
ಶ್ರೀ. ಜೆ.ವಿ. ಶಂಕರ ನಾರಾಯಣ್
ಮುಖ್ಯಸ್ಥರು, ಕಾರ್ಯಾಚರಣೆಗಳು ಮತ್ತು ಸಮುದಾಯ ಅಭಿವೃದ್ಧಿ
ಶಂಕರ್ ರವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವರು ಮತ್ತು ಅವರು ಒಂದು ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಅಭಿವೃದ್ಧಿ ಕ್ಷೇತ್ರದತ್ತ ಆಕರ್ಷಿತರಾಗಿ ಆಕ್ಷನ್ ಏಡ್, ಕರ್ನಾಟಕದ ಯೋಜನೆಗಳೊಂದಿಗೆ ಕೆಲಸ ಮಾಡಿರುವರು. ಅವರು Social Initiative for Rural Empowerment, ನ NGO in Yadgiri, Karnataka ದ ಸ್ಥಾಪಕರಾಗಿರುವರು.


ಶ್ರೀಮತಿ ಕೆ. ವೈಜಯಂತಿ
.ಮುಖ್ಯಸ್ಥೆ, ಸಂಶೋಧನೆ ಮತ್ತು ಸಂಪನ್ಮೂಲ ಹಾಗು ಮೌಲ್ಯಮಾಪನ
ವೈಜಯಂತಿಯವರು ಫೌಂಡೇಶನ್ ನಲ್ಲಿ ಸಂಶೋಧನೆ ಮತ್ತು ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಒಬ್ಬ ತರಬೇತಿಗೊಂಡ ಅರ್ಥಶಾಸ್ತ್ರಜ್ಞೆಯಾಗಿರುವ ಅವರು ಅನ್ವಯಿಕ ಅರ್ಥಶಾಸ್ತ್ರದಲ್ಲಿ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (JNU) ಅಭಿವೃದ್ಧಿ ಅಧ್ಯಯನ ಕೇಂದ್ರದಿಂದ (Centre for Development Studies) ಎಮ್.ಫಿಲ್ ನ್ನು ಹೊಂದಿರುವರು. ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನ ಅವರು ಆರೋಗ್ಯ ಮತ್ತು ವಿಕೇಂದ್ರೀಕರಣ ಕ್ಷೇತ್ರದಲ್ಲಿ ಕೆಲಸ ಮಾಡಿರುವರು. ಅವರು ಭಾರತದ ಹಿನ್ನೆಲೆಯ ಶಿಕ್ಷಣದ ಆರಂಭಿಕ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಶಾಲಾ ಶಿಕ್ಷಣದ ವರೆಗೆ ವ್ಯಾಪಕವಾಗಿ ಕೆಲಸ ಮಾಡಿರುವರು. ಅವರ ಹೆಚ್ಚಿನ ಸಂಶೋಧನಾ ಕೆಲಸಗಳು ಪುರಾವೆ ಆಧಾರಿತ ಶಿಕ್ಷಣ ನೀತಿ ಸಂಶೋಧನಾ ಕ್ಷೇತ್ರಗಳಲ್ಲಿರುವುದು. ಅವರು 2009 ರಿಂದ ಅಸರ್ –ಕರ್ನಾಟಕದ (ASER- Karnataka) ಮುಖ್ಯಸ್ಥೆಯಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿರುವರು. ಅವರು ಕರ್ನಾಟಕ ಸರಕಾರದ ಪ್ರಾಥಮಿಕ ಶಿಕ್ಷಣ, ಮಾನವ ಅಭಿವೃದ್ಧಿ ಮತ್ತು ಆರಂಭಿಕ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆ (ECCE)ಗಳನ್ನೊಳಗೊಂಡ ಹಲವಾರು ಸಮಿತಿಗಳ ಸದಸ್ಯರಾಗಿರುವರು. ಕರ್ನಾಟಕದ ಪೂರ್ವ ಪ್ರಾಥಮಿಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ (ECCE) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ತಯಾರಿಯಲ್ಲಿ ಕೆಲಸ ನಿರೂಪಿಸಿರುವರು.


ಶುವೈಬಾ ರಹಮಾನ್
ಸಂಯೋಜನಾಧಿಕಾರಿ -ದಾನಿ ಸಂಬಂಧಗಳು
ಶುಯೇಬಾ ರಹಮಾನ್ ಅಕ್ಷರದೊಂದಿಗೆ 2006 ರಿಂದ ಕೆಲಸ ಮಾಡುತ್ತಿರುವರು ಮತ್ತು ಅವರು ದಾನಿ ಸಂಬಂಧಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಅಕ್ಷರದ ಜಾಲತಾಣ ವಿನ್ಯಾಸ, ನಿರ್ವಹಣೆ ಮತ್ತು ಪರಿಷ್ಕರಣೆಯ ಉಸ್ತುವಾರಿಕೆ ಮಾಡುವರು. ಅವರು ವಾರ್ಷಿಕ ವರದಿಯ ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆಗೆ ಕೂಡಾ ಜವಾಬ್ದಾರರಾಗಿರುವರು. ಶುಯೇಬಾರವರು ಅಂತರರಾಷ್ತ್ರೀಯ ವ್ಯಾಪಾರದಲ್ಲಿ ಆಸ್ಟ್ರೇಲಿಯಾದಿಂದ ಎಮ್.ಬಿ.ಎ. ಪಡೆದಿರುವರು.


ಶ್ರೀ ನಾಗರಾಜ್ ಪ್ರಭು
ಮುಖ್ಯಸ್ಥರು - ಗಣಿತ ಕಾರ್ಯಕ್ರಮ
ಶ್ರೀ ನಾಗರಾಜ್ ರವರು ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವೀಧರರು. ಇವರ ಹಿಂದಿನ ಅನುಭವವು ಅಸಂಖ್ಯಾತ ಅಮೆರಿಕಾ ನೆಲೆಯಾದ, ಪ್ರಾರಂಭಿಕ ಸಂಸ್ಥೆಗಳ ಜೊತೆ ಕೆಲಸ ಮಾಡಿ, ಅವರ ಶಾಖೆ ಭಾರತದಲ್ಲಿ ತೆರೆಯಲು ನೆರವಾಗಿದೆ. ಅವರು ಸಹಾ ಎಫ್ ಮತ್ತು ಬಿ ಮತ್ತು ಸ್ವಚ್ಚ ತಾಂತ್ರಿಕ ವಲಯದಲ್ಲಿ ವಾಣಿಜ್ಯೋದ್ಯಮಿಯಾಗಿದ್ದಾರೆ. ಸಾಮಾಜಿಕ ವಲಯದಲ್ಲಿ ಕೆಲಸ ಮಾಡಲು ಅವರಿಗೆ ಉತ್ಸಾಹವಿರುವುದರಿಂದ, ಹಲವಾರು ಸಿಎಸ್ಅರ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಪೋರೆಟ್ ವಲಯದಲ್ಲಿ 2 ದಶಕಗಳನ್ನು ಕ್ರಮಿಸಿರುವ, ಸಲಹೆಗಾರ ಹಾಗು ಉತ್ಪನ್ನ ಸಂಸ್ಥೆಗಳ ಮುಖ್ಯಸ್ಥರಾಗಿ, ಇವರು ಸಾಮಾಜಿಕ ಅಭಿವೃದ್ಧಿ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂದುವರೆಯಲು ನಿರ್ಧರಿಸಿ, ಅಕ್ಷರ ಅಕ್ಷರ ಫೌಂಡೇಶನ್ ಸೇರಿದ್ದಾರೆ. ಅಕ್ಷರ ಫೌಂಡೇಶನ್ ಲ್ಲಿ ಇವರು ಪ್ರಸ್ತುತ ಗಣಿತ ಸಂಪನ್ಮೂಲ ತಂಡವನ್ನು ಮುನ್ನಡೆಸುತ್ತಾ, ಗಣಿತ ಕಲಿಕಾ ಆಂದೋಲನದ ರೂವಾರಿಯಾಗಿದ್ದಾರೆ.


ಸುಶ್ಮಿತಾ ಅನಂತ್
ಸಾಮಾಜಿಕ ಮಾಧ್ಯಮ ಸಂಯೋಜಕರು
ಜಾಹಿರಾತು ಜಗತ್ತಿನಲ್ಲಿ ಕ್ರಿಯಾಶೀಲರಾಗಿ ಹಲವು ವರ್ಷಗಳನ್ನು ಕಳೆದ ಸುಶ್ಮಿತಾರವರು ಅಕ್ಷರ ಫೌಂಡೇಶನ್ಗೆ ಸೇರ್ಪಡೆಯಾದರು. ಇಲ್ಲಿ ಅಕ್ಷರದ ಬಳಗ ಮತ್ತು ಅದರ ಕಾರ್ಯಚಟುವಟಿಕೆಗಳನ್ನು ಸಾಮಾಜಿಕ ಜಾಲದಲ್ಲಿ ಸೇರ್ಪಡೆಗೊಳಿಸಲು ಸಹಕರಿಸುತ್ತಿದ್ದಾರೆ. ಅವರು ಸಂವಹನ ಶಾಸ್ತ್ರದಲ್ಲಿ ಉನ್ನತ್ತ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಅಕ್ಷರದ ಬಾಹ್ಯ ಚಟುವಟಿಕೆಗಳು ಮತ್ತು ಆಂದೋಲನಗಳಿಗೆ ಬೇಕಾದ ಕೌಶಲಭರಿತ ಮತ್ತು ಯೋಜಿತ ಕಾರ್ಯಗಳನ್ನು ಪರಿಕಲ್ಪನಾತ್ಮಕಗೊಳಿಸುವಲ್ಲಿ ಅವರು ಸಹಕರಿಸುತ್ತಿದ್ದಾರೆ.


ಆಶಾ ಶರತ್
ಸಂಯೋಜನಾಧಿಕಾರಿ -ದಾನಿ ಸಂಬಂಧಗಳು
ಆಶಾರವರು ಮಾಹಿತಿ ವಿಜ್ಞಾನದಲ್ಲಿ ಪದವಿಯನ್ನು ಹೊಂದಿರುವರು ಮತ್ತು ಅಕ್ಷರ ಫೌಂಡೇಷನ್ ಗೆ ನಿಧಿ ಸಂಗ್ರಹಣೆ ತಂಡದ ಭಾಗವಾಗಿ ಸೇರುವ ಮುನ್ನ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಕೆಲಸ ಮಾಡಿರುವರು. ಅವರು ಅಕ್ಷರದಲ್ಲಿ ಸ್ವಯಂ ಸೇವಾ ಚಟುವಟಿಕೆಗಳನ್ನು ಕೂಡಾ ಸಂಯೋಜಿಸುತ್ತಾರೆ.


ಏಂಜಲಿನಾ ಗ್ರೆಗೊರಿ
ಜಿಲ್ಲಾ ಸಂಯೋಜನಾಧಿಕಾರಿ
ಏಂಜಲಿನಾ ರವರು ಪದವೀದರೆ ಮತ್ತು ಅದರೊಂದಿಗೆ ಡಿ.ಎಡ್. ಮತ್ತು ಜೆ.ಒ.ಸಿ ಪದವಿಯನ್ನು ಹೊಂದಿರುವರು. ಅವರಿಗೆ ಶಾಲಾ ಪೂರ್ವ ಮತ್ತು ಪ್ರಾಥಮಿಕ ಶಾಲೆಗಳೆರಡಲ್ಲೂ ಶಿಕ್ಷಕಿಯಾಗಿ ಬೋಧನೆಯ ಶ್ರೀಮಂತ ಅನುಭವವಿದೆ. ಅವರು 6 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಕೂಡ ಕೆಲಸ ಮಾಡಿರುವರು. ಏಂಜಲಿನಾ ರವರು ಕೊಪ್ಪಳ ಜಿಲ್ಲೆಯÀÄ ಕುಷ್ಟಗಿ, ಗದಗ ಜಿಲ್ಲೆಯ ಮುಂಡರಗಿಯಲ್ಲಿ ಅಕ್ಷರದ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವರು.


ಲಕ್ಷ್ಮಿ ಮೋಹನ್
ದಾಖಲೀಕರಣ
ಲಕ್ಷ್ಮಿ ಮೋಹನ್ ಅಕ್ಷರ ಫೌಂಡೇಷನ್ ಜೊತೆ 9 ವರ್ಷಗಳಿಂದ ಇದ್ದಾರೆ-ಅವರು ಪ್ರಮುಖವಾಗಿ ಕಾರ್ಯಕ್ರಮಗಳ ದಾಖಲಾತಿಕರಣ, ಮಾಸಿಕ ವರದಿಗಳು ಮತ್ತು ಪುನರವಲೋಕನಗಳು ಮತ್ತು ಸಂಸ್ಥೆಯ ಕೆಲಸದ ಹಲವು ಮಗ್ಗಲುಗಳ ಕುರಿತು ಬರೆಯುತ್ತಾರೆ. ಅವರು ಒಬ್ಬ ಸ್ವತಂತ್ರ ಪತ್ರಕರ್ತರಾಗಿದ್ದರು.


ಡಾ. ಕಲಾವತಿ. ಬಿ. ಕೆ.
ಮುಖ್ಯಸ್ಥರು, ಇಂಗ್ಲೀಷ್ ಕಾರ್ಯಕ್ರಮ
ಕಲಾವತಿಯವರು 32 ವರ್ಷಗಳಿಂದ ಉತ್ತಮ ಶಿಕ್ಷಕಿಯಾಗಿ ಮತ್ತು ಶಿಕ್ಷಣತಜ್ಞರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ, , ಮಾರ್ಗದರ್ಶನ, ಹಾಗು ಆಡಳಿತ – 13 ವರ್ಷ- ಶಿಕ್ಷಕರಿಗೆ ಶಿಕ್ಷಕರಾಗಿ, ಮತ್ತು 6 ವರ್ಷ ಸಂಶೋಧನೆಯಲ್ಲಿ (ಎಂ. ಫಿಲ್ ಹಾಗು ಪಿಚ್ ಡಿ ಹೊರತುಪಡಿಸಿ) 10 ವರ್ಷ ಮಾರ್ಗದರ್ಶನ ಮತ್ತು ಸಲಹಾಗಾರರಾಗಿ, ಮತ್ತು 2 ವರ್ಷ ಸಿಐಎಸ್ಈ ಯ ಶಿಕ್ಷಕ ವಿಧ್ಯಾಭ್ಯಾಸ ಕಾರ್ಯಕ್ರಮದ ಶೈಕ್ಷಣಿಕ ಕೊ-ಆರ್ಡಿನೇಟರ್ ಆಗಿದ್ದರು. ಅವರು ಪ್ರಸ್ತುತ ಅನ್ವೇಷಣ ಪ್ರತಿಷ್ಠಾನದ, ಶೈಕ್ಷಣಿಕ, ಸಾಮಾಜಿಕ, ಮತ್ತು ಪರಿಸರ ಪುನರ್-ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ, ಸ್ವಯಂ ಸೇವಾ ಸಂಸ್ಥೆಯ ಗೌರವ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಅವರು ಎಂ,ಇಡಿ. ಪದವಿಯಲ್ಲಿ ಚಿನ್ನದ ಪದಕ ಪಡೆದು, ವಿದ್ಯಾರ್ಥಿಗಳ ಕಲಿಕೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟಿದ್ದಾರೆ. ಅವರು ಸಂಶೋಧನಾ ಕ್ರಮಶಾಸ್ತ್ರ, ಸಂವಹನ ಕ್ರಿಯೆ ಮತ್ತು ತಾಂತ್ರಿಕತೆ, ಶೈಕ್ಷಣಿಕ ಅಂಕಿ-ಅಂಶ, ಶೈಕ್ಷಣಿಕ ಮನಶಾಸ್ತ್ರ ವಿಕಸನ ಮನಶಾಸ್ತ್ರ, ಸಾಂಸ್ಥಿಕ ಮನಶಾಸ್ತ್ರ ಸಾಂಸ್ಥಿಕ ನಡವಳಿಕೆ, ಇಂಗ್ಲೀಷ್ ಮತ್ತುಸಮಾಜ ಶಾಸ್ತ್ರ ವಿಷಯದ ಭೋಧನಾ ಸಂಶೋಧನಾ ಕ್ರಮಶಾಸ್ತ್ರ ದಲ್ಲಿ ವಿಶೇಷ ಪರಿಣಿತಿ ಹೊಂದಿರುತ್ತಾರೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಿ ಜರ್ನಲ್ಗಳಲ್ಲಿ ಇವರ ಪ್ರಬಂಧಗಳು ಪ್ರಕಟವಾಗಿವೆ. ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಇವರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು 30ಕ್ಕೂ ಹೆಚ್ಚು ವಿಚಾರ ಸಂಕಿರಣ/ ಸಮ್ಮೇಳನ/ ಕಮ್ಮಟಗಳಲ್ಲಿ ಭಾಗಿಯಾಗಿದ್ದಾರೆ. ಇವರು ನ್ಯೂ ಹೊರಿಝಾನ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು.


ಶ್ರೀಮತಿ ಪುಷ್ಪಾ ತಂತ್ರಿ
ಹಿರಿಯ ಕಾರ್ಯಕ್ರಮ ನಿರ್ವಾಹಕರು- ಡಿಜಿಟಲ್ ಕಲಿಕೆ
ಪುಷ್ಪಾರವರು ಐಬಿಎಂ ಕಂಪನಿಯಲ್ಲಿ ಪ್ರಾಜೆಕ್ಟ್ ನಿರ್ವಾಹಕ, ತಾಂತ್ರಿಕ ಪರಿಹಾರ ಶಿಲ್ಪಿ, ಹಾಗೂ ಮಾರುವ-ಮುನ್ನ ಶಿಲ್ಪಿ. ಇತ್ಯಾದಿ ಸ್ಥಾನಗಳಲ್ಲಿ 17 ವರ್ಷಗಳಿಗೂ ಹೆಚ್ಚು ಪರಿಣಿತಿ ಪಡೆದ್ದಿದ್ದಾರೆ. 2015 ರಲ್ಲಿ ಸಾಂಸ್ಥಿಕ ವಲಯದಿಂದ ದೂರವಾಗಿ, ಟೀಚ್ ಫಾರ್ ಇಂಡಿಯಾ ( ಟಿಎಫ್ಐ)ಯಲ್ಲಿ ಫೆಲೋ ಆಗಿ 2015-17ರವರೆಗೂ ತರಬೇತಿ ಪಡೆದರು. ಈ ಸಮಯದಲ್ಲಿ, ಅವರು, ಇಂಗ್ಲೀಷ್ ಮತ್ತು ಗಣಿತ ವಿಷಯವನ್ನು ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ 3 ಮತ್ತು 4 ನೇ ತರಗತಿಗಳ 34 ಮಕ್ಕಳಿಗೆ ಬೋಧಿಸಿದರು. ಅವರು ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಾಗೂ ಪುಣೆಯ ಸಿಂಬಿಯಾಸಿಸ್ ಸಂಸ್ಥೆಯ ಎಂಬಿಎ ಪಧವೀಧರರು. ಇವರು, ಅಕ್ಷರದ ಗಣಿತ ಕಲಿಕಾ ಆಂದೋಲನದ– “ಬಿಲ್ಡಿಂಗ್ ಬ್ಲಾಕ್ಸ್ “ನ ಜವಾಬ್ದಾರರಾಗಿದ್ದಾರೆ.
