಗಿನಿಂದ ಬಂದ ಒತ್ತಡ’ಕ್ಕೆ ಮಣಿದು, ಕರ್ನಾಟಕ ಸರಕಾರವು ಪ್ರತಿಕೂಲ ಪರಿಸ್ಥಿತಿಯಲ್ಲಿ 2007-08 ರಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಭಾಷಾ ವಿಷಯವನ್ನು ಪರಿಚಯಿಸಿತು. ಇಂಗ್ಲೀಷ್ ಭಾಷೆಯು ಕಲಿಕಾರ್ಥಿಯ ಜೀವನದೊಂದಿಗೆ ಯಾವುದೇ ನಿಜವಾದ ಸಂಪರ್ಕದ ಕೊರತೆಯಿರುವ ಮತ್ತು ಅಲ್ಲಿ ಇಂಗ್ಲೀಷ್ ಎಂಬುದು ಕೇವಲ ಒಂದು ‘ವಿಷಯ’ವಾಗಿ ಅದನ್ನು ಹೆಚ್ಚಾಗಿ ಕಂಠಪಾಠದ ಮೂಲಕ ಬೋಧಿಸಲಾಗುತ್ತಿದ್ದ ವ್ಯವಸ್ಥೆಯಿಂದಲೇ ಸ್ವತಃ ಸರಕಾರಿ ಶಿಕ್ಷಕರೇ ಬಂದಿರುವರು.
The Akshara Idea
ಅಕ್ಷರ ಫೌಂಡೇಶನ್ ನ ಇಂಗ್ಲೀಷ್ ಕಾರ್ಯಕ್ರಮವಾದ ಸ್ವಲ್ಪ ಇಂಗ್ಲೀಷ್ ತುಂಬಾ ಫನ್ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷೆಯ ಸಾಮರ್ಥ್ಯಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಶಿಕ್ಷಕ ತರಬೇತಿ ಮತ್ತು ಸರಳ ಹಾಗೂ ಆಕರ್ಷಣೀಯ ಬೋಧನಾ –ಕಲಿಕಾ ಸಾಮಗ್ರಿಗಳು ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ.

ಸಾಮರ್ಥ್ಯಾಭಿವೃದ್ಧಿ ಅವಧಿಗಳನ್ನು ನಡೆಸುವುದು ಮತ್ತು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕ/ಶಿಕ್ಷಕಿಯು ಗ್ರಹಿಸಿ ಅರ್ಥಮಾಡಿಕೊಂಡು ಸುಲಭವಾಗಿ ಅನುಷ್ಠಾನ ಮಾಡಲು ಸಾಧ್ಯವಾಗುವ ಬೋಧನಾ –ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸುವುದರ ಮೂಲಕ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಇಂಗ್ಲೀಷ್ ಬೋಧನಾ ಕೌಶಲ್ಯಗಳನ್ನು ಹೆಚ್ಚಿಸಲು ಅಕ್ಷರವು 2009 ರಿಂದ ಅವರೊಂದಿಗೆ ಕೆಲಸ ಮಾಡುತ್ತಿದೆ. ಶಿಕ್ಷಕ- ಸಶಕ್ತೀಕರಣಗೊಳಿಸುವುದು ಮತ್ತು ಕಲಿಕಾರ್ಥಿ ಸ್ನೇಹಿ ಕಾರ್ಯತಂತ್ರಗಳು ಪಠ್ಯವಸ್ತುವನ್ನು ಅಭಿವೃದ್ಧಿ ಪಡಿಸಲು ಇರುವ ಪ್ರಮುಖ ಅವಳಿ ಮಾರ್ಗದರ್ಶಿ ತತ್ವಗಳಾಗಿವೆ. ಸಾಂಸ್ಕೃತಿಕವಾಗಿ ಪರಕೀಯ ಮಾತ್ರವಲ್ಲದೆ ಸಂರಚನೆಯಲ್ಲಿ ಅಸ್ಥಿರ ಮತ್ತು ಅನಿರೀಕ್ಷಿತವಾಗಿರುವ ಆದರೆ ಎಲ್ಲರೂ ಒಪ್ಪುವಂತೆ ಜೀವನದಲ್ಲಿ ಹೆಚ್ಚಿನ ಅವಕಾಶಗಳಿಗೆ ರಹದಾರಿಯಾಗಿರುವ ಭಾಷೆಯನ್ನು ಬೋಧನಾ –ಕಲಿಕಾ ಸಾಮಗ್ರಿಗಳನ್ನು ಬಳಸಿ ಬೋಧಿಸಲು ಸುಲಭ ಮತ್ತು ಅವುಗಳು ಸರಳವಾಗಿವೆಯೆಂದು ಶಿಕ್ಷಕರು ಕಂಡುಕೊಳ್ಳುವರು.
ಕಾರ್ಯಕ್ರಮವು ಮಕ್ಕಳಿಗೆ ಇಂಗ್ಲೀಷ್ ಮಾತನಾಡುವುದರ ಅನುಭವಕ್ಕೆ ಒಡ್ಡುವುದನ್ನು ಹೆಚ್ಚಿಸುವುದರ ಮೇಲೆ ಕೇಂದ್ರಿತವಾಗಿದ್ದು, ಅದೇ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶಿಕೆ ಹಂತದ ಓದು ಮತ್ತು ಬರವಣಿಗೆ ಕೌಶಲ್ಯಗಳಿಗೆ ಪರಿಚಯಿಸುತ್ತದೆ. ಕಾರ್ಯಕ್ರಮವನ್ನು ಶಿಕ್ಷಕರು ಕಾರ್ಯಗತಗೊಳಿಸವುದರಿಂದ, ನಾವೀನ್ಯತೆಯಿಂದ ಕೂಡಿದ ಒಂದು ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು, ಶಿಕ್ಷಕರ ಆತ್ಮ ವಿಶ್ವಾಸ ನಿರ್ಮಿಸಲು ಮತ್ತು ಸಾಮರ್ಥ್ಯವನ್ನು ವರ್ಧಿಸಲು ರೂಪಿಸಲಾಗಿದೆ. ಬೆಂಬಲದಾಯಕವಾಗಿರುವ ಬೋಧನಾ ಕಲಿಕಾ ಸಾಮಗ್ರಿಯು ಶಿಕ್ಷಕ /ಶಿಕ್ಷಕಿ ಸ್ನೇಹಿಯಾಗಿದ್ದು, ಒಂದು ಸಾಂದರ್ಭಿಕ ಚೌಕಟ್ಟಿನೊಳಗೆ ಅದನ್ನು ತರಲಾಗಿದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇಂಗ್ಲೀಷ್ ನಲ್ಲಿ ಮುಕ್ತ ಸಂಭಾಷಣೆಗಳನ್ನು ಪ್ರೋತ್ಸಾಹಿಸಲು ವರ್ಣರಂಜಿತ ಮತ್ತು ಆಕರ್ಷಕ ಚಾರ್ಟ್ ಗಳನ್ನು ಬಳಸಲಾಗುತ್ತದೆ. ಪ್ರಶ್ನೆಗಳು ಮತ್ತು ಅಭ್ಯಾಸಗಳ ಸಂಯೋಜನೆಯ ಮೂಲಕ ಭಾಷಾ ಉತ್ಪತ್ತಿಯ ಅವಕಾಶಗಳು ಹೆಚ್ಚಾಗುತ್ತವೆ. ಯಾವ ಪ್ರಶ್ನೆಗಳನ್ನು ಕೇಳಬೇಕು ಮತ್ತು ಅವುಗಳನ್ನು ಹೇಗೆ ರೂಪಿಸುವುದೆಂದು ತಿಳಿದುಕೊಳ್ಳಲು ಶಿಕ್ಷಕರ ಕೈಪಿಡಿಯು ಶಿಕ್ಷಕ /ಶಿಕ್ಷಕಿರರಿಗೆ ಸಹಾಯ ಮಾಡುತ್ತದೆ. ಕಾರ್ಯಕ್ರಮವು ಭಾಷೆಯ ಪ್ರಾಥಮಿಕ ಗ್ರಹಿಕೆಗಾಗಿ ಸರಳ ಹೆಜ್ಜೆಗಳಿಂದ ಪ್ರಾರಂಭವಾಗುತ್ತದೆ-ಈ ಮೂಲಕ ಶಬ್ಧಭಂಡಾರ ನಿರ್ಮಾಣವಾಗುವುದು ಮತ್ತು ಸರಿಯಾದ ವಾಕ್ಯ ವಿನ್ಯಾಸವು ಸಾಧ್ಯವಾಗುವುದು. ವಿದ್ಯಾರ್ಥಿಯು ಆಸಕ್ತಿದಾಯಕ ಪ್ರಾಸಗಳ ‘ಸೂತ್ರಾತ್ಮಕ’ ಪುನರುಚ್ಚರಣೆಯೊಂದಿಗೆ ಪ್ರಾರಂಭಿಸುತ್ತಾಳೆ/ನೆ ಬಳಿಕ ಸಣ್ಣ ವಾಕ್ಯಗಳನ್ನು ಮಾತನಾಡುವ ಆತ್ಮ ವಿಶ್ವಾಸ ನಿರ್ಮಾಣದತ್ತ ಅದು ಸಾಗುತ್ತದೆ. ತರಗತಿ ಕೋಣೆಯು ಮುದ್ರಣ ಸಾಮಗ್ರಿಗಳಾದಂತಹ ಚಾರ್ಟ್, ಶಾಬ್ದಿಕ ಹಾಳೆಗಳು, ಅಭ್ಯಾಸ ಪುಸ್ತಕಗಳು ಮತ್ತು ಓದಿನ ಹಾಳೆಗಳೊಂದಿಗೆ ಸುಸಜ್ಜಿತವಾಗಿರುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರೂ ಉತ್ಸಾಹದಿಂದ ಈ ಪಯಣವನ್ನು ಕೈಗೊಳ್ಳುತ್ತಾರೆ. ಕ್ಯಾಸ್ಕೆಡ್ ಮಾದರಿಯನ್ನು ಬಳಸಿ ತರಬೇತಿಯನ್ನು ನೀಡಲಾಗುತ್ತದೆ –ಇದು ಇಂತಹ ಆರೋಹಣಗೊಂಡಂತಹ ಕಾರ್ಯಕ್ರಮಕ್ಕೆ ಅತ್ಯಗತ್ಯವಾಗಿರುವ ತಲುಪುವಿಕೆಯನ್ನು ನೀಡುತ್ತದೆ ಮತ್ತು ಪ್ರತಿ ಹಂತದಲ್ಲೂ ಪ್ರಾಥಮಿಕ ಸಾಮರ್ಥ್ಯಗಳನ್ನು ನಿರ್ಮಿಸುತ್ತದೆ.





Akshara Foundation