ಆಧುನಿಕ ಸಮಾಜಗಳಲ್ಲಿ ಸಾಕ್ಷರತೆ ಮತ್ತು ನಿರ್ದಿಷ್ಟವಾಗಿ ಓದುವ ಸಾಕ್ಷರತೆಯು ಜೀವನದ ಯಶಸ್ವಿಗೆ ಪೂರ್ವಾಪೇಕ್ಷೆಯಾಗಿದೆ. ಸಂತೋಷಕ್ಕಾಗಿ ಹಾಗೂ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೂ ಓದಿನ ಮಹತ್ವವನ್ನು ಅಧ್ಯಯನಗಳು ಒತ್ತಿ ಹೇಳುತ್ತವೆ. ಈ ಅಧ್ಯಯನಗಳು ಓದಿನ ಉತ್ತೇಜಿಸುವಿಕೆಯು ಮಕ್ಕಳ/ಯುವ ಜನತೆ ಮತ್ತು ವಯಸ್ಕರ ಮೇಲೆ ಮತ್ತು ಅವರ ಭವಿಷ್ಯದ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರುವುದಾಗಿ ತೋರಿಸುತ್ತವೆ. ಶಾಲೆಯ ಯಾವುದೇ ವಿಷಯಗಳಲ್ಲಿ ಮಕ್ಕಳು ಸುಲಲಿತವಾಗಬೇಕಾದರೆ ಓದು ಅತ್ಯವಶ್ಯಕವಾಗಿದೆ.
ದೀರ್ಘ ಕಾಲದಿಂದಲೂ, ಶಾಲಾ ಗ್ರಂಥಾಲಯಗಳು ನೀತಿ ಶಿಫರಾಸಿನ ವಿಷಯವಾಗಿತ್ತು, ಆದರೆ ಸರಕಾರಿ ಪ್ರಾಥಮಿಕ ಶಾಲೆಗೊಮ್ಮೆ ಭೇಟಿ ನೀಡಿದರೆ ತಿಳಿಯುತ್ತದೆ –ಇದು ತಳಮಟ್ಟದಲ್ಲಿ ವಾಸ್ತವಕ್ಕೆ ಇಳಿದಿರುವುದಿಲ್ಲವೆಂದು ತಿಳಿಯುತ್ತದೆ. ಕರ್ನಾಟಕದ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳಿವೆ ಆದರೆ ವಯೋಮಾನ ಸೂಕ್ತ ಮತ್ತು ಆಕರ್ಷಣೀಯ ಪುಸ್ತಕಗಳ ಕೊರೆತೆಯಿದೆ ಮತ್ತು ಕಾರ್ಯ ಪ್ರಕ್ರಿಯೆಯ ಕೊರತೆಗಳು ಕೂಡಾ ಕಂಡು ಬರುತ್ತವೆ. ಶಿಕ್ಷಕರು ತರಬೇತಿ ಹೊಂದಿದ ಗ್ರಂಥಪಾಲಕರಲ್ಲ.

2007 ರಲ್ಲಿ ಅಕ್ಷರ ಫೌಂಡೇಶನ್ ತನ್ನ ಗ್ರಂಥಾಲಯ ಕಾರ್ಯಕ್ರಮವನ್ನು ಒಂದು ಶಾಲಾ ಗ್ರಂಥಾಲಯ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಪ್ರಾರಂಭಿಸಿತು. ಒಂದು ಗ್ರಂಥಾಲಯ ಅಥವಾ ಸ್ವತಂತ್ರ ಓದಿನ ಒಂದು ವಿಶೇಷ ಸ್ಥಳವು ಧನಾತ್ಮಕ ಓದಿನ ಹವ್ಯಾಸಗಳನ್ನು ಮತ್ತು ನಿಲುವುಗಳನ್ನು ಪೋಷಿಸುವುದು ಮಾತ್ರವಲ್ಲದೆ ಅದು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪುಸ್ತಕ/ಪಠ್ಯ ಪುಸ್ತಕಗಳು ನಿಲುಕುವಂತೆ ಮಾಡುತ್ತದೆಯೆಂಬುದು ಅಕ್ಷರದ ನಂಬಿಕೆಯಾಗಿದೆ. ಈ ನಿಟ್ಟಿನಲ್ಲಿ, ಮಕ್ಕಳಲ್ಲಿ ಓದಿನ ಹವ್ಯಾಸಗಳನ್ನು ಪ್ರೋತ್ಸಾಹಿಸಲು ಮತ್ತು ಸುಸ್ಥಿರಗೊಳಿಸಲು ನಾವು ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಗ್ರಂಥಾಲಯಗಳ ಜಾಲಬಂಧವೊಂದನ್ನು ಸ್ಥಾಪಿಸಿದೆವು. ಇದು ಮಕ್ಕಳಲ್ಲಿ ಕಲಿಕಾ ಫಲಿತಗಳನ್ನು ಸುಧಾರಿಸಲು ಇರುವ ಕಾರ್ಯತಂತ್ರದ ಒಂದು ಪ್ರಮುಖ ಭಾಗ ಕೂಡಾ ಆಗಿರುವುದು.
2014 ರಲ್ಲಿ ಪ್ರಾರಂಭಗೊಂಡ ತರಗತಿ ಕೋಣೆ ಗ್ರಂಥಾಲಯ ಅಕ್ಷರದ ಒಂದು ಅವಿಷ್ಕಾರವಾಗಿದ್ದು ಅದನ್ನು ಸರಕಾರಿ ಶಾಲೆಗಳ ಕೊರತೆಯನ್ನು ನೀಗಿಸಲು ಮತ್ತು ತರಗತಿ ಕೋಣೆಯಲ್ಲಿ ಒಂದು ಗ್ರಂಥಾಲಯವನ್ನು ಒದಗಿಸುವ ಮೂಲಕ ಮಕ್ಕಳಿಗೆ ಅತ್ಯವಶ್ಯಕವಾದ ಓದಿನ ತಳಹದಿಯ ಸಾಧನವನ್ನು ನಿರ್ಮಿಸಲು ಕೈಗೆತ್ತಿಕೊಳ್ಳಲಾಗಿದೆ.

ಪ್ರತೀ ತರಗತಿಯ ಕೊಠಡಿಯಲ್ಲಿ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯದ ಚೀಲವೊಂದನ್ನು ಒದಗಿಸಲಾಗಿದೆ. ಈ ಚೀಲವು ಸಣ್ಣ ಸಣ್ಣ ಕಪಾಟನ್ನು ಹೊಂದಿದೆ. ಇದು ತೂಗು ಹಾಕಬಹುದಾದ ಅಥವಾ ಮಡಚಿ ಇಡಬಹುದಾದ ರೀತಿಯಲ್ಲಿ ಇರುತ್ತದೆ. ಈ ಕಪಾಟು ಸುಮಾರು 120 ಪುಸ್ತಕಗಳನ್ನು ಇಡಬಹುದಾದ ಸ್ಥಳಾವಕಾಶವನ್ನು ಹೊಂದಿದೆ. ವಯೋಮಾನ ಸೂಕ್ತ, ಬಹು ಭಾರತೀಯ ಭಾಷೆಗಳಲ್ಲಿ ಶ್ರೇಣಿಕೃತ ಪುಸ್ತಕಗಳು –ಇಂಗ್ಲೀಷ್ ಮತ್ತು ಹಿಸ್ಟೋಗ್ರಾಮ್ ಚಾರ್ಟ್ ಗಳಿರುತ್ತವೆ.
ಶಿಕ್ಷಕರು ಕಿಟ್ ಮತ್ತು ಹಿಸ್ಟೋಗ್ರಾಮ್ ನ ಬಳಕೆಯ ಹಾಗೂ ಸರಳ ಮತ್ತು ಪರಿಣಾಮಕಾರಿ ಪ್ರಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿಷಯಗಳಲ್ಲಿ ತರಬೇತಿ ಪಡೆದಿರುತ್ತಾರೆ. ಹಿಸ್ಟ್ರೋಗ್ರಾಂ ಚಾರ್ಟ್ ಗ್ರೋ ಬೈ ಶ್ರೇಣಿಕರಣವನ್ನು ಹೊಂದಿದೆ. ಇದು ಮಕ್ಕಳ ಓದಿನ ಹವ್ಯಾಸವು ಎಷ್ಟರ ಮಟ್ಟಿಗಿದೆ ಮತ್ತು ಯಾವ ಹಂತದಲ್ಲಿದೆ ಎಂಬುದನ್ನು ಸೂಚಿಸುವುದಾಗಿದೆ. ಪ್ರತಿ ದಿನದ ಆಧಾರದಲ್ಲಿ ಪ್ರತಿ ಮಗುವು ಪಡೆದುಕೊಂಡ ಪುಸ್ತಕಗಳ ಸಂಖ್ಯೆಯನ್ನು ಹಿಸ್ಟೋಗ್ರಾಮ್ ಚಾರ್ಟ್ ದಾಖಲಿಸಲಾಗುವುದು ಮತ್ತು ಪ್ರತಿ ಬಾರಿ ಒಬ್ಬ ಮಗು ಪುಸ್ತಕವನ್ನು ಪಡೆಯುವಾಗ, ಶಿಕ್ಷಕ/ಶಿಕ್ಷಕಿಯು ಅದನ್ನು ಪುಸ್ತಕಗಳನ್ನು ಕೊಂಡೊಯ್ಯುವ ಮಟ್ಟದ ಎದುರು ಗುರುತು ಮಾಡುವರು. ಪ್ರಭಾವವನ್ನು ಅಳೆಯಲು ಮಕ್ಕಳ ಪ್ರಾಥಮಿಕ ಮತ್ತು ಅಂತಿಮ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ತರಗತಿ ಕೋಣೆಯಲ್ಲಿ ಗ್ರಂಥಾಲಯದ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಅಕ್ಷರವು ಸರಕಾರದೊಂದಿಗೆ ಸಹಯೋಜನೆಯಲ್ಲಿ ತೊಡಗಿಸಿಕೊಂಡಿದೆ. ತರಗತಿ ಕೋಣೆಯಲ್ಲಿ ಗ್ರಂಥಾಲಯವು ತರಗತಿಯ ಆಸ್ತಿ ಆಗಿರುವುದರಿಂದ ಪಠ್ಯಕ್ರಮವನ್ನು ಬೆಂಬಲಿಸಿ ಕಲಿಕೆಗೆ ಒಂದು ಸಹಾಯಕ ಸಾಧನವಾಗಿ ಮತ್ತು ಉತ್ತೇಜಕವಾಗಿರುತ್ತದೆ.

ಹಲವಾರು ಸ್ಥಳೀಯ ಸರಕಾರೇತರ ಸಂಸ್ಥೆಗಳು ಮತ್ತು ಇತರ ಸಂಘಟನೆಗಳು ಗ್ರಂಥಾಲಯ ಕಾರ್ಯಕ್ರಮದಲ್ಲಿ ತರಬೇತಿಗಾಗಿ ಮತ್ತು ಗ್ರಂಥಪಾಲಕರಿಗೆ ಮಾರ್ಗದರ್ಶನಕ್ಕಾಗಿ ಅಕ್ಷರವನ್ನು ಸಂಪರ್ಕಿಸಿರುತ್ತಾರೆ. ಪ್ರಸ್ತುತ ಅಕ್ಷರವು ಅವರಿಗೆ ತಮ್ಮದೇ ಆದ ಸ್ವಂತ ಗ್ರಂಥಾಲಯವನ್ನು ಸ್ಥಾಪಿಸಲು ಅಗತ್ಯವಿರುವ ಜ್ಞಾನ ಮತ್ತು ಪರಿಣತಿಯನ್ನು ಒದಗಿಸುವ ಮೂಲಕ ಬೆಂಬಲಿಸುತ್ತಿದೆ.
ರೋಟರಿ ಇಂಡಿಯದ ಸಾಕ್ಷರತಾ ಮಿಷನ್ ನ ಭಾಗವಾಗಿ 3100 ಕ್ಕಿಂತಲೂ ಹೆಚ್ಚಿನ ರೋಟರಿ ಕ್ಲಬ್ ಗಳು ದೇಶಾದ್ಯಂತ 1,500 ತರಗತಿಕೋಣೆ ಗ್ರಂಥಾಲಯಗಳನ್ನು ಅಕ್ಷರದ ತರಗತಿಕೋಣೆ ಗ್ರಂಥಾಲಯ ಚೌಕಟ್ಟನ್ನು ಆಧರಿಸಿ ಸ್ಥಾಪಿಸುತ್ತಿದೆ.