ಅಕ್ಷರದ ಸಲಹಾ ಮಂಡಳಿಯು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಒಳನೋಟ, ಸಲಹೆ ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಆಡಳಿತ ಮಂಡಳಿಗೆ ಸಹಾಯ ಮಾಡುವುದರೊಂದಿಗೆ ಪಠ್ಯಕ್ರಮ ಅಭಿವೃದ್ಧಿ ಮತ್ತು ನಿಧಿ ಸಂಗ್ರಹಣೆ ಪ್ರಯತ್ನಗಳಲ್ಲಿ ಹಾಗೂ ವಿವಿಧ ಭಾಗೀದಾರ ಸಮುದಾಯಗಳೊಂದಿಗೆ ಸಂಪರ್ಕ ಕೊಂಡಿಗಳನ್ನು ಒದಗಿಸುತ್ತದೆ.

ಅಶೋಕ್ ಕಾಮತ್
ಅಶೋಕ್ ಕಾಮತ್ ರವರು 2003 ರಿಂದ ಅಕ್ಷರ ಫೌಂಡೇಶನ್ ನ ಮೆನೇಜಿಂಗ್ ಟ್ರಸ್ಟೀ ಯಾಗಿದ್ದರು, ಬಳಿಕ ಜುಲೈ 1, 2008 ರಿಂದ ಅಧ್ಯಕ್ಷರಾಗಿರುವರು. ಅವರು 2003 ರಿಂದಲೇ ಅಕ್ಷರ ಫೌಂಡೇಶನ್ ನ ಕಾರ್ಯತಂತ್ರಾತ್ಮಕ ಯೋಜನೆ, ವಿಶ್ಲೇಷಣೆ ಮತ್ತು ಕಾರ್ಯಕ್ರಮಗಳ ವಿಸ್ತರಣೆಯಲ್ಲಿ ಸಕ್ರಿಯವಾಗಿ ತೂಡಗಿಸಿಕೊಂಡಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ.) ಮುಂಬಯಿಯ ಹಳೆ ವಿದ್ಯಾರ್ಥಿಯಾಗಿರುವ ಅವರು ಅನಾಲೋಗ್ ಡಿವೈಸಸ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕಾರ್ಫೊರೇಟ್ ವಲಯದ ಒಂದು ಯಶಸ್ವೀ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಆಯ್ಕೆ ಮಾಡಿದರು. ಅವರು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ನಡೆಸಿದ ವಿವಿಧ ಉಪಕ್ರಮಗಳಿಗೆ ಮತ್ತು ಕೊಡುಗೆಗಳಿಗೆ ಅವರು ಕಲಿತ ವಿದ್ಯಾ ಸಂಸ್ಥೆಯಾದ ಐ.ಐ.ಟಿ. ಮುಂಬಯಿ ಯು 2013 ರಲ್ಲಿ ಗಣ್ಯ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಶೋಕ್ ರವರು ಪ್ರತಿಯೊಂದು ಮಗುವಿನ ಕೈಯಲ್ಲೊಂದು ಪುಸ್ತಕವಿರಬೇಕೆಂಬ ಗುರಿಯಿರುವ ಪ್ರಥಮ್ ಬುಕ್ಸ್ ನ ಸ್ಥಾಪಕ ಟ್ರಸ್ಟೀ ಕೂಡಾ ಆಗಿರುವರು.


ಶ್ರೀಮತಿ ಸುಜೇನ್ ಸಿಂಗ್
ಟ್ರಸ್ಟೀ
ಸುಜೇನ್ ಸಿಂಗ್ ರವರು ಅಕ್ಷರ ಫೌಂಡೇಷನ್ ನೊಂದಿಗೆ 2003 ರಿಂದ ತಮ್ಮನ್ನು ತೊಡಗಿಸಿಕೊಂಡಿರುವರು. ಒಬ್ಬ ಮೆನೇಜ್ ಮೆಂಟ್ ಪದವೀದರೆಯಾಗಿರುವ ಅವರಿಗೆ ಜಾಹಿರಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ 12 ವರ್ಷಗಳ ಅನುಭವವಿದೆ. ಅಕ್ಷರ ಫೌಂಡೇಷನ್ ನ ಕಾರ್ಯತಂತ್ರಾತ್ಮಕ ಯೋಜನೆ ಮತ್ತು ಅಕ್ಷರದ ಮಾರುಕಟ್ಟೆ ಸಂವಹನ ಅಗತ್ಯಗಳನ್ನು ನಿರ್ವಹಿಸುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವರು ಅವರು ಪ್ರಥಮ್ ಬುಕ್ಸ್ ನ ಅಧ್ಯಕ್ಷೆ ಕೂಡಾ ಆಗಿದ್ದು ಯುನೈಟೆಡ್ ವೇ, ಬೆಂಗಳೂರಿನ ಆಡಳಿತ ಮಂಡಳಿ ಸದಸ್ಯರಾಗಿರುವರು.


ಶ್ರೀಮತಿ ತಾರಾ ಕಿಣಿ
ಶ್ರೀಮತಿ ತಾರಾ ಕಿಣಿ ಶಿಕ್ಷಣ ಮತ್ತು ಸಂಗೀತದಲ್ಲಿ ಸ್ವಂತಂತ್ರ ಸಲಹೆಗಾರ್ತಿಯಾಗಿರುವರು ಹಾಗು ಬೆಂಗಳೂರು, ಆಂಧ್ರ ಪ್ರದೇಶ, ದೆಹಲಿ ,ಮತ್ತು ಅಹಮದಾಬಾದಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಠ್ಯಕ್ರಮ ಅಭಿವೃದ್ಧಿ, ಶಿಕ್ಷಕರು ಮತ್ತು ತರಬೇತಿದಾರರ ತರಬೇತಿಯನ್ನು ನಡೆಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವರು. ತಾರಾರವರು ಮಲ್ಯ ಅಧಿತಿ ಅಂತರರಾಷ್ಟ್ರೀಯ ಶಾಲೆ (Mallya Aditi International School) ಯಲ್ಲಿ 20 ವರ್ಷಗಳ ಕಾಲ ಶಿಕ್ಷಕಿಯಾಗಿದ್ದರು. ಸೃಷ್ಟಿ ಸ್ಕೂಲ್ ಓಫ್ ಆರ್ಟ್, ಡಿಸೈನ್ ಮತ್ತು ಟೆಕ್ನೋಲೊಜಿ (Srishti School of Art, Design and Technology) ಯಲ್ಲಿ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸುವುದರಲ್ಲಿ ಪಾಲುದಾರಿಕೆ ಮಾಡಿದ್ದರು. ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಿನ ತರಬೇತಿ ಪಡೆದಿರುವರು, ರಂಗಭೂಮಿಗೆ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಂಗೀತ ಪ್ರದರ್ಶನಗಳನ್ನು ನಿರ್ದೇಶಿಸಿದ್ದಾರೆ. ಅವರು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಂಗೀತ ಮತ್ತು ದಕ್ಷಿಣ ಏಷಿಯದ ಧರ್ಮಗಳ ಒಂದು ಕೋರ್ಸ್ ನ ಬೋಧನೆ ಮಾಡಿರುವರು ಹಾಗೂ ಶೆಫಿಲ್ಡ್ ಮತ್ತು ಹೆಲ್ಸಿಂಕಿಯಲ್ಲಿ ಸಂಗೀತ ಮತ್ತು ಶಿಕ್ಷಣದ ಮೇಲೆ ಸಂಶೋಧನಾ ಲೇಖನಗಳನ್ನು ಮಂಡಿಸಿರುವರು. ಆಕೆಯು ಸಂಗೀತ ಒಕ್ಕೂಟವಾದ ಸುನಾದ್ ನ ಸ್ಥಾಪಕ ನಿರ್ದೇಶಕರಾಗಿರುವರು. ಇದು ಶಾಸ್ತ್ರೀಯ ಸಂಗೀತದ ನಿಗೂಢತೆಯನ್ನು ಭೇದಿಸುವಂತಹ ಹಲವಾರು ಪ್ರದರ್ಶನಗಳನ್ನು ಮಂಡಿಸಿದೆ.


ಶ್ರೀ ವಿ.ರವಿಚಂದರ್
ವಿ.ರವಿಚಂದರ್ ಪ್ರಸ್ತುತ ಭಾರತದಲ್ಲಿ ಮುಂಚೂಣಿಯಲ್ಲಿರುವ ಒಂದು ಸಂಶೋಧನೆ ಮತ್ತು ಸಲಹಾ ಸಂಸ್ಥೆಯಾಗಿರುವ ಫೀಡ್ ಬ್ಯಾಕ್ ಕನ್ಸಲ್ಟಟಿಂಗ್ (Feedback Consulting)ನ ಪ್ರಸ್ತುತ ಅಧ್ಯಕ್ಷರಾಗಿರುವರು. ಭಾರತದಲ್ಲಿ ವ್ಯಾಪಾರ ಮಾಡುವುದರ ಮೇಲೆ ಮತ್ತು ನಗರೀಕರಣದ ಸಮಸ್ಯೆಗಳ ಮೇಲೆ ಒಬ್ಬ ವಿಮರ್ಶಕರಾಗಿದ್ದಾರೆ. ಅವರು ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ (Bangalore Agenda Task Force -BATF)ನ ಒಬ್ಬ ಪ್ರಮುಖ ಸದಸ್ಯರಾಗಿದ್ದರು. ಪ್ರಸ್ತುತ ವಿ.ರವಿಚಂದರ್ ರವರು ಕಾರ್ಪೋರೇಟ್ ಗಳು ಮತ್ತು ನಾಗರಿಕ ಸಮಾಜವು ನಗರ ಸಂಪರ್ಕ ವೇದಿಕೆಯಡಿಲ್ಲಿ (City Connect platform) ಅವರ ನಗರದಲ್ಲಿ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಒಂದು ಗೂಡುವ ಪರಿಕಲ್ಪನೆಯನ್ನು ಪ್ರಚಾರಪಡಿಸುವುದರಲ್ಲಿ ಸಕ್ರಿಯರಾಗಿದ್ದಾರೆ. ರವಿಚಂದರ್ ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ, (Birla Institute of Technology and Science) ಪಿಲಾನಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಹೊಂದಿರುವರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಓಫ್ ಮೆನೇಜ್ ಮೆಂಟ್ (Indian Institute of Management) ಅಹಮದಾಬಾದ್ ನಿಂದ ಎಂ.ಬಿ.ಎ. ಪದವಿ ಹೊಂದಿರುವರು ಹಾಗೂ ಸುಮಾರು 32 ವರ್ಷಗಳಿಗಿಂತಲೂ ಹೆಚ್ಚಿನ ಉದ್ಯಮದ ಅನುಭವವನ್ನು ಹೊಂದಿರುವರು.


ಡಾ. ಉಷಾ ಅಬ್ರೋಲ್
ಡಾ. ಉಷಾ ಅಬ್ರೋಲ್ ರವರು ಶಿಶು ಅಭಿವೃದ್ಧಿಯಲ್ಲಿ ವಿಶೇಷ ತಜ್ಞೆಯಾಗಿರುವರು. ಅವರು ಇತ್ತೀಚೆಗೆ ಎನ್.ಐ.ಪಿ.ಸಿ.ಸಿ.ಡಿ. (NIPCCD) ದಕ್ಷಿಣ ಪ್ರಾಂತೀಯ ಕೆಂದ್ರದಿಂದ ಪ್ರಾಂತೀಯ ನಿರ್ದೇಶಕರಾಗಿ ನಿವೃತ್ತಿ ಹೊಂದಿರುವರು ಹಾಗೂ ಪ್ರಸ್ತುತ ಅವರು ಯುನಿಸೆಫ್, ಸರ್ ರತನ್ ಟಾಟಾ ಟ್ರಸ್ಟ್, ವಿ.ಎಚ್.ಡಿ. ಗೃಹ ವಿಜ್ಞಾನ ಮಹಾ ವಿದ್ಯಾಲಯ ಹಾಗೂ ಬಿ.ಆರ್. ಅಂಬೆಡ್ಕರ್ ವಿಶ್ವವಿದ್ಯಾಲಯ ದೆಹಲಿಯ ಆರಂಭಿಕ ಬಾಲ್ಯಕಾಲ ಶಿಕ್ಷಣ ಮತ್ತು ಅಭಿವೃದ್ಧಿ ಕೇಂದ್ರ (Centre for Early Childhood Education and Development -CECED) ಗಳಂತಹ ಸಂಸ್ಥೆಗಳಿಗೆ ಸಲಹೆಗಾರರಾಗಿ ತಮ್ಮನ್ನು ತೊಡಗಿಸಿಕೊಂಡಿರುವರು.


ಗೌತಮ್ ಪೈ
ಗೌತಮ್ ಪೈ ಅವರು ಮಣಿಪಾಲ್ ಟೆಕ್ನಾಲಜೀಸ್ ಲೀಮಿಟೆಡ್ ಮತ್ತು ಮಣಿಪಾಲ್ ಮೀಡಿಯಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರು ಮಣಿಪಾಲ್ ಇನ್ಸೂಟ್ಯೂಟ್ ಆಪ್ ಟೆಕ್ನಾಲಜಿನಲ್ಲಿ ಮುದ್ರಣಾ ತಂತ್ರಜ್ಞಾನ ಇಂಜಿನಿಯರಿಂಗ್ ಪದವಿ ಪಡೆದ ನಂತರ 1997 ರಲ್ಲಿ ಕುಟುಂಬದ ಸಾಂಪ್ರಾದಾಯಿಕ ಕಸುಬಾದ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕಂಡರು. ಅವರು ಸಂಸ್ಥೆಯ ಮುಖ್ಯ ಮೌಲ್ಯಗಳಾದ ಪ್ರಾಮಾಣಿಕತೆ,ವಿಶ್ವಾಸಾರ್ಹತೆ, ನಾವಿನ್ಯತೆ, ಪ್ರವರ್ತಕ ಗುಣ, ಪ್ರತಿಯೊಬ್ಬರಿಗೂ ಗೌರವ ಇತ್ಯಾದಿ ತತ್ವಗಳಲ್ಲಿ ನಂಬಿಕೆಯನ್ನಿರಿಸಿ, ಸುಸ್ಥಿರ ಬೆಳವಣಿಗೆಗೆ ಮತ್ತು ಲಾಭದಾಯಕ ಸಂಸ್ಥೆ ನಿರ್ಮಿಸುವಲ್ಲಿ ಶ್ರಮಿಸುತ್ತಿದ್ದಾರೆ. ಗ್ರಾಹಕರ ವ್ಯಾಪರದ ಅಗತ್ಯ ಮತ್ತು ಅವಶ್ಯಕತೆಗಳನ್ನು ಅರಿತುಕೊಂಡು ಅದಕ್ಕನುಗುಣವಾಗಿ ನ್ಯಾಯವನ್ನು ಒದಗಿಸುವುದರಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಗೌತಮ್ ಪೈ ಅವರು ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಎಂಬ ಸರಕಾರೇತರ ಸಂಸ್ಥೆಯಲ್ಲಿ ಮಾರ್ಗದರ್ಶಕ ಹಾಗೂ ಟ್ರಸ್ಟಿಯಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ.


ಶ್ರೀ. ಗೌತಮ್ ಜಾನ್
ಶ್ರೀ. ಗೌತಮ್ ಜಾನ್ ವಕೀಲರಾಗಿ ವಿಶೇಷವಾಗಿ ಬೌದ್ಧಿಕ ಆಸ್ತಿ ಕಾನೂನುಗಳ ಮೇಲೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅದರ ಬಳಿಕ, ಅವರು ಅಹಾರ ಉದ್ಯಮದಲ್ಲಿ ಒಬ್ಬ ಉದ್ಯಮಿಯಾಗಿದ್ದರು, ಸ್ವಲ್ಪ ಸಮಯ ಕೃಷಿಕರಾಗಿದ್ದರು, ಒಂದು ದೊಡ್ಡ ಕಂಪೆನಿಯ ಗಾಲಿಯಂತ್ರದಂತಹ ವ್ಯವಸ್ಥೆಯಲ್ಲಿ ಒಬ್ಬ ಪುಟ್ಟ ಚಕ್ರವಾಗಿ ಕೆಲಸ ನಿರ್ವಹಿಸಿದರು ಮತ್ತು ಪ್ರಸ್ತುತ ಶಿಕ್ಷಣ ಮತ್ತು ಪ್ರಕಟಣೆ ಕ್ಷೇತ್ರದೊಳಗಿನ ಲಾಭ ರಹಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವರು. ಅವರು ಅಕ್ಷರ ಫೌಂಡೇಷನ್ ನಲ್ಲಿ ಕರ್ನಾಟಕ ಕಲಿಕಾ ಪಾಲುದಾರಿಕೆಯ ನಿರ್ಮಾಣಕ್ಕೆ ಸಹಾಯ ಮಾಡುತ್ತಾ ಅದರ ಮುಖ್ಯಸ್ಥರಾಗಿ ಮುನ್ನಡೆಸುತ್ತಿರುವರು –ಇದೊಂದು ಅನುಕೂಲ ಗರಿಷ್ಟಗೊಳಿಸುವಿಕೆ, ನೀತಿ ಮತ್ತು ವಕೀಲಿ ಯೋಜನೆಯಾಗಿರುತ್ತದೆ. ಇದರಲ್ಲಿ ಅವರು ದತ್ತಾಂಶ ಮತ್ತು ತಂತ್ರಜಾÕನ ಕಾರ್ಯಗಳನ್ನಲ್ಲದೆ, ಸಾಂಸ್ಥಿಕ ಕಾರ್ಯತಂತ್ರವನ್ನು ಕೂಡಾ ನಿರ್ವಹಿಸುತ್ತಿರುವರು. ಹಿಂದೆ ಪ್ರಥಮ್ ನೊಂದಿಗೆ ಕೆಲಸ ಮಾಡುತ್ತಿರುವಾಗ ಅದರ ಸಾಮಾಜಿಕ ಮಾದ್ಯಮ ಮತ್ತು ಸಮುದಾಯ ಕಾರ್ಯತಂತ್ರ ಹಾಗೂ ಮಕ್ಕಳ ಪುಸ್ತಕ ಪ್ರಕಾಶನದ ಮುಕ್ತ ಮೂಲಗಳ ಮಾದರಿಗಳ ಮೇಲೆ ಕೆಲಸ ಮಾಡಿದ್ದರು. ಪ್ರಸ್ತುತ ಅವರು ಪ್ರಥಮ್ ಪುಸ್ತಕಗಳು, ಇನ್ ಕ್ಲೂಸಿವ್ ಪ್ಲಾನೆಟ್ ಸೆಂಟರ್ ಫಾರ್ ಡಿಸೆಬಿಲಿಟಿ ಏಂಡ್ ಪಾಲಿಸಿ (Inclusive Planet Centre for Disability and Policy), ಭಾರತದಲ್ಲಿ ಶಾಲೆಗಳು ಮತ್ತು ಶಿಕ್ಷಕರು ಫಲಿತಾಂಶಗಳಿಗಾಗಿ ಪ್ರಯೋಗಶೀಲರಾಗುವುದು-ಸ್ಟರ್ ಎಜುಕೇಷನ್ (STIR Education) ಮತ್ತು ಚಿಲ್ಡ್ರನ್ಸ್ ಲವ್ ಕ್ಯಾಸಲ್ ಟ್ರಸ್ಟ್ (Children’s Love castles Trust) ಗಳಿಗೆ ಸಲಹಗಾರರಾಗಿರುವರು. ಮುದ್ರಣ ಅಂಗವಿಕಲತೆಯಲ್ಲಿ ಕೆಲಸ ಮಾಡಿದ ಇನ್ ಕ್ಲೂಸಿವ್ ಪ್ಲಾನೆಟ್ ಗೆ ಅವರು ಸಲಹಗಾರರಾಗಿರುವರು. ಈ ಅವಧಿಯಲ್ಲಿ ಅವರು ಕಾನೂನು, ಅಹಾರ ಮತ್ತು ಸಾಮಾಜಿಕ ಉದ್ಯಮಶೀಲತೆಯಲ್ಲಿ ಸಣ್ಣ ಪ್ರಮಾಣದ ಆರಂಭಿಕ ಯೋಜನೆಗಳಿಗೆ ಸಲಹೆ ನೀಡಿರುವರು ಹಾಗೂ ವಿಕಿಮಿಡಿಯಾ ಭಾರತ ವಿಭಾಗದ ಸ್ಥಾಪಕ ಮಂಡಳಿ ಸದಸ್ಯರಾಗಿರುವರು. ಜ್ಞಾನ ಮತ್ತು ಮಾಹಿತಿಗೆ ಅನ್ವಯಿಸಿದಂತೆ ‘ಅವಕಾಶ’/ಅವರ ಅದಮ್ಯ ಉತ್ಸಾಹವಾಗಿದೆ.
