ಸ್ಮಾರ್ಟ್ ಫೋನ್ ನಲ್ಲಿರುವ Building Blocks ಗೇಮ್ಸ್ ಆಡಿ
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ
ಬಹುಮಾನ ಗೆಲ್ಲಿ!
ಹೊಸ ಪಾತ್ರ ಚಿತ್ರಿಸಿ – ಅದನ್ನು ಜೀವಂತವಾಗಿಸಿ.
ಕಲ್ಪನೆ ಮಾಡಿ, ಚಿತ್ರಿಸಿ, ಬಣ್ಣ ತುಂಬಿರಿ
ನೀವು ರಚಿಸಿದ ಪಾತ್ರ ಗೇಮ್ ನೊಳಗೆ ಬರಲಿದೆ
ಏನು ಮಾಡಬೇಕು?
• Play Store ಮೂಲಕ Building Blocks ಗೇಮ್ ಡೌನ್ಲೋಡ್ ಮಾಡಿ.
• ಒಂದು ಅವತಾರ್ ಆಯ್ಕೆ ಮಾಡಿ, ಒಂದಷ್ಟು ಗೇಮ್ಸ್ ಆಡಿ, ಅಲ್ಲಿ ಬರೋ ಪಾತ್ರಗಳನ್ನು ನೋಡಿ.
• ಹೊಸ ಗೇಮ್‌ಗೆ ಹೊಸ ಪಾತ್ರ ರಚಿಸಿ. ಅದು ಸೂಪರ್ ಹೀರೋ, ಪ್ರಾಣಿ, ರೋಬೋಟ್ ಏನಾದರೂ ಆಗಿರಬಹುದು. ಅದನ್ನು ಒಂದು ಕಾಗದದಲ್ಲಿ ಚಿತ್ರಿಸಿ, ಬಣ್ಣ ತುಂಬಿಸಿ.
ಏನು ಮಾಡಬೇಕು?
ನೀವು ರಚಿಸಿದ ಚಿತ್ರದ ಫೋಟೋ, ನಿಮ್ಮ ಹೆಸರು, ತರಗತಿ, ಶಾಲೆಯ ಹೆಸರು, ಪೋಷಕರ ಹೆಸರು, ಸ್ಥಳ ಮತ್ತು ನಿಮ್ಮ Building Blocks ಗೇಮ್ ನ Avatar ನಮೂದಿಸಿ.
9845079590
ಈ ಸಂಖ್ಯೆಗೆ WhatsApp ಮಾಡಿ
ನೆನಪಿಡಿ
• ಈ ಚಿತ್ರ ಸ್ಪರ್ಧೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2025
ನಿಯಮಗಳು ಮತ್ತು ಷರತ್ತುಗಳು
1. ಅರ್ಹತೆ
• 1 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
• ಪ್ರತಿ ವಿದ್ಯಾರ್ಥಿಯು ಕೇವಲ ಒಂದು ಕಲಾಕೃತಿಯನ್ನು ಮಾತ್ರ ಸಲ್ಲಿಸಬೇಕು.
2. ವಿಷಯ
• ಕಲಾಕೃತಿಯು, ಪೋಸ್ಟರ್‌ನಲ್ಲಿ ತಿಳಿಸಲಾದ ವಿಷಯಕ್ಕೆ ಅನುಗುಣವಾಗಿರಬೇಕು.
• ವಿಷಯಕ್ಕೆ ಹೊಂದಿಕೆಯಾಗದ ಕಲಾಕೃತಿಗಳನ್ನು ಸ್ವೀಕರಿಸುವುದಿಲ್ಲ.
3. ಕಲಾಕೃತಿ ನಿಯಮಗಳು
• ಕಲಾಕೃತಿ ಸ್ವಂತದ್ದಾಗಿರಬೇಕು ಮತ್ತು ವಿದ್ಯಾರ್ಥಿಯಿಂದಲೇ ರಚಿಸಲ್ಪಟ್ಟಿರಬೇಕು
• ಯಾವುದೇ ಸಾಮಾಗ್ರಿಗಳನ್ನು (ಕ್ರಯಾನ್ಸ್, ಬಣ್ಣ, ಪೆನ್ಸಿಲ್, ಮಾರ್ಕರ್ ಇತ್ಯಾದಿ) ಬಳಸಬಹುದು.
• ಯಾವುದೇ ಡಿಜಿಟಲ್ ಅಥವಾ AI ಮೂಲಕ ಮಾಡಿದ (AI-generated) ಕಲಾಕೃತಿಗಳನ್ನು ಸ್ವೀಕರಿಸಲಾಗುವುದಿಲ್ಲ.
4. ಸಲ್ಲಿಕೆ
• ಅರ್ಜಿಯನ್ನು ಡಿಸೆಂಬರ್ 31, 2025 ರೊಳಗೆ ವಾಟ್ಸ್ಯಾಪ್ ಮೂಲಕ (ಈ ಸಂಖ್ಯೆಗೆ 98450 79590) ಕಡ್ಡಾಯವಾಗಿ ಸಲ್ಲಿಸಬೇಕು.
• ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು
a) ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆ ಮತ್ತು ಸ್ಥಳ
b) ಪೋಷಕರ ಹೆಸರು
c) ವಿದ್ಯಾರ್ಥಿಯು ಆಯ್ಕೆ ಮಾಡಿದ ಬಿಲ್ಡಿಂಗ್ ಬ್ಲಾಕ್ಸ್ Avatar
• ತಡವಾಗಿ ಅಥವಾ ಅಪೂರ್ಣವಾಗಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
5. ನಿರ್ಣಯ
• ಅಕ್ಷರ ಫೌಂಡೇಶನ್ ನೇಮಕ ಮಾಡಿದ ತೀರ್ಪುಗಾರರ ಸಮಿತಿಯು ಕಲಾಕೃತಿಗಳನ್ನು ಪರಿಶೀಲಿಸುತ್ತದೆ.
• ಅರ್ಜಿಗಳನ್ನು ಸೃಜನಶೀಲತೆ, ಸ್ವಂತಿಕೆ, ಮತ್ತು ಪ್ರಸ್ತುತಿಯ ಆಧಾರದ ಮೇಲೆ ಮೌಲ್ಯ ಮಾಪನ ಮಾಡಲಾಗುತ್ತದೆ.
• ತೀರ್ಪುಗಾರರ ಸಮಿತಿಯ ತಿರ್ಮಾನವೇ ಅಂತಿಮವಾಗಿರುತ್ತದೆ.
6. ಬಹುಮಾನಗಳು
• ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ವಾಟ್ಸ್ಯಾಪ್ ಮೂಲಕ ಇ-ಪ್ರಮಾಣಪತ್ರ ನೀಡಲಾಗುವುದು.
• ಪ್ರತಿ ವಿಭಾಗದಲ್ಲಿ (1-4 ನೇ ತರಗತಿ ಮತ್ತು 5-8ನೇ ತರಗತಿ) ವಿಜಯಿ ಕಲಾಕೃತಿಯನ್ನು ‘ಬಿಲ್ಡಿಂಗ್ ಬ್ಲಾಕ್ಸ್’ ಆ್ಯಪ್‌ನಲ್ಲಿ ಬಳಸಲಾಗುವುದು. ಆ್ಯಪ್‌ನಲ್ಲಿ ಮಗುವಿನ ಹೆಸರನ್ನು ಉಲ್ಲೇಖಿಸಿಲಾಗುವುದು.
• ವಿಜೇತರಿಗೆ ಬಹುಮಾನಗಳನ್ನು ನೀಡಲಾಗುವುದು
• ಆಯ್ಕೆ ಕಲಾಕೃತಿಗಳನ್ನು ಅಕ್ಷರ ಫೌಂಡೇಶನ್ ಆನ್‌ಲೈನ್‌ನಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಪ್ರದರ್ಶಿಸಬಹುದು.
7. ಮಾಲೀಕತ್ವ ಮತ್ತು ಬಳಕೆಗೆ ಒಪ್ಪಿಗೆ
• ಕಲಾಕೃತಿಯ ಮಾಲೀಕತ್ವವು ವಿದ್ಯಾರ್ಥಿಗೆ ಸೇರಿದೆ. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ, ನಿಮ್ಮ ಚಿತ್ರಗಳನ್ನು ‘ಅಕ್ಷರ ಫೌಂಡೇಶನ್’, ‘ಬಿಲ್ಡಿಂಗ್ ಬ್ಲಾಕ್ಸ್’ ಆ್ಯಪ್‌ನಲ್ಲಿ, ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ಪ್ರಚಾರಕ್ಕಾಗಿ ಬಳಸಲು ಅನುಮತಿ ನೀಡುತ್ತದೆ (ನಿಮ್ಮ ಹೆಸರನ್ನು ಸಹ ಕಡ್ಡಾಯವಾಗಿ ನಮೂದಿಸಲಾಗುತ್ತದೆ).
• ಅರ್ಜಿಯನ್ನು ಸಲ್ಲಿಸುವುದರ ಮೂಲಕ, ಭಾಗವಹಿಸುವವರು ಮತ್ತು ಅವರ ಪೋಷಕರು/ಪಾಲಕರು ಶಾಲೆಯ ಮೂಲಕ ಕಲಾಕೃತಿಯನ್ನು ವಾಣಿಜ್ಯೇತರ ಶೈಕ್ಷಣಿಕ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ಛಾಯಾಚಿತ್ರ ತೆಗೆಯಲು, ಪ್ರಕಟಿಸಲು, ಅಥವಾ ಪ್ರದರ್ಶಿಸಲು ಸಹ ಅನುಮತಿ ನೀಡಬೇಕಾಗುತ್ತದೆ.
8. ನಡವಳಿಕೆ
• ನಕಲು ಮಾಡಲಾಗಿದೆ ಅಥವಾ ಬೇರೆಯವರಿಂದ ಮಾಡಲ್ಪಟ್ಟಿದೆ ಎಂದು ಕಂಡುಬಂದ ಯಾವುದೇ ಅರ್ಜಿಯನ್ನು ಅನರ್ಹಗೊಳಿಸಲಾಗುತ್ತದೆ.
• ಎಲ್ಲಾ ಸ್ಪರ್ಧಿಗಳು ಸ್ಪರ್ಧೆಯ ನಿಯಮಗಳನ್ನು ಅನುಸರಿಸಬೇಕು.
9. ಒಪ್ಪಂದ
ಅರ್ಜಿಯನ್ನು ಸಲ್ಲಿಸುವುದು ಎಂದರೆ ವಿದ್ಯಾರ್ಥಿಗಳು ಅಥವಾ ಪೋಷಕರು/ಪಾಲಕರು ಈ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರ್ಥ.



