
ಅಶೋಕ್ ಕಾಮತ್
ಅಧ್ಯಕ್ಷರು
ಅಶೋಕ್ ಕಾಮತ್ ರವರು 2003 ರಿಂದ ಅಕ್ಷರ ಫೌಂಡೇಶನ್ ನ ಮೆನೇಜಿಂಗ್ ಟ್ರಸ್ಟೀ ಯಾಗಿದ್ದರು, ಬಳಿಕ ಜುಲೈ 1, 2008 ರಿಂದ ಅಧ್ಯಕ್ಷರಾಗಿರುವರು. ಅವರು 2003 ರಿಂದಲೇ ಅಕ್ಷರ ಫೌಂಡೇಶನ್ ನ ಕಾರ್ಯತಂತ್ರಾತ್ಮಕ ಯೋಜನೆ, ವಿಶ್ಲೇಷಣೆ ಮತ್ತು ಕಾರ್ಯಕ್ರಮಗಳ ವಿಸ್ತರಣೆಯಲ್ಲಿ ಸಕ್ರಿಯವಾಗಿ ತೂಡಗಿಸಿಕೊಂಡಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ.) ಮುಂಬಯಿಯ ಹಳೆ ವಿದ್ಯಾರ್ಥಿಯಾಗಿರುವ ಅವರು ಅನಾಲೋಗ್ ಡಿವೈಸಸ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕಾರ್ಫೊರೇಟ್ ವಲಯದ ಒಂದು ಯಶಸ್ವೀ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಆಯ್ಕೆ ಮಾಡಿದರು. ಅವರು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ನಡೆಸಿದ ವಿವಿಧ ಉಪಕ್ರಮಗಳಿಗೆ ಮತ್ತು ಕೊಡುಗೆಗಳಿಗೆ ಅವರು ಕಲಿತ ವಿದ್ಯಾ ಸಂಸ್ಥೆಯಾದ ಐ.ಐ.ಟಿ. ಮುಂಬಯಿ ಯು 2013 ರಲ್ಲಿ ಗಣ್ಯ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಶೋಕ್ ರವರು ಪ್ರತಿಯೊಂದು ಮಗುವಿನ ಕೈಯಲ್ಲೊಂದು ಪುಸ್ತಕವಿರಬೇಕೆಂಬ ಗುರಿಯಿರುವ ಪ್ರಥಮ್ ಬುಕ್ಸ್ ನ ಸ್ಥಾಪಕ ಟ್ರಸ್ಟೀ ಕೂಡಾ ಆಗಿರುವರು.


ಶ್ರೀಮತಿ ಸುಜೇನ್ ಸಿಂಗ್
ಟ್ರಸ್ಟೀ
ಸುಜೇನ್ ಸಿಂಗ್ ರವರು ಅಕ್ಷರ ಫೌಂಡೇಷನ್ ನೊಂದಿಗೆ 2003 ರಿಂದ ತಮ್ಮನ್ನು ತೊಡಗಿಸಿಕೊಂಡಿರುವರು. ಒಬ್ಬ ಮೆನೇಜ್ ಮೆಂಟ್ ಪದವೀದರೆಯಾಗಿರುವ ಅವರಿಗೆ ಜಾಹಿರಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ 12 ವರ್ಷಗಳ ಅನುಭವವಿದೆ. ಅಕ್ಷರ ಫೌಂಡೇಷನ್ ನ ಕಾರ್ಯತಂತ್ರಾತ್ಮಕ ಯೋಜನೆ ಮತ್ತು ಅಕ್ಷರದ ಮಾರುಕಟ್ಟೆ ಸಂವಹನ ಅಗತ್ಯಗಳನ್ನು ನಿರ್ವಹಿಸುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವರು ಅವರು ಪ್ರಥಮ್ ಬುಕ್ಸ್ ನ ಅಧ್ಯಕ್ಷೆ ಕೂಡಾ ಆಗಿದ್ದು ಯುನೈಟೆಡ್ ವೇ, ಬೆಂಗಳೂರಿನ ಆಡಳಿತ ಮಂಡಳಿ ಸದಸ್ಯರಾಗಿರುವರು.


ಶ್ರೀಮತಿ ರೇಖಾ ಎಮ್, ಮೆನನ್
ಟ್ರಸ್ಟೀ
ರೇಖಾ ರವರು ಅಕ್ಷರ ಫೌಂಡೇಶನ್ ನೊಂದಿಗೆ 2003ರಿಂದ ತಮ್ಮನ್ನು ತೊಡಗಿಸಿಕೊಂಡಿರುವರು. ಅವರು ಅಕ್ಸೆಂಚರ್ ನ ಗ್ರೋಥ್ ಮಾರ್ಕೆಟ್ಸ್ (Growth Markets)ನ ಮಾನವ ಸಂಪನ್ಮೂಲಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿರುವರು (ಏಷಿಯಾ ಪ್ಯಾಸಿಫಿಕ್, ಮಧ್ಯಪ್ರಾಚ್ಯ, ಆಫ್ರಿಕಾ, ರಷಿಯಾ, ಟರ್ಕಿ ಮತ್ತು ಲ್ಯಾಟಿನ ಅಮೆರಿಕಾ). ಅವರು ಅಕ್ಸೆಂಚರ್ ನ ಜಾಗತಿಕ ಕಾರ್ಪೋರೇಟ್ ಪೌರತ್ವ ಪರಿಷತ್ (Accenture’s Global Corporate Citizenship Council) ನ ಒಬ್ಬ ಸದಸ್ಯರು ಕೂಡಾ ಆಗಿರುವರು. ರೇಖಾ ರವರಿಗೆ 24 ವರ್ಷಕ್ಕಿಂತಲೂ ಹೆಚ್ಚಿನ ಉದ್ಯಮದ ಅನುಭವವಿದೆ. ಅವರು ಪ್ರಥಮ್ ಬುಕ್ಸ್ ನ ಸಹ ಸ್ಥಾಪಕಿ ಮತ್ತು ಟ್ರಸ್ಟೀ ಯಾಗಿರುವುದನ್ನು ಒಳಗೊಂಡು ಅನೇಕ ಲಾಭ ರಹಿತ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿರುವರು.


ಶ್ರೀ ಆರ್. ಧೀರೇಂದ್ರ
ಟ್ರಸ್ಟೀ
ಶ್ರೀ ಆರ್. ಧೀರೇಂದ್ರ ರವರು ಮುಂಚೂಣಿಯಲ್ಲಿರುವ ಮೌಲ್ಯಮಾಪನ ಸೇವೆಗಳ ಒಂದು ಕಂಪೆನಿಯಾಗಿರುವ ಎಜುಇಕ್ವಿಟಿ ಕ್ಯಾರೀರ್ ಟೆಕ್ನೋಲಾಜೀಸ್ (CEO of Eduquity Career Technologies) ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು ಅವರು ಅಕ್ಷರ ಫೌಂಡೇಷನ್ ನ ಆರಂಭದಲೇ ಅದರ ಆಡಳಿತ ಮಂಡಳಿಯಲ್ಲಿರುವರು.


ಆಯುಕ್ತರು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ
ಆಯುಕ್ತರು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ –ಇವರು ಮಂಡಳಿಯ ಪದ ನಿಮಿತ್ತ ಟ್ರಸ್ಟೀ ಆಗಿರುವರು.


ಶ್ರೀ ನಿಶಿತ್ ಆಚಾರ್ಯ
ಟ್ರಸ್ಟೀ
ನಿಶಿತ್ ಆಚಾರ್ಯರವರು ಸಿಟಿಜೆನ್ಸ್ ಎಂಬ ಪ್ರಮುಖ ವಿಶ್ವವಿದ್ಯಾನಿಲಯ, ಸರ್ಕಾರಗಳು, ಪ್ರತಿಷ್ಠಾನಗಳು, ಮತ್ತು ಸಂಸ್ಥೆಗಳಿಗೆ ಅನ್ವೇಷಣೆ, ಉದ್ಯಮಶೀಲತೆ, ಹಾಗೂ ಪರೋಪಕಾರ ಕೌಶಲಗಳಲ್ಲಿ ಸಹಕಾರ ನೀಡುವ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಶ್ರೀ ಆಚಾರ್ಯರವರು ಪ್ರಸ್ತುತ ಪ್ರಮುಖ ಸಾಮಾಜಿಕ ಉದ್ಯೋಗ ಬಂಡವಾಳ ನಿಧಿ ಹೂಡುವ ಸಂಸ್ಥೆಯಾದ ಕ್ಯಾಲ್ವರ್ಟ್ ಫೌಂಡೇಶನ್ ನನ್ನು ಮುನ್ನಡೆಸುತ್ತಾ, ಫೋರ್ಭಸ್ ನಿಯತಕಾಲಿಕೆಗೆ ನಿಯಮಿತವಾಗಿ ಬರೆಯುತ್ತಾರೆ. ಅವರು ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ಮತ್ತು ಗೇಟ್ ವೇ ಹೌಸ್ ನಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ನಿಶಿತ್ ರವರು ಈ ಹಿಂದೆ ಇನ್ನೋವೇಷನ್ ಮತ್ತು ಎಂಟರಪ್ರಿನ್ಶಿಪ್ ನ ನಿರ್ದೇಶಕರಾಗಿ ಹಾಗೂ ಒಬಾಮ ಆಡಳಿತದಲ್ಲಿ ವಾಣಿಜ್ಯ ಕಾರ್ಯದರ್ಶಿಗೆ ಹಿರಿಯ ಸಲಹಾಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕೂ ಮುಂಚೆ, ಅನ್ವೇಷಣೆ, ಉದ್ಯಮಶೀಲತೆ, ಹಾಗು ಮಾನದಂಡ ವಿಷಯಗಳಲ್ಲಿ ಕೆಲಸ ಮಾಡುವ ಹೆಸರಾಂತ ಅಮೆರಿಕನ್ ಜನೋಪಕಾರಿ ಸಂಸ್ಥೆ ದೇಶಪಾಂಡೆ ಫೌಂಡೇಶನ್ ನಲ್ಲಿ, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಶ್ರೀ ರಾಜೀವ್ ಖೈತಾನ್
ಟ್ರಸ್ಟೀ
ಶ್ರೀ ರಾಜೀವ್ ಖೈತಾನ್ ರವರು ಖೈತಾನ್ ಮತ್ತು ಕಂ. ನ್ಯಾಯವಾದಿಗಳ ಸಂಸ್ಥೆಯ ಪಾಲುದಾರರು. ಖೈತಾನ್ ರವರು ಬೆಂಗಳೂರಿನ ಖೈತಾನ್ ಮತ್ತು ಕಂ. ನ್ಯಾಯವಾದಿ ಸಂಸ್ಥೆಯ ಸಾಂಸ್ಥಿಕ ಹಾಗು ವಾಣಿಜ್ಯ ಕಾನೂನು ವಿಭಾಗದಲ್ಲಿ ಮುಖ್ಯಸ್ಥರಾಗಿದ್ದಾರೆ. ಅವರಿಗೆ 30 ವರ್ಷದ ಸಾಮಾನ್ಯ ನ್ಯಾಯ ವೃತ್ತಿಯಲ್ಲಿ ಹಾಗು ವಿಶೇಷವಾಗಿ ವಾಣಿಜ್ಯ ಕಾನೂನಿನಲ್ಲಿ ವಿಫುಲ ಅನುಭವ ಇದೆ. ಅವರು ಸಾಂಸ್ಥಿಕ ಹಾಗು ವಾಣಿಜ್ಯ ಕಾನೂನು ಒಡಂಬಡಿಕೆ, ಸ್ಥಿರಾಸ್ತಿ ಮತ್ತು ಭೌದ್ಧಿಕ ಸಂಪತ್ತು ವಿಚಾರಗಳಲ್ಲಿ ವಿಶೇಷ ಪರಿಣಿತಿ ಹಾಗೂ ಅಪಾರ ಅನುಭವ ಹೊಂದಿದ್ದಾರೆ. ಅವರು ಭಾರತೀಯ ಹಾಗು ವಿದೇಶಿ ಸಂಸ್ಥೆಗಳಿಗೆ, ಬಂಡವಾಳ ಹೂಡಿಕೆದಾರರಿಗೆ, ಸಾಹಸ ಬಂಡವಾಳ ಬ್ಯಾಂಕ್ ಗಳಿಗೆ, ಖಾಸಗಿ ಬಂಡವಾಳ ನಿಧಿಗಳಿಗೆ ವಿವಿಧ ವಿಚಾರಗಳಲ್ಲಿ ಸಲಹೆ ನೀಡುತ್ತಿದ್ದಾರೆ. ಅವರಿಗೆ ಸ್ಥಿರಾಸ್ತಿ ನಿರ್ವಹಣೆ ವಿಷಯದಲ್ಲಿ ಅಪಾರ ಅನುಭವವಿದ್ದು, ಬಹಳಷ್ಟು ಪ್ರವರ್ತಕರಿಗೆ , ಭೂಮಿ ಯೋಜನೆ, ಭೂಮಿ ವಿನ್ಯಾಸ ಮತ್ತು ವಿಶ್ವಸ್ಥ ಮಂಡಳಿ ಕಾನೂನು ಪತ್ರ, ಉಯಿಲು, ಕೌಟುಂಬಿಕ ವ್ಯವಸ್ಥೆ ಮತ್ತು ಪಾಲು ಪಾರೀಖತ್ತು ವಿಚಾರಗಳಲ್ಲಿ ಕಾನೂನು ಸಲಹೆ ನೀಡುತ್ತಿದ್ದಾರೆ. ಕಲ್ಕತ್ತ ವಿಶ್ವವಿದ್ಯಾನಿಲಯದಿಂದ ಬಿ. ಕಾಂ ಮತ್ತು ಕಾನೂನು ಪದವಿ ಪಡೆದಿದ್ದಾರೆ. ಅವರು ಹಲವಾರು ಕಂಪನಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಕೆಲವು ಪಟ್ಟಿಯಲ್ಲಿಲ್ಲದ ಕಂಪನಿಗಳಲ್ಲಿ- EFD ಅಗ್ನಿಕೆ ಪ್ರೈವೇಟ್ ಲಿ. , ABC ಕನ್ಸಾಲಿಡೇಟೆಡ್ ಪ್ರೈವೇಟ್ ಲಿ., ಹಿಮತಸಿಂಗ್ಕಾ ವೊವನ್ಸ ಪ್ರೈವೇಟ್ ಲಿ., ಭಾರತ್ ಫ್ರಿಟ್ಝ ವರ್ನರ್ ಲಿ., ಹಿಮತಸಿಂಗ್ಕಾ ಹೋಲ್ಡಿಂಗ್ಸ್ NA ಕಂ., ಹಾಗು ಪಟ್ಟಿಯಲ್ಲಿರುವ – ಆನ್ ಮೊಬೈಲ್ ಗ್ಲೋಬಲ್ ಲಿ., ಮತ್ತು ಹಿಮತಸಿಂಗ್ಕಾ ಸೀಡ್ ಲಿ., - ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ. ಬೆಂಗಳೂರಿನ ಮಿಡ್-ಟೌನ್ ರೊಟರಿ ಸಂಸ್ಥೆಯ ಸದಸ್ಯ ಹಾಗೂ ಭಾರತೀಯ ಸಾಫ್ಟವೇರ್ ಪ್ರಾಡಕ್ಟ್ ಉದ್ಯೋಗ ರೌಂಡ್ ಟೇಬಲ್ – ಐಸ್ಪಿರಿಟ್ ನ ಸ್ವಯಂ ಸೇವಕನಾಗಿ, ಅದರ, ಭಾರತದ ಪಟ್ಟಿಯಲ್ಲಿನ ಇಂಡಿಯಾ ಸ್ಟೇ ಇನ್ ಇಂಡಿಯಾದ ಆಲೋಚನಾ ಬಳಗದ ಸದಸ್ಯರೂ ಆಗಿದ್ದಾರೆ.
